ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎನಿಸಿಕೊಂಡ ದೆಹಲಿ, ಭಾರತಕ್ಕೆ 3ನೇ ಸ್ಥಾನ

Date:

ಹೊಸ ವರದಿಯ ಪ್ರಕಾರ ಭಾರತದ ರಾಜಧಾನಿ ದೆಹಲಿಯು ಮತ್ತೊಮ್ಮೆ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎನಿಸಿಕೊಂಡಿದೆ. ಹಾಗೆಯೇ ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ. ಆದರೆ ಐಕ್ಯೂಆರ್‌ ಸಂಸ್ಥೆ 2022ರಲ್ಲಿ ನೀಡಿದ್ದ ವರದಿಯಲ್ಲಿ ಬೇಗುಸರಾಯ್ ಯಾವುದೇ ಸ್ಥಾನವನ್ನು ಪಡೆದಿರಲಿಲ್ಲ.

ಸ್ವಿಸ್ ಸಂಸ್ಥೆ IQAirನ ವಿಶ್ವ ವಾಯು ಗುಣಮಟ್ಟ ವರದಿ 2023 ಪ್ರಕಾರ ಬಾಂಗ್ಲಾದೇಶದಲ್ಲಿರುವ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ 79.9 ಮೈಕ್ರೋಗ್ರಾಂಗಳಷ್ಟು ಪಿಎಂ (Particulate Matter) ಪ್ರಮಾಣ ಕಂಡು ಬಂದಿದ್ದು, ಪಾಕಿಸ್ತಾನದಲ್ಲಿ 73.7 ಮೈಕ್ರೋಗ್ರಾಂಗಳಷ್ಟು ಪಿಎಂ ಕಂಡು ಬಂದಿದೆ. ಭಾರತದಲ್ಲಿನ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ 53.3 ಮೈಕ್ರೋಗ್ರಾಂಗಳಷ್ಟು ಪಿಎಂ (Particulate Matter) ಪ್ರಮಾಣವನ್ನು ಗುರುತಿಸಲಾಗಿದ್ದು ಭಾರತ ವಿಶ್ವದಲ್ಲೇ ಮೂರನೇ ಅತೀ ಕಲುಷಿತ ದೇಶವಾಗಿದೆ.

ಇದನ್ನು ಓದಿದ್ದೀರಾ?  ಮೋದಿಯಿಂದ ಯುಎಇಯಲ್ಲಿರುವ ಭಾರತೀಯ, ಪಾಕ್‌, ಬ್ರಿಟನ್‌ ವಲಸಿಗರಿಗೆ ಅಚ್ಚರಿಯ ವಾಟ್ಸಾಪ್ ಸಂದೇಶ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

IQAir ಸಂಸ್ಥೆ ಜಾಗತಿಕವಾಗಿ ಸುಮಾರು ಮೂವತ್ತು ಸಾವಿರ ವಾಯುಗುಣಮಟ್ಟ ತಪಾಸಣಾ ಕೇಂದ್ರಗಳು, ಮಾಲಿನ್ಯಕ್ಕೆ ಸಂಬಂಧಿಸಿತ ಸರ್ಕಾರಿ ಸಂಸ್ಥೆಗಳು, ಎನ್‌ಜಿಒ ಹಾಗೂ ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರಗಳನ್ನು ಬಳಸಿಕೊಂಡು ವರದಿ ಸಿದ್ಧಪಡಿಸಿದೆ. ಇನ್ನು ಕಳಪೆ ವಾಯುಗುಣವು ಇತ್ತೀಚೆಗೆ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ಕಾರಣದಿಂದಾಗಿ ಜಾಗತಿಕವಾಗಿ ಪ್ರತಿ ವರ್ಷ ಸುಮಾರು 70 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

2022ರಲ್ಲಿ ಭಾರತ ವಿಶ್ವದಲ್ಲೇ ಅತೀ ಕುಷಿತ ದೇಶಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿತ್ತು. ಆದರೆ ಈಗ ಮೂರನೇ ಸ್ಥಾನಕ್ಕೆ ಏರಿದೆ. 118.9 ಮೈಕ್ರೋಗ್ರಾಮ್ ಪಿಎಂ ಪ್ರಮಾಣದೊಂದಿಗೆ ಬೇಗುಸರಾಯ್ ವಿಶ್ವದಲ್ಲೇ ಅತೀ ಕಳಪೆ ವಾಯುಗುಣವನ್ನು ಹೊಂದಿರುವ ನಗರ ಎಂಬ ಕುಖ್ಯಾತಿಯನ್ನು ಪಡೆದುಕೊಂಡರೆ, ದೆಹಲಿಯು 89.1 ಮೈಕ್ರೋಗ್ರಾಮ್ ಪಿಎಂ ಪ್ರಮಾಣದೊಂದಿಗೆ ವಿಶ್ವದಲ್ಲೇ ಅತೀ ಕಳುಷಿತ ರಾಜಧಾನಿ ಎನಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ 2018ರಿಂದ ಈವರೆಗೆ ನಾಲ್ಕು ವರ್ಷಗಳಿಂದ ಅತೀ ಕಳಪೆ ವಾಯುಗುಣ ಹೊಂದಿರುವ ರಾಜಧಾನಿ ನಗರವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ಅತ್ಯಂತ ಉತ್ತಮ ವಾಯುಗುಣ ಪಿಎಂ ಪ್ರಮಾಣ 2.5 ಮೈಕ್ರೋಗ್ರಾಮ್ ಆಗಿದೆ. ಭಾರತದಲ್ಲಿ ಶೇಕಡ 66ರಷ್ಟು ನಗರಗಳು ಸರಾಸರಿ 35 ಮೈಕ್ರೋಗ್ರಾಮ್ ಪಿಎಂ ಪ್ರಮಾಣವನ್ನು ಹೊಂದಿದೆ.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...