ಹವಾಮಾನ ವೈಪರೀತ್ಯವು ಪ್ರತಿವರ್ಷ 7 ಲಕ್ಷ ಜನರ ಸಾವಿಗೆ ಕಾರಣವಾಗುತ್ತದೆ: ಲ್ಯಾನ್ಸೆಟ್ ಅಧ್ಯಯನ

Date:

ಹವಾಮಾನ ವೈಪರೀತ್ಯದಿಂದ ಉಂಟಾಗುವ ಅತಿಯಾದ ಉಷ್ಣಾಂಶವು 2050ರ ವೇಳೆಗೆ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ದೈಹಿಕ ನಿಷ್ಕ್ರಿಯರನ್ನಾಗಿ ಮಾಡಬಹುದು. ಪರಿಣಾಮ, ವಾರ್ಷಿಕ 7,00,000 ಹೆಚ್ಚುವರಿ ಅಕಾಲಿಕ ಮರಣಗಳೂ ಸಂಭವಿಸಬಹುದು. 3.68 ಶತಕೋಟಿ ಡಾಲರ್ ಉತ್ಪಾದನಾ ನಷ್ಟವೂ ಅಗಬಹುದು ಎಂದು ‘ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

2030ರ ವೇಳೆಗೆ ಜಗತ್ತಿನಾದ್ಯಂತ ದೈಹಿಕ ನಿಷ್ಕ್ರಿಯತೆಯನ್ನು 15%ರಷ್ಟು ಕಡಿಮೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಗುರಿ ಹಾಕಿಕೊಂಡಿದೆ. ಆದರೆ, ಏರುತ್ತಿರುವ ತಾಪಮಾನವೊಂದೇ ಈ ಗುರಿಗೆ ಭಾರಿ ಹಿನ್ನಡೆ ಉಂಟುಮಾಡಬಹುದು ಎಂದು ಅರ್ಜೆಂಟೀನಾದ ಪಾಂಟಿಫಿಕಲ್ ಕ್ಯಾಥೋಲಿಕ್ ವಿಶ್ವವಿದ್ಯಾಲಯ ಸೇರಿದಂತೆ ಲ್ಯಾಟಿನ್ ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ.

ವಿಶ್ಲೇಷಿಸಲಾದ ಮೂರು ಭವಿಷ್ಯದ ಸನ್ನಿವೇಶಗಳ ಅಡಿಯಲ್ಲಿ (ಕಡಿಮೆ ಹೊರಸೂಸುವಿಕೆ, ಐತಿಹಾಸಿಕ ಪ್ರವೃತ್ತಿಗಳ ಮುಂದುವರಿಕೆ ಹಾಗೂ ಪಳೆಯುಳಿಕೆ ಇಂಧನ ಆಧಾರಿತ ವೇಗದ ಅಭಿವೃದ್ಧಿ), ಭಾರತವು 2050ರ ವೇಳೆಗೆ ದೈಹಿಕ ನಿಷ್ಟ್ರಿಯತೆಯಿಂದಾಗಿ ಪ್ರತಿ 1,00,000 ಜನಸಂಖ್ಯೆಗೆ 10.62% (10,620 ಮಂದಿ) ಮರಣ ದರವನ್ನು ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹವಾಮಾನ ವೈಪರೀತ್ಯವು ಜಗತ್ತನ್ನು ಹೆಚ್ಚು ಬಿಸಿಯಾಗಿಸುತ್ತಿದೆ. ಹೆಚ್ಚುತ್ತಿರುವ ಶಾಖವು ಮನುಷ್ಯರು ದೈಹಿಕವಾಗಿ ಸಕ್ರಿಯವಾಗಿರುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು. “ಉಷ್ಣವಲಯ ಮತ್ತು ಉಪ ಉಷ್ಣವಲಯದ ಕೆಲವು ಭಾಗಗಳಲ್ಲಿ ವರ್ಷದ ಅತ್ಯಂತ ಬಿಸಿಯಾದ ಅವಧಿಯಲ್ಲಿ ಉಂಟಾಗುವ ಬಿಸಿ ಮತ್ತು ಆರ್ದ್ರ ವಾತಾವರಣವು, ಯುವಜನರು ಮತ್ತು ವಯಸ್ಕರಿಬ್ಬರಿಗೂ ಸುರಕ್ಷಿತ ದೈಹಿಕ ಚಟುವಟಿಕೆಯನ್ನು ಕೇವಲ ಕುಳಿತುಕೊಳ್ಳುವ ಅಥವಾ ಮಲಗುವ ಸ್ಥಿತಿಗೆ ಸೀಮಿತಗೊಳಿಸುತ್ತದೆ” ಎಂದು ಇತ್ತೀಚೆಗೆ ‘ಎನ್ವಿರಾನ್ಮೆಂಟಲ್ ರಿಸರ್ಚ್ ಹೆಲ್ತ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಸೂಚಿಸಿದೆ.

18-64 ವಯಸ್ಸಿನ ವಯಸ್ಕರು ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ಅಥವಾ 75 ನಿಮಿಷಗಳ ಅತೀವ ತೀವ್ರತೆಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತದೆ. ಇದರೊಂದಿಗೆ ಪ್ರಮುಖ ಸ್ನಾಯು ಗುಂಪುಗಳನ್ನು ಒಳಗೊಂಡ ಸ್ನಾಯು ಬಲಪಡಿಸುವ ಚಟುವಟಿಕೆಗಳನ್ನು ವಾರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ದಿನ ಮಾಡಬೇಕು. ಆದರೆ, ಪ್ರಸ್ತುತ ಮೂವರಲ್ಲಿ ಒಬ್ಬ ವಯಸ್ಕರು ಈ ಚಟುವಟಿಕೆಗಳನ್ನು ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.

2050ರವರೆಗೆ ಏರುತ್ತಿರುವ ತಾಪಮಾನವು ಜಾಗತಿಕವಾಗಿ ದೈಹಿಕ ಚಟುವಟಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಮಾದರಿ ಮಾಡಲು ಸಂಶೋಧಕರು 2000 ಮತ್ತು 2022ರ ನಡುವಿನ 156 ದೇಶಗಳ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ. ಈ ಮಾದರಿಯ ಪ್ರಕಾರ, 2050ರ ವೇಳೆಗೆ ಸರಾಸರಿ 27.8 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವಿರುವ ಪ್ರತಿ ಹೆಚ್ಚುವರಿ ತಿಂಗಳು, ಜಾಗತಿಕವಾಗಿ ದೈಹಿಕ ನಿಷ್ಕ್ರಿಯತೆಯನ್ನು 1.5% ಪಾಯಿಂಟ್‌ಗಳಷ್ಟು ಹೆಚ್ಚಿಸುತ್ತದೆ.

“2050ರ ವೇಳೆಗೆ, ಈ ಹೆಚ್ಚಳವು ವಾರ್ಷಿಕವಾಗಿ ಹೆಚ್ಚುವರಿ 4.7ರಿಂದ 7 ಲಕ್ಷ ಸಾವುಗಳಿಗೆ ಮತ್ತು 2.40-3.68 ಶತಕೋಟಿ ಅಂತರಾಷ್ಟ್ರೀಯ ಡಾಲರ್ ಉತ್ಪಾದನಾ ನಷ್ಟಕ್ಕೆ ಕಾರಣವಾಗಲಿದೆ. ಏರುತ್ತಿರುವ ತಾಪಮಾನವು ದೈಹಿಕ ನಿಷ್ಕ್ರಿಯತೆಯ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದು ವಿಶೇಷವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚುವರಿ ಅಕಾಲಿಕ ಸಾವುಗಳು ಮತ್ತು ಉತ್ಪಾದನಾ ನಷ್ಟಗಳಿಗೆ ಕಾರಣವಾಗುತ್ತದೆ” ಎಂದು ಲೇಖಕರು ಬರೆದಿದ್ದಾರೆ.

ಈ ಲೇಖನ ಓದಿದ್ದೀರಾ?: ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಜಾಗತಿಕ ಆರೋಗ್ಯದ ಮೇಲೆ ಇದರ ಪರಿಣಾಮಗಳು ತಕ್ಷಣವೇ ಕಂಡುಬರಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ವ್ಯಾಯಾಮದ ಮಾರ್ಗಸೂಚಿಗಳಲ್ಲಿ ಶಾಖದ ಅಪಾಯದ ಸಂದೇಶಗಳನ್ನು ಸೇರಿಸುವುದು, ಹವಾಮಾನ ನಿಧಿಯನ್ನು ಸಮರ್ಪಕವಾಗಿ ಬಳಸುವುದು, ಅಪಾಯದಲ್ಲಿರುವ ಜನಸಂಖ್ಯೆಗೆ ತಂಪಾದ ವ್ಯಾಯಾಮ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಬ್ಸಿಡಿ ನೀಡುವುದು ಹಾಗೂ ಕಟ್ಟುನಿಟ್ಟಾದ ಔದ್ಯೋಗಿಕ ಶಾಖ-ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸುವುದು ಅತ್ಯಂತ ಪರಿಣಾಮಕಾರಿ ಕ್ರಮಗಳಾಗಿವೆ ಅವರು ತಿಳಿಸಿದ್ದಾರೆ.

ಆದ್ದರಿಂದ, ಶಾಖದಿಂದ ಪ್ರೇರಿತವಾದ ಜಡ ಜೀವನಶೈಲಿ ಮತ್ತು ಅದರೊಂದಿಗೆ ಬರುವ ಹೃದ್ರೋಗ ಸಂಬಂಧಿತ ಕಾಯಿಲೆಗಳು ಹಾಗೂ ಆರ್ಥಿಕ ನಷ್ಟವನ್ನು ತಡೆಗಟ್ಟಲು, ದೈಹಿಕ ನಿಷ್ಕ್ರಿಯತೆಯನ್ನು ಕೇವಲ ವೈಯಕ್ತಿಕ ಜೀವನಶೈಲಿಯ ಆಯ್ಕೆಯಾಗಿ ನೋಡದೆ, ಹವಾಮಾನಕ್ಕೆ ಸಂವೇದನಾಶೀಲವಾಗಿರುವ ಅವಶ್ಯಕತೆಯಾಗಿ ಪರಿಗಣಿಸಬೇಕು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...