ಗಟ್ಟಿಗೊಂಡ ಕೋಮು ಸೌಹಾರ್ದತೆ; ಮುಸ್ಲಿಂ ಪತ್ರಕರ್ತನಿಗೆ ಹಿಂದೂವಿನಿಂದ ಮನೆ ಉಡುಗೊರೆ!

Date:

ಬಹುತ್ವ, ಸಾಮರಸ್ಯ, ಸರ್ವಜನಾಂಗದ ಶಾಂತಿಯ ತೋಟವಾಗಿರುವ ಭಾರತವನ್ನು ದ್ವೇಷ, ಅಸೂಯೆ, ಗಲಭೆ, ಹಿಂಸಾಚಾರಗಳ ನಾಡನ್ನಾಗಿ ಮಾಡಲು ಹಿಂದುತ್ವ ಕೋಮುವಾದಿಗಳು ನಿರಂತರವಾಗಿ ಯತ್ನಿಸುತ್ತಲೇ ಇದ್ದಾರೆ. ತಮ್ಮ ರಾಜಕೀಯ ಲಾಲಸೆಗಾಗಿ ದೇಶದ ಸಾಮರಸ್ಯಕ್ಕೆ ಬೆಂಕಿ ಇಡುತ್ತಿದ್ದಾರೆ. ದ್ವೇಷದ ವಿಷವನ್ನು ಬಿತ್ತುತ್ತಿದ್ದಾರೆ. ಈ ಬೆಂಕಿ ಕಿಡಿ ಹೊತ್ತಿಸಿದ ಪರಿಣಾಮವಾಗಿಯೇ ಈಗ ದೇಶ ಆಗಾಗ ಕೋಮುದಳ್ಳುರಿಗೆ ಬಲಿಯಾಗುತ್ತಿದೆ.

ಪ್ರೀತಿಯ ಅಂಗಡಿಯನ್ನ ತೆರೆಯಬೇಕಿದ್ದ ಈ ದೇಶದಲ್ಲಿ ಕೋಮುಕ್ರಿಮಿಗಳು ಹಗೆ, ಮತ್ಸರ, ದ್ವೇಷವನ್ನ ಬಿತ್ತುತ್ತಿದ್ದಾರೆ. ಮುಸ್ಲಿಂರ ಮೇಲೆ ಕೋಮು ಭಾವನೆ ಹೆಚ್ಚಳವಾಗಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಮರ ವಿರುದ್ಧದ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ‘ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತು’ ಎನ್ನುವಂತೆ ತಾವೇ ಕೃತ್ಯಗಳನ್ನು ಎಸಗಿ, ಮುಸ್ಲಿಮರ ಹಣೆಗೆ ಕಟ್ಟುವ ಕುತಂತ್ರಗಳನ್ನೂ ಹಿಂದುತ್ವ ಕೋಮುವಾದಿಗಳು ಮಾಡುತ್ತಿದ್ದಾರೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಆದರೆ, ವಿಷ ಬೀಜ ಬಿತ್ತುವವರ ನಡುವೆ ಹಿಂದೂ – ಮುಸ್ಲಿಂ ಐಕ್ಯತೆಗೆ ಸಾಕ್ಷಿಯಾದ ಒಂದು ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಹೌದು, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಹೋರೆ ಗ್ರಾಮದಲ್ಲಿ 2025ರ ನವೆಂಬರ್ ತಿಂಗಳಲ್ಲಿ ನಡೆದ ಒಂದು ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯ ಪತ್ರಕರ್ತ ರಿಯಾಜ್ ಅಹ್ಮದ್ ಅವರ ಮನೆಯನ್ನು ಜಮ್ಮು-ಕಾಶ್ಮೀರ ಆಡಳಿತವು ‘ಅಕ್ರಮ ನಿರ್ಮಾಣ’ ಎಂಬ ಕಾರಣ ನೀಡಿ ಅವರ ಮನೆಯನ್ನು ನೆಲಸಮ ಮಾಡಿತ್ತು. ಆದರೆ, ಒಂದೇ ದಿನದಲ್ಲಿ ಅದೇ ಊರಿನ ಹಿಂದೂ ವ್ಯಕ್ತಿ ರಾಕೇಶ್ ಕುಮಾರ್ ಶರ್ಮಾ ಅವರು ತಮ್ಮ ಸ್ವಂತ ಜಮೀನಿನಲ್ಲಿ 5 ಮರ್ಲಾ (ಸುಮಾರು 1360 ಚದರ ಅಡಿ) ನಿವೇಶನವನ್ನು ರಿಯಾಜ್ ಅಹ್ಮದ್ ಕುಟುಂಬಕ್ಕೆ ‘ಗಿಫ್ಟ್’ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಘಟನೆಯನ್ನು ಹಲವರು “ಹಿಂದೂ-ಮುಸ್ಲಿಂ” ಬಾಂಧವ್ಯಕ್ಕೆ ಒಂದು ಉತ್ತಮ ಉದಾಹರಣೆ” ಎಂದು ಶ್ಲಾಘಿಸಿದ್ದಾರೆ.

ಈ ಹೃದಯಸ್ಪರ್ಶಿ ಘಟನೆಗೆ ಕಾರಣ ಏನು? ಮುಸ್ಲಿಂ ಪತ್ರಕರ್ತನ ಮನೆ ನೆಲಸಮ ಮಾಡಿದ್ದೇಕೆ?

ಜಮ್ಮು ಅಭಿವೃದ್ಧಿ ಪ್ರಾಧಿಕಾರ (ಜೆಡಿಎ) ಸರ್ಕಾರಿ ಜಮೀನನ್ನು ಅತಿಕ್ರಮಿಸಿ ಮನೆಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದೆ. ಪತ್ರಕರ್ತ ಅರ್ಫಾಜ್ ಅಹ್ಮದ್ ಡೈಂಗ್ ಅವರ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾದ ಮನೆಯನ್ನು ಜೆಡಿಎ ಒಂದೇ ದಿನದಲ್ಲಿ ಕೆಡವಿದೆ. ನವೆಂಬರ್ 27ರಂದು ಅಧಿಕಾರಿಗಳು ಮನೆ ಕೆಡವಿದರೇ, ನವೆಂಬರ್ 28, 2025ರಂದು ಒಂದೇ ದಿನದಲ್ಲಿ ಹಿಂದೂ ವ್ಯಕ್ತಿಯೊಬ್ಬ ತಮ್ಮ ಭೂಮಿಯನ್ನು ನೀಡಲು ಮುಂದೆ ಬಂದಿದ್ದಾರೆ. ಪತ್ರಕರ್ತ ಅರ್ಫಾಜ್ ಅಹ್ಮದ್ ಡೈಂಗ್ ಅವರಿಗೆ ಜಮ್ಮು ನಿವಾಸಿ ಕುಲ್ದೀಪ್ ಶರ್ಮಾ ಅವರು ತನ್ನ ಐದು ಮಾರ್ಲಾ (1.25 ಗುಂಟೆ) ಜಮೀನನ್ನು ಉಡುಗೊರೆಯಾಗಿ ನೀಡಿದ್ದಾರೆ. ಸರ್ಕಾರದ ಈ ನಡೆಯನ್ನು ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಖಂಡಿಸಿವೆ.

ಜಮ್ಮುಕಾಶ್ಮೀರ ಆಡಳಿತವು ಸರ್ಕಾರಿ ಜಮೀನನ್ನು ಅತಿಕ್ರಮಿಸಿ ಮನೆಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದೆ. ಆದರೆ, ಪತ್ರಕರ್ತ ಡೈಂಗ್ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇತ್ತೀಚೆಗೆ ತಾನು ಮಾಡಿದ ವರದಿಗೆ ಪ್ರತಿಕಾರವಾಗಿ ಸರ್ಕಾರ ತನ್ನ ಮನೆಯನ್ನು ನೆಲಸಮ ಮಾಡಿದೆ ಎಂದು ಡೈಂಗ್ ಆರೋಪಿಸಿದ್ದಾರೆ.

ಮನೆ ನೆಲಸಮವಾದ ಕಾರಣ ಪತ್ರಕರ್ತ ಡೈಂಗ್ ಅವರ ವೃದ್ಧ ಪೋಷಕರು, ಪತ್ನಿ ಮತ್ತು ಮೂವರು ಮಕ್ಕಳು ನಿರ್ವಸಿತರಾಗಿದ್ದಾರೆ.

ಡೈಂಗ್ ಅವರು ನೀಸ್ ಸೆಹೆರ್ ಇಂಡಿಯಾ ಎಂಬ ಡಿಜಿಟಲ್ ಸುದ್ದಿ ಜಾಲತಾಣವನ್ನು ಹೊಂದಿದ್ದಾರೆ. ಇತ್ತೀಚೆಗೆ, ಗಡಿಯಾಚೆಯ ಬೃಹತ್ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿದ್ದವರ ಜತೆಗೆ ಪೊಲೀಸ್ ಅಧಿಕಾರಿಯೊಬ್ಬರು ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದ್ದರು. ಈ ಹಿನ್ನೆಲೆ, ಅವರ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ವಜ್ರ ಸಾಪ್ತಾಹಿಕ ಪಾಸ್ ದರದ ಪರಿಷ್ಕರಣೆ!

ಮನೆಯನ್ನು ನೆಲಸಮ ಮಾಡುವ ವೇಳೆ ಡೈಂಗ್ ಅವರ ಕುಟುಂಬ ತಮಗೆ ಸಮಯಾವಕಾಶ ನೀಡುವಂತೆ ಅಧಿಕಾರಿಗಳನ್ನು ಕೇಳಿಕೊಳ್ಳುತ್ತಿದ್ದರು. ಮನೆಯ ನೆಲಸಮದ ಹೃದಯ ವಿದ್ರಾವಕ ದೃಶ್ಯಗಳನ್ನು ಕಂಡು ನೆರೆದಿದ್ದ ಜನಸ್ತೋಮ ಮರುಗಿತ್ತು.

ಡೈಂಗ್ ಕುಟುಂಬ ಅಧಿಕಾರಿಗಳನ್ನು ಅಂಗಲಾಚುತ್ತಿದ್ದನ್ನು ಕಂಡ ನೆರೆಯ ನಿವಾಸಿ ಶರ್ಮಾ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ.

“ನಾನು ಸೂಕ್ತ ಕಂದಾಯ ದಾಖಲೆಗಳನ್ನು ಮಾಡಿಸಿದ ನನ್ನ ಐದು ಮಾರ್ಲಾ ಜಾಗವನ್ನು ಮುಸ್ಲಿಂ ಪತ್ರಕರ್ತನ ಕುಟುಂಬಕ್ಕೆ ಊಡುಗೊರೆಯಾಗಿ ನೀಡಿದ್ದೇನೆ. ಆ ಜಾಗವನ್ನು ಅವರ ಹೆಸರಿಗೆ ನೋಂದಣಿ ಮಾಡಿದ್ದೇನೆ. ನನ್ನ ಸೋದರ ಅಸಹಾಯಕನಾಗಿ ಉಳಿಯಬಾರದು ಎಂದು ನನ್ನ ಜಾಗವನ್ನು ಅವರಿಗೆ ನೀಡಿದ್ದೇನೆ. ನಾನು ಅವರ ಮನೆ ನಿರ್ಮಾಣಕ್ಕೆ ಭಿಕ್ಷೆ ಬೇಡಿಯಾದರೂ ಸರಿ ನೇರವಾಗುತ್ತೇನೆ. ಮನೆಯನ್ನು ಮರುನಿರ್ಮಿಸಲಾಗುವುದು ” ಎಂದು ಶರ್ಮಾ ಹೇಳಿದ್ದಾರೆ.

“ಡೈಂಗ್ ಅವರ ಕುಟುಂಬ ಬೀದಿಗೆ ಬಿದ್ದಿದೆ. ಸರ್ಕಾರ ಬಡವರ ಮೇಲೆ ಈ ರೀತಿ ದಬ್ಬಾಳಿಕೆ ನಡೆಸಬಾರದು. ಈಗ ನಾನು ನೀಡಿರುವ ಐದು ಮಾರ್ಲಾ ಜಾಗವನ್ನೂ ಅಧಿಕಾರಿಗಳು ನೆಲಸಮ ಮಾಡಿದರೇ, ನಾನು ಹತ್ತು ಮಾರ್ಲಾ ಜಾಗವನ್ನು ನೀಡುತ್ತೇನೆ” ಎಂದು ಹೇಳಿದ್ದಾರೆ.

ಶರ್ಮಾರ ಈ ನಡೆಯನ್ನು ಶರ್ಮಾರ ಪುತ್ರಿ ತಾನಿಯಾ ಅವರು ಪ್ರಶಂಸಿದ್ದಾರೆ. ಅವರ ತಂದೆಯ ನಿರ್ಧಾರಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗೇಯೇ, ಇಂತಹ ಕಾರ್ಯದಲ್ಲಿ ಇಡೀ ಜಮ್ಮು ಜನ ಒಂದೂಗೂಡಬೇಕು ಎಂದು ಕೇಳಿದ್ದಾರೆ.

“ನಮ್ಮ ಮನೆ ನೆಲಸಮವಾದ ಬಳಿಕ ಹಲವಾರು ಜನರು ಜೊತೆಗೆ ನಿಂತಿದ್ದಾರೆ. ನಮ್ಮ ಬೆನ್ನೆಲುಬಾಗಿದ್ದಾರೆ. ಹೀಗಾಗಿ, ನನಗೀಗ ಯಾವುದೇ ಚಿಂತೆಯಿಲ್ಲ. ನಾವು ಇಲ್ಲಿ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ನೆರವಿಗೆ ಹಲವಾರು ಜನರು ಮುಂದಾಗಿದ್ದಾರೆ” ಎಂದು ಡೈಂಗ್ ತಂದೆ ಹೇಳಿದ್ದಾರೆ.

ಜೆಡಿಎ ಉಪಾಧ್ಯಕ್ಷ ರೂಪೇಶ್ ಕುಮಾರ್ ನೇತೃತ್ವದಲ್ಲಿದೆ. ಅವರನ್ನು ಜೆ & ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಸ್ಥಾನದಲ್ಲಿ ನೇಮಿಸಿದ್ದಾರೆ. ಡೈಂಗ್ ಮನೆಯನ್ನು ಪ್ರಾಧಿಕಾರದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಜೆಡಿಎ ಮಾಡಿದ ಧ್ವಂಸವನ್ನು ಸಮರ್ಥಿಸಿಕೊಂಡಿದೆ. ಉಪಾಧ್ಯಕ್ಷ ರೂಪೇಶ್ ಕುಮಾರ್ ಅವರು ಅಕ್ಟೋಬರ್ 29 ರಂದು ಕುಟುಂಬಕ್ಕೆ ಮೊದಲ ನೋಟಿಸ್ ಕಳುಹಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದ ನರ್ವಾಲ್ ಪ್ರದೇಶದಲ್ಲಿರುವ ಅವರ ಒಂದು ಅಂತಸ್ತಿನ ಮನೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದಾಗ ಡೈಂಗ್ ಕುಟುಂಬ ಹಾಗೂ 72 ವರ್ಷದ ಗುಲಾಮ್ ಖಾದಿರ್ ಡೈಂಗ್ ಅವರು ಆತಂಕದಲ್ಲಿ ಮುಳುಗಿದ್ದರು.

1990ರ ದಶಕದ ಆರಂಭದಲ್ಲಿ ಭಯೋತ್ಪಾದಕರು ಡೇಂಗ್ ಅವರನ್ನು ಕರೆದುಕೊಂಡು ಹೋಗಿ ಉಳಿದ ಯುವಕರ ಜತೆಗೆ ಸೇರಿಸಲು ಒತ್ತಾಯಿಸುತ್ತಾರೆ. ಅವರ ಮನೆ ಮತ್ತು ಕುಟುಂಬವನ್ನ ಬಿಡಲು ಒತ್ತಾಯಿಸುತ್ತಾರೆ. ತಮ್ಮೊಂದಿಗೆ ಸೇರಲು ಒತ್ತಾಯಿಸುತ್ತಾರೆ. ಈ ಭಯದಿಂದ ಡೈಂಗ್ ತನ್ನ ಹಿರಿಯ ಮಗನೊಂದಿಗೆ ದೋಡಾದ ಭಲೇಸಾದಿಂದ ಸುಮಾರು 200 ಕಿ.ಮೀ ದೂರ ಜಮ್ಮುವಿಗೆ ಪಲಾಯನ ಮಾಡುತ್ತಾರೆ.

ಹೀಗೆ ಪಲಾಯನ ಗೈದಿದ್ದ ಅವರು ಅಧಿಕಾರಿಗಳು ತಮ್ಮ ಮನೆಯನ್ನು ನೆಲಸಮ ಮಾಡುವಾಗ ಅವಶೇಷಗಳ ನಡುವೆ ಕುಳಿತಿರುವುದನ್ನು ಕಂಡ ನೆರೆಹೊರೆಯವರು ಭಾವುಕರಾಗುತ್ತಾರೆ. ಈ ಸಮಯದಲ್ಲಿ ಹಲವರು ಅವರನ್ನು ಸಮಾಧಾನಪಡಿಸುತ್ತಾರೆ.

ಸ್ಥಳೀಯ ಪತ್ರಕರ್ತ ಡೈಂಗ್ ಮತ್ತು ಅವರ ಮಗ ಅರ್ಫಾಜ್ ಅವರ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮಾಜಿ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಸಂತ್ರಸ್ತರನ್ನು ಭೇಟಿ ಮಾಡಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಹಿಂದು – ಮುಸ್ಲಿಂ ಎಂದು ಬಡಿದಾಡುವ ಜನರಿಗೆ ಈ ಘಟನೆಯೂ ಸೌಹಾರ್ದತೆಯ ಪಾಠವಾಗಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...