ದೆಹಲಿಯಲ್ಲಿ ಕಾರು ಖರೀದಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳ: ವಾಯುಮಾಲಿನ್ಯಕ್ಕೆ ಇನ್ನಷ್ಟು ಕೊಡುಗೆಯೇ?

Date:

ಜನರು ಸ್ವಂತ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನೇ ಹೆಚ್ಚಾಗಿ ಖರೀದಿಸಿದ್ದಾರೆ. ಅದರಲ್ಲೂ ಹೊಸದಾಗಿ ನೋಂದಾಯಿಸಲಾದ ವಾಹನಗಳಲ್ಲಿ ಸುಮಾರು ಶೇಕಡ 75ರಷ್ಟು ವಾಹನಗಳು ಪೆಟ್ರೋಲ್‌ನಿಂದ ಚಲಿಸುವ ವಾಹನವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 

ವಾಯುಮಾಲಿನ್ಯವೆಂದರೆ ದೆಹಲಿ, ದೆಹಲಿಯೆಂದರೆ ವಾಯುಮಾಲಿನ್ಯ ಎಂಬ ಭಾವನೆ ಬರುವುದು ಸಾಮಾನ್ಯ. ಅದಕ್ಕೆ ಕಾರಣವೂ ಇದೆ. ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು(AQI) 302 ರಷ್ಟಿದ್ದು, ಇದು ‘ಅತ್ಯಂತ ಕಳಪೆ’ಯಾಗಿದೆ. ಕೆಲವೆಡೆ 350ಕ್ಕಿಂತಲೂ ಹೆಚ್ಚಾಗಿದೆ, ಅಂದರೆ ಅಷ್ಟೊಂದು ವಾಯು ಗುಣಮಟ್ಟ ಕುಸಿದಿದೆ ಎಂದರ್ಥ. ಇವೆಲ್ಲವುದಕ್ಕೂ ವಾಹನಗಳ ಹೊಗೆ, ನೆರೆ ರಾಜ್ಯದ ಕೃಷಿ ತ್ಯಾಜ್ಯ ದಹನದ ಹೊಗೆ, ಕೈಗಾರಿಕಾ ಮಾಲಿನ್ಯ ಮೊದಲಾದವುಗಳು ಕಾರಣ. ಇವೆಲ್ಲವುದರ ನಡುವೆಯೂ ದೆಹಲಿಯಲ್ಲಿ 2025ರಲ್ಲಿ ಕಾರು ಖರೀದಿ ದಾಖಲೆ ಪ್ರಮಾಣದ ಏರಿಕೆಯಾಗಿದೆ. ಅದರಲ್ಲೂ ಹೆಚ್ಚಾಗಿ ಖಾಸಗಿ ಪೆಟ್ರೋಲ್ ಕಾರುಗಳ ನೋಂದಣಿ ಅಧಿಕವಾಗಿದೆ!

2025ರಲ್ಲಿ ಒಂದು ವರ್ಷದ ಅವಧಿಯಲ್ಲಿ ದೆಹಲಿಯಲ್ಲಿ 8.2 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿದಿವೆ. ಇದು ಈವರೆಗಿನ ಅತ್ಯಧಿಕ ಸಂಖ್ಯೆ. ಒಂದೆಡೆ ಜನರಲ್ಲಿ ಖರೀದಿ ಶಕ್ತಿ ಹೆಚ್ಚಾಗಿದೆ ಎಂಬ ವಾದವಿದ್ದರೂ ಇನ್ನೊಂದೆಡೆ ಅಧಿಕ ಬಡ್ಡಿಯ ಸಾಲ ಮಾಡಿ ವಾಹನ ಖರೀದಿ ಮಾಡುವುದು ಮಾಮೂಲಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಏನೇ ಆದರೂ ದೆಹಲಿಯಲ್ಲಿ ಈ ವಾಹನ ಖರೀದಿ ಹೆಚ್ಚಳವು ಜನರು ವಾಯುಮಾಲಿನ್ಯಕ್ಕೆ, ಸಂಚಾರದಟ್ಟಣೆಗೆ ನೀಡುವ ಕೊಡುಗೆಯಂತಾಗಿದೆ. ವಾಹನ ಖರೀದಿ ಪ್ರಮಾಣ ಹೆಚ್ಚಾಗಿರುವುದು ಹೊಸ ಕಳವಳವನ್ನು ಹುಟ್ಟುಹಾಕಿದೆ!

ಇದನ್ನು ಓದಿದ್ದೀರಾ? ವಾಯುಮಾಲಿನ್ಯ | ದೆಹಲಿಯಲ್ಲ ದೇಶದ ‘ಟಾಪ್‌ 5’ ಅತಿ ಕಲುಷಿತ ನಗರಗಳಿವು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2025ರಲ್ಲಿ ನೋಂದಾಯಿಸಲಾದ 8,16,051 ಹೊಸ ವಾಹನಗಳಲ್ಲಿ, ಸುಮಾರು 7.2 ಲಕ್ಷ ಖಾಸಗಿ ವಾಹನಗಳಾಗಿವೆ. ದೆಹಲಿ ಜನರು ಸಾರ್ವಜನಿಕ ವಾಹನಗಳ ಬದಲಾಗಿ ವೈಯಕ್ತಿಕ ಸಾರಿಗೆಯ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ ಎಂಬುದನ್ನು ಇದು ಒತ್ತಿಹೇಳುತ್ತದೆ. ಜನರು ಸ್ವಂತ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನೇ ಹೆಚ್ಚಾಗಿ ಖರೀದಿಸಿದ್ದಾರೆ. ಅದರಲ್ಲೂ ಹೊಸದಾಗಿ ನೋಂದಾಯಿಸಲಾದ ವಾಹನಗಳಲ್ಲಿ ಸುಮಾರು ಶೇಕಡ 75ರಷ್ಟು ವಾಹನಗಳು ಪೆಟ್ರೋಲ್‌ನಿಂದ ಚಲಿಸುವ ವಾಹನವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 3.89 ಲಕ್ಷ ಪೆಟ್ರೋಲ್ ವಾಹನವಾದರೆ, 1.99 ಲಕ್ಷ ಪೆಟ್ರೋಲ್-ಎಥೆನಾಲ್ ವಾಹನಗಳಾಗಿವೆ.

ದೆಹಲಿಯಲ್ಲಿ ಪೆಟ್ರೋಲ್ ವಾಹನ ಬಳಕೆ ನಿಷೇಧವೇ?

ದೆಹಲಿ-ಎನ್‌ಸಿಆರ್ (NCR) ಪ್ರದೇಶದಲ್ಲಿ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಅಂತಹ ವಾಹನಗಳನ್ನು ‘ಅವಧಿ ಮುಗಿದ ವಾಹನಗಳು’ ಎಂದು ಪರಿಗಣಿಸಲಾಗುತ್ತದೆ. ರಸ್ತೆಯಲ್ಲಿ ಕಂಡುಬಂದರೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಹಾಗೆಯೇ ದೆಹಲಿಯ ಪೆಟ್ರೋಲ್ ಬಂಕ್‌ಗಳಲ್ಲಿ ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ನೀಡುವುದನ್ನು ನಿಷೇಧಿಸಲಾಗಿದೆ. ಪೆಟ್ರೋಲ್ ಚಾಲಿತ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಯಾವುದೇ ನಿಯಮ ಸದ್ಯಕ್ಕೆ ಜಾರಿಯಲ್ಲಿಲ್ಲದಿದ್ದರೂ ಇವಿ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ.

ಸಾಮಾನ್ಯವಾಗಿ ಪೆಟ್ರೋಲ್ ಎಂಜಿನ್‌ ಒಳಗೊಂಡ ವಾಹನಗಳು ಚಲಿಸುವಾಗ ಕಾರ್ಬನ್ ಮಾನಾಕ್ಸೈಡ್ (CO), ಸಾರಜನಕದ ಆಕ್ಸೈಡ್‌ಗಳು (NOx) ಮತ್ತು ಹೈಡ್ರೋಕಾರ್ಬನ್‌ಗಳಂತಹ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಈ ಮಾಲಿನ್ಯಕಾರಕರಗಳು ಗಾಳಿಯಲ್ಲಿ ಬೆರೆತು ವಾಯುಮಾಲಿನ್ಯ ಹೆಚ್ಚಾಗುತ್ತದೆ. ಜನರಿಗೆ ಉಸಿರಾಟದ ತೊಂದರೆ, ಅಸ್ತಮಾ, ಶ್ವಾಸಕೋಶದ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಈ ಕಾರಣದಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ವಾಹನಗಳ ಬಳಕೆಗೆ ಕೆಲವು ನಿಯಮ, ನಿರ್ಬಂಧಗಳಿವೆ. ಆ ನಡುವೆಯೂ 2025ರಲ್ಲಿ ಎಲೆಕ್ಟ್ರಿಕ್ ವಾಹನ(ಇವಿ) ಬದಲಾಗಿ ಜನರು ಪೆಟ್ರೋಲ್ ವಾಹನಗಳ ಮೊರೆ ಹೋಗಿರುವುದು ಆತಂಕ ಸೃಷ್ಟಿಸಿದೆ.

ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್ ನೀಡಿರುವ ಹೇಳಿಕೆ ಅವಲೋಕನೆಗೆ ಒಳಗಾಗಬೇಕಾಗಿರುವಂತದ್ದು. “ಕಾರು ಸದ್ಯ ಕೇವಲ ಸಾರಿಗೆ ಸಾಧನವಾಗಿಲ್ಲ. ಬದಲಾಗಿ ‘ಸ್ಥಿತಿಗತಿಯ ಸಂಕೇತ’ವಾಗಿ ಬದಲಾಗಿದೆ. ಜನರು ಬೈಕ್ ಬಳಕೆಯನ್ನು ನಿಲ್ಲಿಸಿ, ನಾಲ್ಕು ಚಕ್ರದ ವಾಹನಗಳು(ಕಾರು) ಖರೀದಿಸಲು ಹಣ ಉಳಿತಾಯ ಮಾಡುತ್ತಿದ್ದಾರೆ” ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುತ್ತಾ ಸಿಜೆಐ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ದೆಹಲಿ ವಾಯುಮಾಲಿನ್ಯ | ಬಡವರ ಸುರಕ್ಷತೆ ಸರ್ಕಾರದ ಜವಾಬ್ದಾರಿಯಲ್ಲವೇ?

ಸಿಜೆಐ ಹೇಳುವಂತೆ ಜನರು ಪ್ರಸ್ತುತ ಕಾರು ಖರೀದಿಗಾಗಿ ಹಣ ಉಳಿತಾಯ ಮಾಡುತ್ತಾರೆ. ಕಾರು ಎಂಬುದು ತಮ್ಮ ಆರ್ಥಿಕ ಸ್ಥಿತಿಗೆ, ಘನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬ ಭಾವನೆಯಿದೆ. “ಭಾರತದಲ್ಲಿ ಕಾರು ಮಾಲೀಕತ್ವ ಮತ್ತು ಅವಲಂಬನೆ ಹೆಚ್ಚಳ” 2014ರ ಸಂಶೋಧನೆ ಮತ್ತು “ಭಾರತೀಯ ವಾಹನ ಮಾಲೀಕತ್ವ: ಸಾಹಿತ್ಯ ವಿಮರ್ಶೆಯಿಂದ ಒಳನೋಟಗಳು, ತಜ್ಞರ ಸಂದರ್ಶನಗಳು” ಎಂಬ ಸಂಶೋಧನಾ ವರದಿ ಪ್ರಕಾರ, ಭಾರತದಲ್ಲಿ ಕಾರು ಹೊಂದಿರುವ ಐಷಾರಾಮಿ, ಸಾಮಾಜಿಕ ಗೌರವ ಮತ್ತು ಆರ್ಥಿಕ ಸ್ಥಿತಿಯ ಸಂಕೇತವಾಗಿ ಜನರು ಪರಿಗಣಿಸುತ್ತಾರೆ. ಕಾರು ಹೊಂದಿರುವವರನ್ನು ಆರ್ಥಿಕವಾಗಿ ಸದೃಢರೆಂಬ ಭಾವನೆ ಇರುವ ಕಾರಣದಿಂದಾಗಿಯೇ ಜನರು ಸಾಲದ ಹೊರೆ ಹೆಚ್ಚಿಸಿಕೊಂಡಾದರೂ ಕಾರು ಖರೀದಿಸುತ್ತಾರೆ.

ವಾಸ್ತವದಲ್ಲಿ ಜನರಲ್ಲಿ ಈ ಮನೋಭಾವನೆ ಇರುವವರೆಗೂ ದೇಶದಲ್ಲಿ ವಾಯುಮಾಲಿನ್ಯ ಸಮಸ್ಯೆ ಕಡಿಮೆಯಾಗದು ಬದಲಾಗಿ ಇನ್ನಷ್ಟೂ ಉಲ್ಬಣವಾಗುತ್ತದೆ. ಜನರ ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡುವ ವಾಯುಮಾಲಿನ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ಸರ್ಕಾರ ಮಾತ್ರವಲ್ಲ, ನಾವೂ ಕೂಡಾ. ರಾಜಕೀಯದಾಟದಲ್ಲಿ ಮುಳುಗಿರುವ ಸರ್ಕಾರಗಳಿಗೆ ಇದು ಯಾವುದೂ ಸಮಸ್ಯೆಯೇ ಅನಿಸದು. ಬರೀ ನೆಪ ಮಾತ್ರಕ್ಕೆ ವಾಯುಮಾಲಿನ್ಯ ನಿಯಂತ್ರಣ ಯೋಜನೆಗಳು ಜಾರಿಗೆ ಬರುತ್ತವೆ. ಆದರೆ ಜನಸಾಮಾನ್ಯನರು ಎಚ್ಚೆತ್ತುಕೊಳ್ಳುವುದು, ಸಾಧ್ಯವಾದಷ್ಟು ‘ವಾಯುಮಾಲಿನ್ಯಕ್ಕೆ ತಮ್ಮ ಕೊಡುಗೆ’ಯನ್ನು ಕಡಿಮೆ ಮಾಡುವುದು ಉತ್ತಮ ಮತ್ತು ಅನಿವಾರ್ಯ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...