ವಾಯುಮಾಲಿನ್ಯ | ದೆಹಲಿಯಲ್ಲ ದೇಶದ ‘ಟಾಪ್‌ 5’ ಅತಿ ಕಲುಷಿತ ನಗರಗಳಿವು!

Date:

ವಾಯುಮಾಲಿನ್ಯವೆಂದರೆ ನಮ್ಮ ಗಮನ ನೇರವಾಗಿ ಹೋಗುವುದು ದೆಹಲಿಯತ್ತ. ಅದೂ ದೀಪಾವಳಿ ಕಳೆಯುತ್ತಿದ್ದಂತೆ ಆರಂಭವಾಗುವ ಚಳಿಗಾಲದಲ್ಲಿ ದೆಹಲಿ ವಾಯು ಗುಣಮಟ್ಟ ಅತಿ ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಆದರೆ ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರ (CREA) ಬಿಡುಗಡೆ ಮಾಡಿರುವ ಹೊಸ ವರದಿ ಪ್ರಕಾರ ದೆಹಲಿಯು ಅಕ್ಟೋಬರ್‌ನಲ್ಲಿ ದೇಶದ ಅತ್ಯಂತ ಆರನೇ ಅತಿ ಕಲುಷಿತ ನಗರವಾಗಿದೆ. ‘ಟಾಪ್ 5’ ಅತಿ ಕಲುಷಿತ ನಗರಗಳ ಪಟ್ಟಿಯಲ್ಲಿ ಹರಿಯಾಣ, ಉತ್ತರ ಪ್ರದೇಶದ ನಗರಗಳಿವೆ.

ನಿರಂತರ ವಾಯು ಗುಣಮಟ್ಟದ ದತ್ತಾಂಶವನ್ನು ಆಧರಿಸಿ CREA ಅಧ್ಯಯನವನ್ನು ನಡೆಸಿದೆ. ಹರಿಯಾಣದ ಧರುಹೆರಾ ಅತ್ಯಂತ ಕಲುಷಿತ ನಗರವಾಗಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾಸಿಕ ಸರಾಸರಿ PM2.5 ಮಟ್ಟ 123 µg/m³ ಅನ್ನು ದಾಖಲಿಸಿದೆ. ಹಾಗೆಯೇ ಇದು ಇದು ರಾಷ್ಟ್ರೀಯ ಸುರಕ್ಷಿತ ಮಿತಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಈ ನಡುವೆ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ದೆಹಲಿಯ ಗಾಳಿಯ ಗುಣಮಟ್ಟವೂ ಗಮನಾರ್ಹವಾಗಿ ಹದಗೆಟ್ಟಿದೆ. ಅದರ ಮಾಸಿಕ ಸರಾಸರಿ 107 µg/m³ ಗೆ ಏರಿದೆ. ಅಂದರೆ ಸೆಪ್ಟೆಂಬರ್‌ಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಇದನ್ನು ಓದಿದ್ದೀರಾ? ಪಟಾಕಿ ಎಫೆಕ್ಟ್ | ದೆಹಲಿಯಲ್ಲಿ ಗಾಳಿ ಗುಣಮಟ್ಟ ತೀವ್ರ ಕುಸಿತ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಾಯುಮಾಲಿನ್ಯ: ಟಾಪ್ 10 ನಗರಗಳು ಯಾವುವು?

  1. ಧರುಹೆರಾ, ಹರಿಯಾಣ
  2. ರೋಹ್ಟಕ್, ಹರಿಯಾಣ
  3. ಗಾಜಿಯಾಬಾದ್, ಉತ್ತರ ಪ್ರದೇಶ
  4. ನೋಯ್ಡಾ, ಉತ್ತರ ಪ್ರದೇಶ
  5. ಬಲ್ಲಬ್‌ಗಢ, ಹರಿಯಾಣ
  6. ದೆಹಲಿ, ರಾಷ್ಟ್ರೀಯ ರಾಜಧಾನಿ
  7. ಭಿವಾಡಿ, ರಾಜಸ್ಥಾನ
  8. ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ
  9. ಹಾಪುರ್, ಉತ್ತರ ಪ್ರದೇಶ
  10. ಗುರ್ಗಾಂವ್(ಗುರುಗ್ರಾಮ), ಹರಿಯಾಣ

ಇಲ್ಲಿ ಟಾಪ್‌ 5ರಲ್ಲಿ ಮೂರು ಕಲುಷಿತ ನಗರಗಳು ಹರಿಯಾಣದಲ್ಲಿದ್ದರೆ, ಎರಡು ಉತ್ತರ ಪ್ರದೇಶದಲ್ಲಿದೆ. ಒಟ್ಟಾರೆಯಾಗಿ ಟಾಪ್ 10ರಲ್ಲಿ ನಾಲ್ಕು ಹರಿಯಾಣ, ನಾಲ್ಕು ಉತ್ತರ ಪ್ರದೇಶ, ಉಳಿದಂತೆ ತಲಾ ಒಂದು ದೆಹಲಿ ಮತ್ತು ರಾಜಸ್ಥಾನದ ನಗರವಾಗಿದೆ.

pollution
CREA ದತ್ತಾಂಶ

ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಹೇಗಿದೆ?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಗಾಳಿಯ ಗುಣಮಟ್ಟವು ದೈನಂದಿನ ಸರಾಸರಿ ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳಿಗಿಂತ (µg/m³) ಹೆಚ್ಚಿರಬಾರದು. ಈ ಮಿತಿಯನ್ನು ವರ್ಷದಲ್ಲಿ 3-4 ದಿನಗಳಿಗಿಂತ ಹೆಚ್ಚು ಬಾರಿ ಮೀರಬಾರದು. ಆದರೆ ದೈನಂದಿನ ಮಾನದಂಡವನ್ನು ಮೀರಿದ ನಗರಗಳ ಸಂಖ್ಯೆ ಅಕ್ಟೋಬರ್‌ನಲ್ಲಿ 243ಕ್ಕೆ ಏರಿದೆ. ಸೆಪ್ಟೆಂಬರ್ 203ರಷ್ಟಿತ್ತು.

ಹಾಗೆಯೇ ಎಕ್ಯೂಐ 2025ರ ಅಕ್ಟೋಬರ್‌ನಲ್ಲಿ ‘ಉತ್ತಮ’ (0-30 µg/m³) ಗಾಳಿಯ ಗುಣಮಟ್ಟ ಹೊಂದಿರುವ ನಗರಗಳ ಸಂಖ್ಯೆ 68ಕ್ಕೆ ಇಳಿದಿದೆ. ಸೆಪ್ಟೆಂಬರ್‌ನಲ್ಲಿ 179ಕ್ಕೆ ಇಳಿಕೆಯಾಗಿದೆ. ಹಾಗೆಯೇ ‘ತೃಪ್ತಿಕರ’ (31-60 µg/m³) ಗಾಳಿಯ ಗುಣಮಟ್ಟ ಹೊಂದಿರುವ ನಗರಗಳ ಸಂಖ್ಯೆ 52 ರಿಂದ 144 ಕ್ಕೆ ಏರಿದೆ. ಹೆಚ್ಚುವರಿಯಾಗಿ, ಸೆಪ್ಟೆಂಬರ್‌ನಲ್ಲಿ ಕೇವಲ ನಾಲ್ಕು ನಗರಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ 27 ನಗರಗಳು ‘ಮಧ್ಯಮ’ (61-90 µg/m³) ಗಾಳಿಯ ಗುಣಮಟ್ಟವನ್ನು ಹೊಂದಿದೆ. ಕಳಪೆ (91-120 µg/m³) ವರ್ಗದಲ್ಲಿ ಒಂಬತ್ತು ನಗರಗಳು ಮತ್ತು ‘ತುಂಬಾ ಕಳಪೆ’ (121-250 µg/m³) ವರ್ಗದಲ್ಲಿ ಒಂದು ನಗರವಿದೆ. ದೆಹಲಿ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿಯೇ ವಾಯುಮಾಲಿನ್ಯ ಹೆಚ್ಚಾಗಿದೆ.

ದೇಶದ ಅತಿ ಸ್ವಚ್ಛವಾದ ನಗರ ಯಾವುದು?

ಮೇಘಾಲಯ ರಾಜ್ಯದ ಶಿಲ್ಲಾಂಗ್ ಅಕ್ಟೋಬರ್‌ನಲ್ಲಿ ದೇಶದ ಅತ್ಯಂತ ಸ್ವಚ್ಛ ನಗರವಾಗಿತ್ತು. ಗಾಳಿ ಗುಣಮಟ್ಟ ಮಾಸಿಕ ಸರಾಸರಿ PM2.5, 10 µg/m³ರಷ್ಟಿತ್ತು. ಟಾಪ್ 10 ಸ್ವಚ್ಛ ನಗರಗಳಲ್ಲಿ ಕರ್ನಾಟಕದ 4 ನಗರಗಳು, ತಮಿಳುನಾಡಿನ 3 ನಗರಗಳು ಮತ್ತು ಮೇಘಾಲಯ, ಸಿಕ್ಕಿಂ ಮತ್ತು ಛತ್ತೀಸ್‌ಗಢದಿಂದ ತಲಾ ಒಂದು ನಗರಗಳು ಸೇರಿವೆ. ದೆಹಲಿಯನ್ನು ಹೊರತುಪಡಿಸಿ, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನಂತಹ ಎಲ್ಲಾ ಇತರ ಮೆಗಾಸಿಟಿಗಳು ಅಕ್ಟೋಬರ್‌ನಲ್ಲಿ ಉತ್ತಮ ಗಾಳಿ ಗುಣಮಟ್ಟ ಹೊಂದಿದ್ದವು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...