ದೆಹಲಿ | ಮುಸ್ಲಿಮರಿಗೆ ಬಿಜೆಪಿ ಶಾಸಕನಿಂದ ಬುಲ್ಡೋಜರ್ ಬೆದರಿಕೆ: ವಿಡಿಯೋ ವೈರಲ್

Date:

ಆಸ್ತಿ, ನಿವಾಸಗಳ ಮೇಲೆ ಬುಲ್ಡೋಜರ್ ಹತ್ತಿಸುವುದಾಗಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಬಿಜೆಪಿಯ ನೂತನ ಶಾಸಕ ರವೀಂದರ್ ಸಿಂಗ್‌ ನೇಗಿ ಬೆದರಿಕೆ ಹಾಕಿರುವ ಘಟನೆ ದೆಹಲಿಯ ಪ್ರತಾಪ್‌ಗಂಜ್‌ನಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ, ದೆಹಲಿ ಪಾಲಿಕೆಯ ಕೌನ್ಸಿಲರ್‌ ಆಗಿದ್ದ ನೇಗಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ದ್ವೇಷ ಭಾಷಣ ಮಾಡುವಲ್ಲಿ ಕುಖ್ಯಾತಿ ಹೊಂದಿದ್ದರು. ಇತ್ತೀಚೆಗೆ ನಡೆದ ದೆಹಲಿ ಚುನಾವಣೆಯಲ್ಲಿ ಅವರು ಪ್ರತಾಪ್‌ಗಂಜ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರತಾಪ್‌ಗಂಜ್‌ನ ನಿವಾಸಿ ಅಬ್ದುಲ್ ರಹೀಮ್ ಎಂಬವರ ಅಸ್ತಿಯ ಮೇಲೆ ಬುಲ್ಡೋಜರ್ ಹರಿಸುವುದಾಗಿ ಶಾಸಕ ನೇಗಿ ಬೆದರಿಕೆ ಹಾಕಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಜನಸಮೂಹದ ನಡುವೆ ಪೊಲೀಸರೊಂದಿಗೆ ನೇಗಿ ಇರುವುದು ಕಾಣಿಸುತ್ತದೆ. “ನೀವು ಭೂಮಿಯನ್ನು ಖಾಲಿ ಮಾಡಬೇಕು. ಇಲ್ಲದಿದ್ದರೆ ದೊಡ್ಡ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಜೀವನದುದ್ದಕ್ಕೂ ನೀವು ಒದ್ದಾಟ ನಡೆಸಬೇಕಾಗುತ್ತದೆ. ಸ್ಥಳೀಯ ಜನರನ್ನು ವ್ಯಸನಕಾರಿಯಾಗಿಸುವ ಚಾಳಿ ನಿಲ್ಲಿಸಬೇಕು” ಎಂದು ನೇಗಿ ಧಮ್ಕಿ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಪ್ರದೇಶದಲ್ಲಿ ಯಾವುದೇ ಮಾದಕ ವಸ್ತು ಮಾರಾಟ ನಡೆಯುತ್ತಿಲ್ಲ ಎಂದು ಮುಸ್ಲಿಂ ವ್ಯಕ್ತಿ ಹೇಳಿದ್ದಾರೆ. ಆದಾಗ್ಯೂ, ದ್ವೇಷದ ಮಾತುಗಳನ್ನು ಮುಂದುವರೆಸಿರುವ ನೇಗಿ, “ಈ ಭೂಮಿ ಸರ್ಕಾರಕ್ಕೆ ಸೇರಿದೆ. ಅಬ್ದುಲ್ ಭಾಯ್, ನಾನು ಇಲ್ಲಿ ಜೆಸಿಬಿ ಓಡಿಸುತ್ತೇನೆ. ಇಲ್ಲಿರುವ ಎಲ್ಲವೂ ಒಂದು ನಿಮಿಷದಲ್ಲಿ ನಾಶವಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ.

“ಬಿಜೆಪಿ ಶಾಸಕರು ತಮ್ಮನ್ನು ಕಾನೂನಿಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಅವರು ಶಾಸಕರಾಗಿ ಒಂದು ವಾರವೂ ಆಗಿಲ್ಲ, ಇನ್ನೂ ದೆಹಲಿಯ ಮುಖ್ಯಮಂತ್ರಿಯ ಆಯ್ಕೆಯೂ ಆಗಿಲ್ಲ. ಆದರೆ ಬಿಜೆಪಿಯ ಗೂಂಡಾಗಿರಿ ಆರಂಭವಾಗಿದೆ. ಶಾಸಕರೇ ಈ ಕಾರ್ಮಿಕನ ಹೆಸರು ಅಬ್ದುಲ್ ಆಗಿದ್ದಕ್ಕಾಗಿ ಸಂತೋಷಪಡಬೇಡಿ. ಬಿಜೆಪಿ ಸರ್ಕಾರ ರಚನೆಯಾದರೆ, ಅವರು ಪ್ರತಿಯೊಬ್ಬ ಬಡ ಕಾರ್ಮಿಕರ ಗುಡಿಸಲಿನ ಮೇಲೆ ಬುಲ್ಡೋಜರ್ ಓಡಿಸುತ್ತಾರೆ” ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: 2024ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ 74.4% ಹೆಚ್ಚಳ; ಬಿಜೆಪಿಗರೇ ಪ್ರಮುಖ ಆರೋಪಿಗಳು!

“ಅದು ಹಾಗೆಯೇ ಆಗುತ್ತದೆ, ಅವರು ಅಮಿತ್, ಸುಮಿತ್, ಗುರುದೀಪ್ ಮತ್ತು ಅಬ್ದುಲ್ ಇನ್ನೂ ಯಾರೇ ಆಗಲಿ ಅವರನ್ನು ಬಿಡುವುದಿಲ್ಲ. ಅವರು ಬಡವರ ಮೇಲೆ ತಮ್ಮ ಗೂಂಡಾಗಿರಿಯನ್ನು ತೋರಿಸುತ್ತಾರೆ ಮತ್ತು ಪ್ರತಿಯೊಬ್ಬ ಬಡವರನ್ನು ಬುಲ್ಡೋಜರ್ ನಿಂದ ನಾಶಮಾಡುತ್ತಾರೆ!” ಎಂದು ಪತ್ರಕರ್ತ ಜಾಕಿರ್ ತಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹೊಸದಾಗಿ ಆಯ್ಕೆಯಾದ ಶಾಸಕರೇ, ಭೂಮಿ ಸರ್ಕಾರಿ ಆಗಿದ್ದರೆ ಮೂಲಭೂತ ಅಂಶಗಳನ್ನು ಗ್ರಹಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ – ಮಿಸ್ಟರ್. ಸರ್ಕಾರ ನಿಮ್ಮ ವೈಯಕ್ತಿಕ ಆಸ್ತಿಯಲ್ಲ; ಅದು ಜನರಿಂದ, ಜನರಿಗಾಗಿ, ಜನರಿಗೇ ಇರುವಂತಹದ್ದು. ಆದರೆ ಖಂಡಿತವಾಗಿಯೂ ನಿಮ್ಮಂತಹ ರಾಜಕಾರಣಿಗಳು ದುರ್ಬಲರ ಮುಂದೆ ತಮ್ಮ ಅಧಿಕಾರದ ದರ್ಪ ತೋರಿಸಬಾರದು. ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ, ನಿಜವಾದ ಶಕ್ತಿ ಹೇಗಿರುತ್ತದೆ ಎಂಬುದನ್ನು ಜನರು ನಿಮಗೆ ತೋರಿಸಲು ನಿರ್ಧರಿಸಿದಾಗ ಅವರನ್ನು ಎದುರಿಸಲು ಪ್ರಯತ್ನಿಸಬೇಕು” ಎಂದು NSUI ನಾಯಕ ಅನೀಶ್ ಕನ್ಸಾಲ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...