ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಅವಹೇಳನ: 5 ಲಕ್ಷ ರೂ. ಪರಿಹಾರ ಭರಿಸಲು ಟ್ವೀಟಿಗನಿಗೆ ಹೈಕೋರ್ಟ್ ಆದೇಶ

Date:

ನಟಿ ರಿಯಾ ಚಕ್ರವರ್ತಿ ಅವರ ಸಂದರ್ಶನ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಟಿವಿ ಟುಡೇ ಚಾನೆಲ್ ಮತ್ತು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರ ವಿರುದ್ಧ ಮಾನಹಾನಿಕರ ಟ್ವೀಟ್‌ ಮಾಡಿದ್ದ ಅನುರಾಗ್‌ ಶ್ರೀವಾಸ್ತವ ಎಂಬ ವ್ಯಕ್ತಿ ಟಿವಿ ಟುಡೇಗೆ ₹5 ಲಕ್ಷ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಟ್ವೀಟ್‌ಗಳು ಅತ್ಯಂತ ಮಾನಹಾನಿಕರವಾಗಿದ್ದು ಅಂತಹ ಟ್ವೀಟ್‌ಗಳಿಂದ ವರ್ಚಸ್ಸಿಗೆ ಆದ ಹಾನಿ ಸರಿಪಡಿಸಲು ಟಿವಿ ಟುಡೇಗೆ ₹5 ಲಕ್ಷ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು ತೀರ್ಪು ನೀಡಿದರು.

ಟ್ವೀಟ್‌ಗಳು ಅತಿ ಮಾನಹಾನಿಕರವಾಗಿದ್ದು ಪ್ರತಿವಾದಿ ಮಾಡಿದ ಆರೋಪಗಳು ಆಧಾರರಹಿತವಾಗಿವೆ ಎಂದು ನ್ಯಾಯಾಲಯ ಕಂಡುಕೊಂಡಿದೆ. ಆಧಾರ ಒದಗಿಸುವಂತೆ ಸಾಕಷ್ಟು ಅವಕಾಶ ನೀಡಿದ್ದರೂ ಪ್ರತಿವಾದಿಯ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದನ್ನು ಖಂಡಿಸಬೇಕಾಗಿದೆ. ಪ್ರತಿವಾದಿಯ ನಡೆಯಿಂದ ಉಂಟಾದ ವರ್ಚಸ್ಸಿಗೆ ಧಕ್ಕೆ, ಭಾವನಾತ್ಮಕ ಸಂಕಷ್ಟ ಹಾಗೂ ವೃತ್ತಿಪರ ವಿಶ್ವಾಸಾರ್ಹತೆಗೆ ಹಾನಿ ಸರಿಪಡಿಸಲು ಅರ್ಜಿದಾರರಿಗೆ ₹ 5,00,000 ಪರಿಹಾರ ನೀಡುವುದು ನ್ಯಾಯಯುತ ಎಂದು ಸೆಪ್ಟೆಂಬರ್ 3ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅನುರಾಗ್ ಶ್ರೀವಾಸ್ತವ ಎಂಬ ಟ್ವಿಟರ್ ಖಾತೆದಾರರು ತಮ್ಮ ‘@theanuragkts’ ಮತ್ತು ‘@theanuragoffice’ ಟ್ವಿಟರ್‌ ಖಾತೆಗಳಿಂದ 2020 ರಲ್ಲಿ ಟಿವಿ ಟುಡೇ ಮತ್ತು ಅದರ ನಿರೂಪಕರಾದ ರಾಜ್‌ದೀಪ್ ಸರ್ದೇಸಾಯಿ ಅವರನ್ನು ಗುರಿಯಾಗಿಸಿಕೊಂಡು ಕೆಲ ಟ್ವೀಟ್‌ಗಳನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ, 2020 ರಲ್ಲಿ ಟಿವಿ ಟುಡೇ ಸಲ್ಲಿಸಿದ ಮಾನಹಾನಿ ಮೊಕದ್ದಮೆ ದಾಖಲಿಸಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ

2020ರಲ್ಲಿ ಸರ್ದೇಸಾಯಿ ಮತ್ತು ರಿಯಾ ಚಕ್ರವರ್ತಿ ನಡೆಸಿದ ಸಂದರ್ಶನವನ್ನು ಟಿವಿ ಟುಡೇ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಅವಹೇಳನಕಾರಿ ಟ್ವೀಟ್‌ಗಳನ್ನು ಮಾಡಲಾಗಿತ್ತು.

ಶ್ರೀವಾಸ್ತವ ಅವರು ಸರ್ದೇಸಾಯಿ ಅವರನ್ನು ದಲ್ಲಾ (ತಲೆಹಿಡುಕ) ಎಂದು ನಿಂದಿಸಿದ್ದರು. ಅಲ್ಲದೆ ಅವರನ್ನು ಭಯೋತ್ಪಾದನೆ ಆರೋಪಿ ಜಾಕೀರ್‌ ನಾಯಕ್‌ ಅವರೊಂದಿಗೆ ಹೋಲಿಸಲಾಗಿತ್ತು. RIP 4th Pillar of Democracy ಎಂಬ ಹೇಳಿಕೆಯೊಡನೆ ರಿಯಾ ಚಕ್ರವರ್ತಿ ಅವರು ಸಂದರ್ಶನ ನಡೆಸಲೆಂದು ಸರ್ದೇಸಾಯಿ ಹಾಗೂ ಇಂಡಿಯಾ ಟುಡೇಗೆ ಲಂಚ ಕೊಟ್ಟಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು. ಜೊತೆಗೆ #ShameOnAajTak ಎಂಬ ಹ್ಯಾಶ್‌ಟ್ಯಾಗ್‌ ಬಳಸಲಾಗಿತ್ತು.

ಟ್ವೀಟ್‌ನಿಂದಾಗಿ ತನ್ನ ವರ್ಚಸ್ಸಿನ ಜೊತೆಗೆ ಆರ್ಥಿಕ ಸ್ಥಿತಿಗೂ ಧಕ್ಕೆಯಾಗಿದೆ ಎಂದು ಟಿವಿ ಟುಡೇ ವಾದಿಸಿತು. ಉದಾಹರಣೆಗೆ: ಅದರ ಆದಾಯವು 2019–20ರಲ್ಲಿ ₹899.57 ಕೋಟಿ ಇತ್ತು, ಆದರೆ 2020–21ರಲ್ಲಿ ₹819.92 ಕೋಟಿಗೆ ಇಳಿದಿದೆ ಎಂದು ಅದು ಹೇಳಿತು.

ಶ್ರೀವಾಸ್ತವ ಅವರು ಅಂತಿಮವಾಗಿ ಟ್ವೀಟ್‌ ಅಳಿಸಿಹಾಕಿದ್ದರು. ಜೊತೆಗೆ ಅವುಗಳನ್ನು ಮರು ಪೋಸ್ಟ್ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. 2020ರಲ್ಲಿ ಹೊರಡಿಸಿದ ಮಧ್ಯಂತರ ಆದೇಶದ ಮೂಲಕ ನ್ಯಾಯಾಲಯ ಅಂತಹ ವಸ್ತುವಿಷಯವನ್ನು ಪ್ರಕಟಿಸದಂತೆಯೂ ಅವರನ್ನು ನಿರ್ಬಂಧಿಸಿತ್ತು. ಇದೀಗ ಅವಹೇಳನಕಾರಿ ಟ್ವೀಟ್‌ಗಳಿಗಾಗಿ ಟಿವಿ ಟುಡೇಗೆ ₹5 ಲಕ್ಷ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...