ದೆಹಲಿಯಲ್ಲಿ ಭೀಕರ ಸ್ಪೋಟ ಸಂಭವಿಸಿದೆ. ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಭಯೋತ್ಪಾದನಾ ಕೃತ್ಯದ ಆರೋಪಗಳು ಕೇಳಿಬರುತ್ತಿವೆ. ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಭೂತಾನ್ ದೊರೆಯ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಲು ಭೂತಾನ್‌ಗೆ ಹಾರಿದ್ದಾರೆ. ಭಾರತದ ಸ್ಥಬ್ಧಗೊಂಡಿರುವ ಸಮಯದಲ್ಲಿ ಮೋದಿ ‘ಬರ್ತಡೇ ಪಾರ್ಟಿ’ಗೆ ಹೋಗಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಭೂತಾನ್‌ನ 4ನೇ ದೊರೆ ಜಿಗ್ಮೆ ಸಿಂಗೈ ವಾಂಗ್ ಚುಕ್ ಅವರು ಮಂಗಳವಾರ (ನ.11) ತಮ್ಮ 70ನೇ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾರೆ. ಆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಭೂತಾನ್ ರಾಜಧಾನಿ ತಿಂಪುಗೆ ತೆರಳಿದ್ದಾರೆ. ಎರಡು ದಿನಗಳ ಕಾಲ ಭೂತಾನ್‌ನಲ್ಲಿಯೇ ಇರಲಿದ್ದು, ಭೂತಾನ್ ದೊರೆ ಜುಗ್ಮೆ ಕೇಶರ್ ನಂಗ್ಯಾಲ್ ವಾಂಗ್ ಚುಕ್, ಅವರ ತಂದೆ – ಪೂರ್ವಾಧಿಕಾರಿ ಸಿಂಗೈ ಹಾಗೂ ಪ್ರಧಾನ ಮಂತ್ರಿ ಶೇರಿಂಗ್ ತೋಬ್ಗೆ ಅವರನ್ನು ಭೇಟಿ ಮಾಡಲಿದ್ದಾರೆ.
“4ನೇ ದೊರೆಯ 70ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳುವುದು ಗೌರವದ ಸಂಗತಿ. ನನ್ನ ಭೂತಾನ್ ಭೇಟಿಯು ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಬಲಗೊಳಿಸಲಿದೆ. ಅಭಿವೃದ್ಧಿ ಎಡೆಗಿನ ನಮ್ಮ ಜಂಟಿ ಪ್ರಯತ್ನವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ” ಎಂದು ಮೋದಿ ಹೇಳಿಕೊಂಡಿದ್ದಾರೆ.
ದೆಹಲಿ ಸ್ಪೋಟದ ನಡುವೆ ಭೂತಾನ್‌ಗೆ ಮೋದಿ ತೆರಳಿರುವುದರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೆಹಲಿಯಲ್ಲಿ ದೇಶವಾಸಿಗಳ ನೆತ್ತರು ಹರಿದಿದೆ, ದೇಹ ಛಿದ್ರಛಿದ್ರವಾಗಿದೆ. ಯಾರದ್ದೋ ಹುಟ್ಟುಹಬ್ಬಕ್ಕೆ ಈ ನಾಡಿನ ದೊರೆ ಹೊರಟಿದ್ದಾರೆ” ಎಂದು ಕಿಡಿದ್ದಾರೆ.
“ಇವರಿಗೆ ವ್ಯಾಪಾರ ಒಂದು ಬಿಟ್ಟರೆ ಬೇರೆ ಏನೂ ಬೇಡ. ಯಾರು ಸಾಯಲಿ ಬಿಡಲಿ, ಅವರದ್ದು ಅಧಿಕಾರ ಮತ್ತು ವ್ಯಾಪಾರ ಎರಡೇ” ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
“ಇಲ್ಲಿ ದುರಂತ ಸಂಭವಿಸಿದಾಗಲೆಲ್ಲ ಈ ಮನುಷ್ಯ ವಿದೇಶದಲ್ಲಿ ಮೋಜು ಮಸ್ತಿಯಲ್ಲಿರ್ತಾರೆ. ಅಥವಾ ಸ್ವದೇಶದಲ್ಲಿ ಶೂಟಿಂಗ್‌ನಲ್ಲಿ ಇರ್ತಾರೆ. ನಾಟ್ ರಿಚೇಬಲ್ ಆಗಿರುತ್ತಾರೆ” ಎಂಧು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




