ಬಾಲಿವುಡ್ ಕ್ವೀನ್ ಎಂದೇ ಪ್ರಶಂಸೆ ಪಡೆದಿರುವ ನಟಿ ದೀಪಿಕಾ ಪಡುಕೋಣೆ ಅವರು ಹೊಸ ಇತಿಹಾಸ ಬರೆದಿದ್ದಾರೆ. ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ಕೊಡಮಾಡುವ ‘ಹಾಲಿವುಡ್ ವಾಕ್ ಆಫ್ ಫೇಮ್’ ಪ್ರಶಸ್ತಿ ಗಳಿಸಿದ ಭಾರತದ ಏಕೈಕ ನಟಿ ಎಂಬ ಖ್ಯಾತಿ ಗಳಿಸಿದ್ದಾರೆ.
ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್, ದೀಪಿಕಾ ಅವರಿಗೆ 2026 ರ ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ‘ಹಾಲಿವುಡ್ ವಾಕ್ ಆಫ್ ಫೇಮ್’ ಪ್ರಶಸ್ತಿಯನ್ನು ದೀಪಿಕಾ ಅವರಿಗೆ ನೀಡಿ, ಸನ್ಮಾನಿಸಿದೆ. ಪ್ರಶಸ್ತಿ ಪಡೆಯುವ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ಹೆಮ್ಮೆಪಡುವಂತೆ ಮಾಡಿದ ಜಾಗತಿಕ ಐಕಾನ್ ಆಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ.
ದೀಪಿಕಾ ಅವರು ಪ್ರತಿಷ್ಠಿತ ‘ಹಾಲಿವುಡ್ ವಾಕ್ ಆಫ್ ಫೇಮ್’ ಪ್ರಶಸ್ತಿ ಪಡೆದ ಏಕೈಕ ಭಾರತೀಯರಾಗಿದ್ದಾರೆ. ಈ ಗೌರವ ಗಳಿಸುವುದರೊಂದಿಗೆ, ದೀಪಿಕಾ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಾತ್ರವಲ್ಲದೆ, ಸಿನಿಮಾ ಕ್ಷೇತ್ರದಲ್ಲಿ ಜಾಗತಿಕವಾಗಿ ದೇಶದ ಪ್ರಭಾವವನ್ನು ಬಲಪಡಿಸಿದ್ದಾರೆ.
ಈ ಲೇಖನ ಓದಿದ್ಧೀರಾ?: ಜಾತ್ಯತೀತತೆ, ಸಮಾಜವಾದದ ಪ್ರಖರ ಪ್ರತಿಪಾದಕ ಬುದ್ಧ; ಇದನ್ನು ಮರೆಮಾಚಲಾಗದು ಆರ್‌ಎಸ್‌ಎಸ್
ಭಾರತೀಯ ಸೂಪರ್‌ಸ್ಟಾರ್ ದೀಪಿಕಾ ಅವರೊಂದಿಗೆ ನಾನಾ ದೇಶಗಳ ನಟ-ನಟಿಯರಾದ ಎಮಿಲಿ ಬ್ಲಂಟ್, ತಿಮೋತಿ ಚಲಮೆಟ್, ರಾಮಿ ಮಾಲೆಕ್, ರಾಚೆಲ್ ಮ್ಯಾಕ್ ಆಡಮ್ಸ್, ಸ್ಟಾನ್ಲಿ ಟುಸಿ, ಡೆಮಿ ಮೂರ್ ಮತ್ತು ಇನ್ನೂ ಅನೇಕರು ಹಾಲಿವುಡ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಟೈಮ್‌ನ 2018ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರಿಂದ ಹಿಡಿದು ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿಯನ್ನು ಪಡೆಯುವವರೆಗೆ ದೀಪಿಕಾ ಪಡುಕೋಣೆ ಜಾಗತಿಕ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗೆ, ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟ್ರೋಫಿಯನ್ನು ಅನಾವರಣಗೊಳಿಸುವ ಮೂಲಕ ಅವರು ಜಾಗತಿಕ ಮನ್ನಣೆ ಪಡೆದು, ಇತಿಹಾಸ ನಿರ್ಮಿಸಿದ್ದಾರೆ.




