ಮತ್ತೆ ಬಂತು ಕೊರೋನ; ಷೇರು ಮಾರುಕಟ್ಟೆ ಪತನ?

Date:

ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಗುಜರಾತ್‌, ಕೇರಳ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್‌-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೇಂದ್ರ ಆರೋಗ್ಯ ಇಲಾಖೆಯ ವರಧಿ ಪ್ರಕಾರ ಸೀಮಿತ ಲಕ್ಷಗಳು ಮಾತ್ರ ರೋಗಿಗಳಲ್ಲಿ ಕಂಡು ಬಂದಿರುವುದರಿಂದ, ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾಗುತ್ತದೆ.

ಒಂದು ವೇಳೆ, ಕೊರೋನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾದರೂ ಅಗತ್ಯ ವೈದ್ಯಕೀಯ ಸೌಕರ್ಯಗಳು ನಮ್ಮಲ್ಲಿವೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ.

ಕೋವಿಡ್‌-19 ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲದೇ ಇದ್ದರೂ, ಕೊರೋನ 2ನೇ ಅಲೆಯಿಂದಾದ ಸಾವು-ನೋವು ಜೀವಹಾನಿ ಹಾಗೂ ಸಂಕಷ್ಟಗಳು ಜನರನ್ನು ಕಾಡುತ್ತಿದ್ದು, ಆತಂಕದಿಂದ ಹೊರಬರುವುದು ಕಷ್ಟಕರ. 2020ರಲ್ಲಿ ಮೊದಲ ಬಾರಿಗೆ ಭಾರತ ಪ್ರವೇಶಿಸಿದ ಕೊರೋನ, ಆ ವರ್ಷದ ಮಾರ್ಚ್‌-ಏಪ್ರಿಲ್‌ ಹೊತ್ತಿಗೆ ದೇಶವನ್ನು ಆವರಿಸಿಕೊಂಡಿತು. ದೇಶದಲ್ಲಿ ಲಾಕ್‌ಡೌನ್‌ ಹೇರಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆ ಸಮಯದಲ್ಲಿ ಭಾರತದ ಆರ್ಥಿಕತೆ ನೆಲಕಚ್ಚಿತು. ಮಾತ್ರವಲ್ಲದೆ, ಷೇರುಪೇಟೆಯೂ ಗಂಭೀರವಾಗಿ ಕುಸಿದಿತ್ತು. ಭಾರತದ ಅಗ್ರಗಣ್ಯ ಕಂಪನಿಗಳ ಮೌಲ್ಯವು 50%ಗೂ ಹೆಚ್ಚು ಸಂಪತ್ತು ಕರಗಿತು. 2020ರ ಮಾರ್ಚ್‌ ತಿಂಗಳಲ್ಲಿ ನಿಫ್ಟಿ ಸೂಚ್ಯಾಂಕವು ಸುಮಾರು 30%ಗೂ ಅಧಿಕವಾಗಿ ಕುಸಿದಿತ್ತು. ಈಗ, ಮತ್ತೆ ಕೊರೋನ ಪ್ರಕರಣಗಳು ಏರುತ್ತಿದ್ದು, 2020ರ ಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗುತ್ತದೆಯೇ ಎಂಬ ಗೊಂದಲ ಷೇರು ಮಾರುಕಟ್ಟೆಯಲ್ಲಿದೆ.

ಈ ಲೇಖನ ಓದಿದ್ದೀರಾ?: ‘ಭಾರತ-ಪಾಕ್ ಯುದ್ಧ ನಿಲ್ಲಲು ವ್ಯಾಪಾರವೇ ಕಾರಣ’: ಒತ್ತಿ ಹೇಳುತ್ತಿರುವ ಅಮೆರಿಕ, ಬಾಯಿಬಿಡದ ಭಾರತ

ಕಳದೆ ಒಂದೂವರೆ ತಿಂಗಳಿನಿಂದ ಷೇರುಪೇಟೆಯಲ್ಲಿ ಕೊಂಚ ಏರುಗತಿಯಲ್ಲಿದ್ದರೂ, ಕಡೆಯ ಎಂಟು ತಿಂಗಳಿಗೆ ಹೋಲಿಸಿದರೆ ಕುಸಿತದ ಹಾದಿಯನ್ನು ಇನ್ನೂ ಹಿಮ್ಮೆಟ್ಟಲಾಗಿಲ್ಲ. ಟ್ರಂಪ್‌ ಜಾರಿಗೊಳಿಸಿದ ಟಾರಿಫ್‌ ಮತ್ತು ಚೀನಾದ ಆಕರ್ಷಿತ ಷೇರು ಮಾರುಕಟ್ಟೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತವನ್ನು ತೊರೆದಿದ್ದರು. ಪರಿಣಾವಾಗಿ, ಭಾರತದ ಮಾರುಕಟ್ಟೆಯಲ್ಲಿ ಗಣನೀಯ ಇಳಿಕೆ ಕಂಡಿತ್ತು. ಅದು ಈವರೆಗೂ ಮುಂದುವರಿಕೆದಿದೆ.

ಇಂತಹ ಸ್ಥಿತಿಯಲ್ಲೇನಾದರೂ ಕೊರೋನ ಪ್ರಕರಣಗಳು ಮತ್ತಷ್ಟು ಉಲ್ಬಣಗೊಂಡರೆ ಆರ್ಥಿಕ ವಲಯದಲ್ಲಿ ಸಾಕಷ್ಟು ಹಿಂಜರಿಕೆಯಾಗುವ ಸಂಭವವಿದೆ. 2020 ಮತ್ತು 2021ರಲ್ಲಿ ಸರ್ಕಾರಗಳು ತೆಗೆದುಕೊಂಡ ಅನಿಯಂತ್ರಣ ಕ್ರಮಗಳು ಮತ್ತು ಆರ್ಥಿಕತೆಯಲ್ಲಿನ ಬೇಜವಾಬ್ದಾರಿಯಿಂದಾಗಿ ಮಧ್ಯಮ ಮತ್ತು ಸಣ್ಣ ಕಂಪನಿಗಳು ಹಾಗೂ ದೇಶಿಯ ಸಣ್ಣ ಸಣ್ಣ ಹೂಡಿಕೆದಾರರು ಕೋಟ್ಯಾಂತರ ರೂ. ಮೌಲ್ಯದ ಸಂಪತ್ತನ್ನು ಕಳೆದುಕೊಳ‍್ಳಬೇಕಾಗಿಯಿತು. ಅದೇ ಕ್ರಮಗಳನ್ನು ಸರ್ಕಾರ ಈಗಲೂ ಅನುಸರಿದರೆ ಹೂಡಿಕೆದಾರರು ಖಂಡಿತವಾಗಿ ಮುಂಬರುವ ದಿನಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ರಜನಿಕಾಂತ ಚಟ್ಟೇನಹಳ್ಳಿ
ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...