ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ರಜಾಪೀಠದ ನ್ಯಾಯಧೀಶರಾದ ನ್ಯಾಯ್ ಬಿಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದರು.
ಇ.ಡಿ ಪರ ಹಾಜರಾಗಿದ್ದ ವಿಶೇಷ ವಕೀಲರಾದ ಜೋಹೇಬ್ ಹುಸ್ಸೇನ್ ಅವರು, ತನಿಖಾ ಸಂಸ್ಥೆಯು ತನ್ನ ಕಾನೂನಾತ್ಮಕ ಕಾರ್ಯಗಳನ್ನು ಕೈಗೊಳ್ಳುವವರೆಗೂ ಆದೇಶಕ್ಕೆ ತಡೆ ನೀಡಬೇಕೆಂದು ವಿನಂತಿಸಿದರು. ಆದಾಗ್ಯೂ ನ್ಯಾಯಾಲಯವು ತಡೆ ನೀಡುವುದಕ್ಕೆ ನಿರಾಕರಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ
ಸಿಬಿಐ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಸಾಕ್ಷಿದಾರರಾಗಿದ್ದು,ಆರೋಪಿಯಲ್ಲ ಎಂದು ದಾಖಲೆಯಲ್ಲಿ ತೋರಿಸುತ್ತದೆ. ಇ.ಡಿಯು ಸಿಬಿಐನ ಮಾರ್ಗದರ್ಶಿಯಲ್ಲ. ಇದೊಂದು ಸ್ವತಂತ್ರ ತನಿಖಾ ಸಂಸ್ಥೆ. ಅದು ತನ್ನ ಕಾರ್ಯ ನಿರ್ವಹಿಸಬೇಕಿದೆ. ನಮ್ಮ ಕಕ್ಷಿದಾರರು ಆರೋಪಿ ಎಂದು ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಕೇಜ್ರಿವಾಲ್ ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಚುನಾವಣಾ ಪ್ರಚಾರದ ಕಾರಣ ದೆಹಲಿ ಸಿಎಂಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೂ ಜಾಮೀನು ನೀಡಿತ್ತು. ಜೂನ್ 2 ರಂದು ಕೇಜ್ರಿವಾಲ್ ಶರಣಾಗಿದ್ದರು.





