ಸಿಹಿಸುದ್ದಿ | ಹತ್ತಾರು ವರ್ಷಗಳಿಂದ ಬ್ಯಾಂಕ್ ಖಾತೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಹಣ ವಾಪಸ್ ಬರಲು ಹೀಗೆ ಮಾಡಿ

Date:

ನೀವು ಅಥವಾ ನಿಮ್ಮ ಮನೆಯ ಯಾರದಾದರೂ ಬ್ಯಾಂಕ್ ಖಾತೆ ಹಲವು ವರ್ಷಗಳಿಂದ ಸಕ್ರಿಯವಾಗಿಲ್ಲವೇ? ಆದರೆ ಅದರ ಹಣ ಹಾಗೆಯೇ ಇದೆಯೇ? ಆ ಹಣವನ್ನು ನೀವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಆರ್‌ಬಿಐ ಸಹಾಯದಿಂದ ಕ್ಲೈಮ್ ಮಾಡಬಹುದು.

2025ರ ಜೂನ್ 30ರವರೆಗೆ ಭಾರತೀಯ ಬ್ಯಾಂಕುಗಳು ನಿಷ್ಕ್ರೀಯವಾಗಿರುವ ಬ್ಯಾಂಕ್‌ಗಳಲ್ಲಿ ಇರುವ ಕ್ಲೈಮ್ ಮಾಡದ ಒಟ್ಟು 67,000 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಆರ್‌ಬಿಐಗೆ ಜಮೆ ಮಾಡಿವೆ. ಜುಲೈ ತಿಂಗಳಲ್ಲಿ ಈ ಡೇಟಾವನ್ನು ಸಂಸತ್ತಿನಲ್ಲಿ ನೀಡಲಾಗಿದೆ.

ಇದನ್ನು ಓದಿದ್ದೀರಾ? ಕೇಂದ್ರ – ಆರ್‌ಬಿಐ ನಡುವೆ ನಿರಂತರ ಸಂಘರ್ಷ: ಆರ್ಥಿಕ ಭದ್ರತೆಗಾಗಿ ಆರ್‌ಬಿಐ ಗಟ್ಟಿ ನಿಲುವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಮಾನ್ಯವಾಗಿ ಕನಿಷ್ಠ ಹತ್ತು ವರ್ಷಗಳಿಂದ ನಿಷ್ಕ್ರೀಯವಾಗಿರುವ ಉಳಿತಾಯ ಅಥವಾ ಸ್ಥಿರ ಠೇವಣಿ(ಎಫ್‌ಡಿ) ಖಾತೆಗಳ ಹಣವನ್ನು ಆರ್‌ಬಿಐನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (ಡಿಇಎ) ನಿಧಿಗೆ ವರ್ಗಾಯಿಸಲಾಗಿದೆ. ಜನರು ಈ ಹಣವಿರುವ ಖಾತೆಯನ್ನು ಪತ್ತೆಹಚ್ಚಿ ಹಣವನ್ನು ಮರುಪಡೆಯಲು ಸಹಾಯ ಮಾಡಲು ಆರ್‌ಬಿಐ 2023ರ ಅಗಸ್ಟ್‌ನಲ್ಲೇ UDGAM ಪೋರ್ಟಲ್ ಅನ್ನು ಪ್ರಾರಂಭಿಸಿದೆ.

ಏನಿದು UDGAM ಪೋರ್ಟಲ್?

UDGAM (ಅನ್‌ಕ್ಲೈಮ್ಡ್ ಡೆಪಾಸಿಟ್ಸ್ – ಗೇಟ್‌ವೇ ಟು ಆಕ್ಸೆಸ್ ಇನ್ಫಾರ್ಮೇಶನ್) ಡಿಜಿಟಲ್ ವೇದಿಕೆಯಾಗಿದ್ದು ಗ್ರಾಹಕರು ಒಂದೇ ಸಮಯದಲ್ಲಿ ಹಲವು ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಮೊತ್ತದ ವಿವರಗಳನ್ನು ಪತ್ತೆಹಚ್ಚಬಹುದು.

ಈ ಹಿಂದೆ, ನಿಷ್ಕ್ರಿಯ ಖಾತೆಗಳನ್ನು ಪತ್ತೆಹಚ್ಚಲು ಜನರು ಬ್ಯಾಂಕ್‌ಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಬೇಕಾಗಿತ್ತು ಅಥವಾ ಸಂಪರ್ಕ ಮಾಡಬೇಕಾಗಿತ್ತು. ಆದರೆ 2025ರ ಜುಲೈನಲ್ಲಿ ಈ ವೇದಿಕೆಯು ಅಪ್‌ಗ್ರೇಡ್ ಆಗಿದ್ದು, UDGAM 30 ಉನ್ನತ ಬ್ಯಾಂಕ್‌ಗಳ ಡೇಟಾವನ್ನು ಹೊಂದಿದೆ.

ಪೋರ್ಟಲ್ ಅನ್ನು ಹೇಗೆ ಬಳಸುವುದು?

ಹಂತ 1: udgam.rbi.org.in ಗೆ ಭೇಟಿ ನೀಡಿ
ಹಂತ 2: ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 3: ಲಾಗಿನ್ ಮಾಡಲು ಒಟಿಪಿ ನಮೂದಿಸಿ
ಹಂತ 4: ನಿಮ್ಮ ಹೆಸರು ಮತ್ತು ಪ್ಯಾನ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯಂತಹ ಒಂದು ಐಡಿ ವಿವರವನ್ನು ನಮೂದಿಸಿ.
ಹಂತ 5: ನೀವು ಹುಡುಕಲು ಬಯಸುವ ಬ್ಯಾಂಕ್‌ಗಳನ್ನು ಆಯ್ಕೆಮಾಡಿ ಅಥವಾ ಎಲ್ಲವನ್ನೂ ಆಯ್ಕೆ ಮಾಡಬಹುದು.
ಹಂತ 6: ಹೊಂದಾಣಿಕೆಯಿದ್ದರೆ, ಪೋರ್ಟಲ್ ನಿಮಗೆ ಬ್ಯಾಂಕಿನ ಹೆಸರು, ಖಾತೆಯ ಪ್ರಕಾರ ಮತ್ತು ಶಾಖೆಯ ವಿವರವನ್ನು ತೋರಿಸುತ್ತದೆ. ಭದ್ರತಾ ಕಾರಣಗಳಿಂದಾಗಿ ಠೇವಣಿಯ ಮೊತ್ತವನ್ನು ತೋರಿಸುವುದಿಲ್ಲ.

ಹಣ ಕ್ಲೈಮ್ ಮಾಡದ ನಿಷ್ಕ್ರೀಯ ಖಾತೆಯಿದ್ದರೆ ಏನು ಮಾಡುವುದು?

ಹಣ ಕ್ಲೈಮ್ ಮಾಡದ ನಿಷ್ಕ್ರೀಯ ಖಾತೆಯಿದೆ ಎಂಬುದು udgam ಪೋರ್ಟಲ್‌ ಮೂಲಕ ಖಚಿತವಾದರೆ ಬಳಿಕ ನೀಡುವ ಸಂಬಂಧಿತ ಬ್ಯಾಂಕ್‌ಗೆ ಕರೆ ಮಾಡಬಹುದು. ಹೆಚ್ಚಾಗಿ ಬ್ಯಾಂಕುಗಳು ನೀವು ಖುದ್ದಾಗಿ ಶಾಖೆಗೆ ಭೇಟಿ ನೀಡಲು ತಿಳಿಸುತ್ತದೆ.

ಹಂತ 1: ಶಾಖೆಗೆ ಖುದ್ದಾಗಿ ಭೇಟಿ ನೀಡಿ
ಹಂತ 2: ಗುರುತಿನ ಪುರಾವೆ, ನಿವಾಸ ಪುರಾವೆ ಮತ್ತು ಖಾತೆಯ ಪುರಾವೆಗಳನ್ನು ಒದಗಿಸಿ
ಹಂತ 3: ಖಾತೆದಾರರು ಮೃತರಾಗಿದ್ದರೆ ಮರಣ ಪ್ರಮಾಣಪತ್ರ ಮತ್ತು ನೀವು ಅವರ ಸಂಬಂಧಿಕರು ಎಂದು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಿ.
ಹಂತ 4: ದೃಢೀಕರಿಸಿದ ನಂತರ, ಬ್ಯಾಂಕ್‌ನ ಹಣವನ್ನು ವರ್ಗಾಯಿಸುತ್ತದೆ.

ಕೆಲವು ಬ್ಯಾಂಕುಗಳು ಪ್ರಸ್ತುತ ಆನ್‌ಲೈನ್ ಕ್ಲೈಮ್ ಫಾರ್ಮ್‌ಗಳನ್ನು ನೀಡುತ್ತಿದ್ದರೂ, ಹೆಚ್ಚಾಗಿ ನೀವು ಶಾಖೆಗೆ ಭೇಟಿ ನೀಡಬೇಕಾಗುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...