ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಭಾರೀ ಹಾನಿ ಉಂಟು ಮಾಡಿದ್ದು, ಚಂಡಮಾರುತದಿಂದ ಗೋಡೆ ಕುಸಿದು ಕೋಲ್ಕತ್ತಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸುಂದರಬನ್ಸ್‌ನ ಗೋಸಾಬಾ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿ ಮತ್ತೊಬ್ಬರು ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಭೂಕುಸಿತವಾಗಿದೆ. ಈ ಸಂದರ್ಭದಲ್ಲಿ ಗೋಡೆ ಕುಸಿದು ಕೋಲ್ಕತ್ತಾದಲ್ಲಿ ಒಂದು ಸಾವು ಸಂಭವಿಸಿದೆ.
Update #CycloneRemal
NDRF is closely monitoring the post landfall situation in West Bengal. 14 Rescue Teams deployed across the State now actively engaged in restoration work with local agencies. @PMOIndia@HMOIndia @BhallaAjay26 @PIBKolkata@PIBHomeAffairs @PIB_India @ANI pic.twitter.com/ZiPF66H2jr— NDRF 🇮🇳 (@NDRFHQ) May 27, 2024
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಚಂಡಮಾರುತವು ದುರ್ಬಲಗೊಂಡಿದೆ, ಕ್ರಮೇಣ ಇನ್ನಷ್ಟು ದುರ್ಬಲವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಬೆನ್ನಲ್ಲೇ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕಾರ್ಯಚರಣೆಯು ಭಾನುವಾರ ಮಧ್ಯಾಹ್ನ ಸ್ಥಗಿತಗೊಂಡಿದ್ದು ಮತ್ತೆ ವಿಮಾನ ಕಾರ್ಯಾಚರಣೆ ಪುನರಾರಂಭಗೊಂಡಿದೆ.
ಇದನ್ನು ಓದಿದ್ದೀರಾ? ರೆಮಲ್ ಚಂಡಮಾರುತದಿಂದ ಭೂಕುಸಿತ: ಬಂಗಾಳದಲ್ಲಿ ಒಂದು ಲಕ್ಷ ಜನರ ಸ್ಥಳಾಂತರ
ಇನ್ನು ರೆಮಲ್ ಚಂಡಮಾರುತವು ಸೋಮವಾರ ಈಶಾನ್ಯ ಕಡೆಗೆ ಚಲಿಸುತ್ತದೆ ಮತ್ತು ಕ್ರಮೇಣ ಚಂಡಮಾರುತದ ದುರ್ಬಲವಾಗುತ್ತದೆ. ಸೋಮವಾರ ಮತ್ತು ಮಂಗಳವಾರದಂದು ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಅಸ್ಸಾಂನ ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. 11 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ರೆಮಲ್ ಚಂಡಮಾರುತ| ಬಂಗಾಳದಲ್ಲಿ ಭೂಕುಸಿತ ಸಾಧ್ಯತೆ; ವಿಮಾನ, ರೈಲುಗಳು ರದ್ದು
ಪಶ್ಚಿಮ ಬಂಗಾಳದಲ್ಲಿ ಕರಾವಳಿ ಭಾಗದಲ್ಲಿರುವ ಸುಮಾರು 1.10 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆಗೆಯೇ ಜನರನ್ನು ನಿರಾಶ್ರಿತ ಕೇಂದ್ರ, ಶಾಲೆ, ಕಾಲೇಜುಗಳಿಗೆ ಸ್ಥಳಾಂತರಿಸಲಾಗಿದೆ.





