ಅಸ್ತವ್ಯಸ್ತವಾದ ‘ಮೆಸ್ಸಿ’ ಕೋಲ್ಕತ್ತಾ ಕಾರ್ಯಕ್ರಮ; ವಿವೈಬಿಕೆ ಕ್ರೀಡಾಂಗಣದಲ್ಲಿ ಏನಾಯಿತು?

Date:

ಅರ್ಜೆಂಟೀನಾದ ಫುಟ್‌ಬಾಲ್‌ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ ನೀಡಿದ್ದರು. ‘ಅವರ ‘G.O.A.T. ಟೂರ್ ಆಫ್ ಇಂಡಿಯಾ-2025’ ಕಾರ್ಯಕ್ರಮವು ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರಿರಂಗನ್ (VYBK) ಕ್ರೀಡಾಂಗಣದಲ್ಲಿ ಶನಿವಾರ ಆಯೋಜನೆಗೊಂಡಿತ್ತು. ಆದರೆ, ಕಾರ್ಯಕ್ರಮವು ಸಂಪೂರ್ಣ ಅವ್ಯವಸ್ಥೆಗಳಿಂದ ಅಸ್ತವ್ಯಸ್ತಗೊಂಡಿತ್ತು. ಅವರನ್ನು ನೋಡಲು ಟಿಕೆಟ್‌ ಪಡೆದು ಬಂದಿದ್ದ ಅಭಿಮಾನಿಗಳು, ತಮ್ಮ ಸ್ಟಾರ್‌ ಆಟಗಾರನನ್ನು ನೋಡಲಾಗದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದ ಚುರ್ಚಿಗಳು ಸೇರಿದಂತೆ ನಾನಾ ಸಲಕರಣೆಗಳನ್ನು ಧ್ವಂಸಗೊಳಿಸಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ವೇದಿಕೆಯಲ್ಲಿಯೇ ಬಾಲಿವುಡ್‌ ನಟ ಶಾರುಖ್ ಖಾನ್, ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಬೇಕಿತ್ತು. ಚರ್ಚೆಗಳು ನಡೆಯಬೇಕಿತ್ತು. ಕೆಲವು ಪ್ರಮುಖ ಕಾರ್ಯಕ್ರಮಗಳು ಜರುಗಬೇಕಿತ್ತು. ಆದರೆ, ಕಾರ್ಯಕ್ರಮವು 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಮೊಟಕುಗೊಂಡಿತು. ಕ್ರೀಡಾಂಗಣದಿಂದ ಮೆಸ್ಸಿ ವಾಪಸ್‌ ತೆರಳಿದರು.

ಮೆಸ್ಸಿ ಭೇಟಿ ಮತ್ತು ಕಾರ್ಯಕ್ರಮದಲ್ಲಿ ಏನಾಯಿತು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೆಸ್ಸಿ ಮತ್ತು ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸೌರೆಜ್, ರೊಡ್ರಿಗೋ ಡಿ ಪಾಲ್ ಶನಿವಾರ ಮುಂಜಾನೆ ಕೋಲ್ಕತ್ತಾಗೆ ಬಂದರು. ಅಸ್ಸಿಯನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಕೋಲ್ಕತ್ತಾದ ಬೀದಿಗಳಲ್ಲಿ ಮಧ್ಯರಾತ್ರಿಯ ನಂತರವೂ ಕಾದುಕುಳಿದ್ದರು.

ಅವರು ಬೆಳಗ್ಗೆ 10 ಗಂಟೆಗೆ ಕೋಲ್ಕತ್ತಾದ ಲೇಕ್ ಟೌನ್‌ನಲ್ಲಿರುವ ತಮ್ಮ 70 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಬೇಕಿತ್ತು. ಆದರೆ, ಅವರು ಲೇಕ್‌ ಟೌನ್‌ಗೆ ಖುದ್ದು ಹಾಜರಾಗಲಿಲ್ಲ. ಬದಲಾಗಿ, ಹೋಟೆಲ್‌ನಿಂದಲೇ ಅನಾವರಣ ಮಾಡಿದರು.

ಆ ನಂತರ, ಕೋಲ್ಕತ್ತಾದ ಹಯಾತ್ ರೀಜೆನ್ಸಿಯಲ್ಲಿ ನಟ ಶಾರುಖ್ ಖಾನ್ ಮತ್ತು ಮೋಹನ್ ಬಗಾನ್ ಸೂಪರ್ ಜೈಂಟ್ಸ್ (MBSG) ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಮೆಸ್ಸಿ ಭೇಟಿಯಾಗಿದರು.

ಅಲ್ಲಿಂದ, ಮೆಸ್ಸಿ, ಸುವಾರೆಜ್ ಮತ್ತು ಡಿ ಪಾಲ್ ಅವರು ಕೋಲ್ಕತ್ತಾದ ಐಕಾನಿಕ್ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಬಂದರು. ಅಲ್ಲಿ ಆವೇಳೆಗಾಗಿ ಹತ್ತಾರು ಸಾವಿರ ಅಭಿಮಾನಿಗಳು ಹಾಜರಿದ್ದರು. ಅವರೆಲ್ಲರೂ ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಟಿಕೆಟ್‌ ಪಡೆದು, ಕ್ರೀಡಾಂಗಣಕ್ಕೆ ಬಂದಿದ್ದರು. ಕ್ರೀಡಾಂಗಣಕ್ಕೆ ಶಾರುಖ್, ಸೌರವ್ ಗಂಗೂಲಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರುವುದಕ್ಕೂ ಮೊದಲು, ಮೆಸ್ಸಿ ತಮ್ಮ ಅಭಿಮಾನಿಗಳನ್ನು ತೃಪ್ತಗೊಳಿಸಲು ಕ್ರೀಡಾಂಗಣದ ಆವರಣದಲ್ಲಿ ಒಂದು ಸುತ್ತು ಸುತ್ತಬೇಕಿತ್ತು.

ಆದರೆ, ಪರಿಸ್ಥಿತಿ ಹದಗೆಟ್ಟಿತು. ಮೆಸ್ಸಿ ಆವರಣದಲ್ಲಿ ಸುತ್ತುವ ವೇಳೆ, ಉದ್ದಕ್ಕೂ ಹಲವಾರು ಗಣ್ಯರು ಮತ್ತು ರಾಜಕಾರಣಿಗಳು ಅವರನ್ನು ಸುತ್ತುವರೆದಿದ್ದರು. ಪರಿಣಾಮ, ಕ್ರೀಡಾಂಗಣದ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಮೆಸ್ಸಿಯನ್ನು ನೋಡಲು ಸಾಧ್ಯವಾಗಲಿಲ್ಲ. ಇದು ಅಂತಿಮವಾಗಿ ಅಭಿಮಾನಿಗಳನ್ನು ಅತೃಪ್ತಿಗೊಳಿಸಿತು. ಅವರು ಗದ್ದಲ ಮಾಡಲಾರಂಭಿಸಿದರು. ಕುರ್ಚಿಗಳು ಮತ್ತು ಬಾಟಲಿಗಳನ್ನು ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಲೇಖನ ಓದಿದ್ದೀರಾ?: ಎಸ್‌ಐಆರ್ | ‘ಗಡಿಪಾರು’ ಭೀತಿಯಲ್ಲಿದ್ದಾರೆ ಬಂಗಾಳದ ಲೈಂಗಿಕ ಕಾರ್ಯಕರ್ತೆಯರು!

ಅಭಿಮಾನಿಗಳ ಆಕ್ರೋಶ ಭುಗಿಲೇಳುತ್ತಿದ್ದಂತೆಯೇ, ಮೆಸ್ಸಿ ಅವರು ಕ್ರೀಡಾಂಗಣದ ಆವರಣದಲ್ಲಿ ಸುತ್ತುವುದನ್ನು ಕಡಿತಗೊಳಿಸಲಾಯಿತು. ಅವರನ್ನು ಭದ್ರತಾ ಸಿಬ್ಬಂದಿ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದರು. 2 ಗಂಟೆಗಳ ಕಾರ್ಯಕ್ರಮ ಕೇವಲ 20 ನಿಮಿಷಕ್ಕೆ ರದ್ದಾಯಿತು. ಶಾರುಖ್, ಗಂಗೂಲಿ ಅಥವಾ ಮಮತಾ ಬ್ಯಾನರ್ಜಿ ಅವರೊಂದಿಗೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಭೆಯೂ ಮೊಟಕುಗೊಂಡಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ರೂಪಾಯಿ ಪಾವತಿಸಿ, ಟಿಕೆಟ್‌ ಪಡೆದು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳ ನಿರಾಶೆ ವ್ಯಾಪಕವಾಗಿ ಕಾಣುತ್ತಿತ್ತು. ಕ್ರಿಡಾಂಗಣದಲ್ಲಿದ್ದ ಹಲವಾರು ಕುರ್ಚಿಗಳನ್ನು ಅವರು ಮುರಿದುಹಾಕಿದರು. ಸ್ಟೇಡಿಯಂನ ಹಲವು ಭಾಗಗಳಿಗೆ ಹಾನಿಯಾಯಿತು.

ಅವ್ಯವಸ್ಥೆಯ ಕಾರಣಕ್ಕಾಗಿ ಕಾರ್ಯಕ್ರಮ ಅರ್ಧಕ್ಕೆ ರದ್ದಾಗಿದ್ದಕ್ಕೆ ಮೆಸ್ಸಿ ಮತ್ತು ಸಾರ್ವಜನಿಕರಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದಾರೆ. “ನಿರ್ವಹಣೆಯಲ್ಲಿನ ಅವ್ಯವಸ್ಥೆಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಘಟನೆಗಳ ದುಷ್ಪರಿಣಾಮಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಮಾಡಲು ತನಿಖಾ ಸಮಿತಿ ರಚಿಸಿದ್ದೇವೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...