ಔಷಧಿಯೊಂದು ಮಾರುಕಟ್ಟೆಗೆ ಬರುವ ಮೊದಲು ಎಷ್ಟು ಪರೀಕ್ಷೆಗಳ ಪಾಸು ಮಾಡಬೇಕು ಗೊತ್ತೇ?

Date:

ಮಹಾರಾಷ್ಟ್ರದಲ್ಲಿ ಕೆಮ್ಮಿನ ಸಿರಪ್‌ ಸೇವನೆಯ ನಂತರ ಮಕ್ಕಳು ಸಾವಿಗೀಡಾದ ಪ್ರಕರಣ ದೇಶಾದ್ಯಂತ ತಲ್ಲಣವುಂಟುಮಾಡಿದೆ. ದೇಶದಲ್ಲಿ ಔಷಧ ಗುಣಮಟ್ಟ ಮತ್ತು ನಿಯಂತ್ರಣ ವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗಾಂಬಿಯಾ, ಉಜ್ಬೇಕಿಸ್ತಾನ ಸೇರಿದಂತೆ ಕೆಲ ದೇಶಗಳಲ್ಲಿ ಭಾರತದಿಂದ ರಫ್ತುಗೊಂಡ ಕೆಮ್ಮಿನ ಸಿರಪ್‌ ಸೇವಿಸಿದ ಮಕ್ಕಳ ಸಾವಿನ ವರದಿಗಳು ಭಾರತವೂ ಸೇರಿದಂತೆ ಜಾಗತಿಕವಾಗಿ ಚಿಂತೆಯನ್ನು ಹುಟ್ಟುಹಾಕಿದವು. ಆಗಾಗ ತಲೆದೋರುತ್ತಿರುವ ಇಂತಹ ಪ್ರಕರಣಗಳು ಭಾರತದಲ್ಲಿನ ಔಷಧ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ಬಲ ಮತ್ತು ದುರ್ಬಲತೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಕೇಂದ್ರ ಸರ್ಕಾರ ಹೇಳುವಂತೆ, ಭಾರತವನ್ನು ವಿಶ್ವದ ‘ಫಾರ್ಮಸಿ ಆಫ್ ದಿ ವರ್ಲ್ಡ್’ ಎಂದು ಕರೆಯಲಾಗುತ್ತದೆ. ಆದರೆ, ಈ ಖ್ಯಾತಿಯನ್ನು ಉಳಿಸಿಕೊಳ್ಳಲು ನಮ್ಮ ಔಷಧ ನಿಯಂತ್ರಣ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

ಒಂದು ಔಷಧ ಮಾರುಕಟ್ಟೆಗೆ ಬರುವ ಮೊದಲು, ಅದನ್ನು ತಯಾರಿಸುವ ಕಂಪನಿಯು ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಆಕ್ಟ್-1940 ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರವಾನಗಿ ಪಡೆಯಬೇಕಾಗುತ್ತದೆ. ಈ ಪರವಾನಗಿ ಪಡೆಯಲು ಕಂಪನಿಯು ಗುಡ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರಕ್ಟೀಸಸ್‌ (GMP) ಎಂದು ಕರೆಯಲ್ಪಡುವ ಅಂತಾರಾಷ್ಟ್ರೀಯ ಮಟ್ಟದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಉತ್ಪಾದನಾ ಘಟಕದ ಸ್ವಚ್ಛತೆ, ಉಪಕರಣಗಳ ಗುಣಮಟ್ಟ, ಸಿಬ್ಬಂದಿಯ ಅರ್ಹತೆ ಮತ್ತು ಸುರಕ್ಷತಾ ಕ್ರಮಗಳು… ಇವೇ ಮೊದಲಾದ ಅಂಶಗಳು ಆ ನಿಯಮದಲ್ಲಿರುತ್ತವೆ. ಗುಣಮಟ್ಟದ ಮಾನದಂಡವನ್ನು ಖಚಿತಪಡಿಸಿಕೊಳ್ಳಲು ಈ ಹಂತದಲ್ಲೇ ಅವೆಲ್ಲವನ್ನೂ ಪರಿಶೀಲನೆಗೊಳಪಡಿಸಲಾಗುತ್ತದೆ.

ನಿಯಮಗಳನ್ನೆಲ್ಲ ದಾಟಿ ಔಷಧ ತಯಾರಾದ ನಂತರವೂ ಕಂಪನಿಯು ಅದನ್ನು ಮಾರುಕಟ್ಟೆಗೆ ಬಿಡುವ ಮೊದಲು ಆಂತರಿಕ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆಯಲ್ಲಿ ಔಷಧದ ರಾಸಾಯನಿಕ ಸಂಯೋಜನೆ ಸರಿಯಾದ ಪ್ರಮಾಣದಲ್ಲಿದೆಯೇ? ಯಾವುದೇ ಹಾನಿಕಾರಕ ಅಶುದ್ಧಿಗಳು ಅಥವಾ ವಿಷಕಾರಿ ಪದಾರ್ಥಗಳ ಅಂಶವಿಲ್ಲವೇ? ಎಂಬುದನ್ನು ನಿಖರವಾಗಿ ಪರಿಶೀಲಿಕೊಳ್ಳಬೇಕು. ಈ ಹಂತದಲ್ಲಿ ಪಾಸಾದ ನಂತರವಷ್ಟೇ ಔಷಧವನ್ನು ಪ್ಯಾಕ್‌ ಮಾಡಿ ಮಾರಾಟಕ್ಕೆ ಬಿಡಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಂದುವರೆದು ಒಂದು ಔಷಧದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಉತ್ಪಾದನಾ ಕಂಪನಿಯ ಪರೀಕ್ಷೆಯಷ್ಟೇ ಸಾಕಾಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗಳು (State Drug Controllers ಮತ್ತು CDSCO) ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳಿಂದ ಯಾದೃಚ್ಛಿಕವಾಗಿ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರದ ಪ್ರಯೋಗಾಲಗಳಿಗೆ ರವಾನಿಸುತ್ತವೆ. ಈ ಹಂತದಲ್ಲಿಯೂ ಶುದ್ಧತೆ, ಪರಿಣಾಮ, ರಾಸಾಯನಿಕಗಳ ಪ್ರಮಾಣ, ವಿಷಕಾರಿ ಅಂಶಗಳ ಪತ್ತೆ ಸೇರಿದಂತೆ ಮುಂತಾದ ಅಂಶಗಳನ್ನು ತಪಾಸಣೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ವ್ಯತ್ಯಾಸ ಪತ್ತೆಯಾದರೆ ಆ ಔಷಧವನ್ನು ʼನಾಟ್‌ ಆಫ್‌ ಸ್ಟ್ಯಾಂಡರ್ಡ್‌ ಕ್ವಾಲಿಟಿʼ ಎಂದು ಪರಿಗಣಿಸಿ, ಕಂಪನಿಗೆ ಉತ್ಪನ್ನವನ್ನು ಡೆಸ್ಟ್ರಾಯ್‌ ಮಾಡುವಂತೆ ಅಥವಾ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಇಲ್ಲಿ ಗಂಭೀರ ಉಲ್ಲಂಘನೆಗಳೇನಾದರೂ ಕಂಡುಬಂದಲ್ಲಿ ಕಂಪನಿಯ ಪರವಾನಗಿ ರದ್ದುಪಡಿಸುವುದರಿಂದ ಹಿಡಿದು ಶಿಕ್ಷೆಗೊಳಪಡಿಸುವವರೆಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ತಮಿಳುನಾಡಿನ ಕಾಂಚಿಪುರಮ್‌ನ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ ತಯಾರಿಸಿದ್ದ ಕೆಮ್ಮಿನ ಸಿರಪ್‌ ʼಕೋಲ್ಡ್ರಿಫ್ʼ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಲವು ಮಕ್ಕಳು ಸಾವಿಗೀಡಾಗಿವೆ. ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಅದರ ಮಾರಾಟ, ಖರೀದಿ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ರಾಜ್ಯದ ಎಲ್ಲಾ ಔಷಧ ಅಂಗಡಿಗಳು, ವಿತರಕರು, ಆಸ್ಪತ್ರೆಗಳು ಹಾಗೂ ವೈದ್ಯರು ಈ ಸಿರಪ್‌ನ್ನು ಖರೀದಿಸಬಾರದು, ಮಾರಾಟ ಮಾಡಬಾರದು/ರೋಗಿಗಳಿಗೆ ನೀಡಬಾರದು ಎಂದು ಪಂಜಾಬ್ ಸರ್ಕಾರ ಆದೇಶಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಿಡ್ನಿ ಸೇರಿದಂತೆ ಹಲವು ಅಂಗಾಂಗಗಳನ್ನು ಹಾನಿಗೊಳಿಸಬಹುದಾದ ಡೈಥಿಲಿನ್ ಗ್ಲೈಕಾಲ್ (Diethylene Glycol – DEG) ಅಥವಾ ಇಥಿಲಿನ್ ಗ್ಲೈಕಾಲ್ ಎಂಬ ಅಪಾಯಕಾರಿ ರಾಸಾಯನಿಕ ಈ ಸಿರಪ್‌ನಲ್ಲಿ ಕಂಡುಬಂದಿಲ್ಲ ಎಂದು ವರದಿಗಳು ಹೇಳಿವೆ. ಆದರೆ ಇದೇ ವಿಷಕಾರಿ ಅಂಶಗಳು ಗಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲಿನ ಮಕ್ಕಳ ಸಾವಿನ ಪ್ರಕರಣಗಳಲ್ಲಿಯೂ ಪತ್ತೆಯಾಗಿದ್ದವು.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವುಗಳ ನಂತರ, ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, “ಮಕ್ಕಳಲ್ಲಿನ ತೀವ್ರವಾದ ಕೆಮ್ಮು ಸ್ವಯಂ-ಸೀಮಿತವಾಗಿರುತ್ತವೆ ಮತ್ತು ಔಷಧಿ ನೀಡದೆಯೂ ವಾಸಿಯಾಗುತ್ತವೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ಶಿಫಾರಸು ಮಾಡಬಾರದು” ಎಂದು ಸೂಚಿಸಿದೆ. ಯಾವುದೇ ಔಷಧಿಯನ್ನು ಎಚ್ಚರಿಕೆಯಿಂದ, ಕ್ಲಿನಿಕಲ್ ಮೇಲ್ವಿಚಾರಣೆಯೊಂದಿಗೆ ಮತ್ತು ಸೂಕ್ತ ಡೋಸೇಜ್‌ನೊಂದಿಗೆ ಬಳಸಬೇಕು. ವೈದ್ಯರು ಸೂಚಿಸಿದ ಪ್ರಿಸ್ಕ್ರಿಪ್ಷನ್‌ಗೆ ಮಾತ್ರ ಬದ್ಧರಾಗುವ ಬಗ್ಗೆ ಎಲ್ಲರಿಗೂ ಅರಿವಿರಬೇಕು ಎಂದು DGHS ಸ್ಪಷ್ಟಪಡಿಸಿದೆ.

ಭಾರತದಿಂದ ಹೊರ ದೇಶಗಳಿಗೆ ರಫ್ತು ಮಾಡುವ ಕಂಪನಿಗಳು Certificate of Pharmaceutical Product ಪಡೆಯಬೇಕಾದರೂ, ಹಲವಾರು ಬಾರಿ ರಫ್ತುಗೊಳ್ಳುವ ಬ್ಯಾಚ್‌ಗಳು ಸ್ಥಳೀಯ ನಿಯಂತ್ರಕರಿಂದ ಮಾದರಿ ಪರೀಕ್ಷೆಗೆ ಒಳಪಡುವುದಿಲ್ಲ. ಇದೇ ಕಾರಣದಿಂದಾಗಿ ಕೆಲ ಸಿರಪ್‌ಗಳಲ್ಲಿ ವಿಷಕಾರಿ ಪದಾರ್ಥಗಳಿರುವುದು ಪತ್ತೆಯಾಗದೆ ವಿದೇಶಿ ಮಾರುಕಟ್ಟೆಗೆ ತಲುಪಿದ್ದು, ಅಲ್ಲಿಯೇ ದುರ್ಘಟನೆಗಳಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಸಿದೆ.

ಭಾರತವು ಜಗತ್ತಿನ ಅತಿದೊಡ್ಡ ಔಷಧ ತಯಾರಕ ರಾಷ್ಟ್ರಗಳಲ್ಲಿ ಮೂರನೇ ಸ್ಥಾನದಲ್ಲಿದ್ದು, ಸುಮಾರು 3,000 ಕಂಪನಿಗಳು 10,000ಕ್ಕೂ ಹೆಚ್ಚು ಘಟಕಗಳಲ್ಲಿ ಜೆನರಿಕ್ ಔಷಧಗಳನ್ನು ತಯಾರಿಸುತ್ತಿವೆ. ಈ ಔಷಧಗಳನ್ನು ಕಡಿಮೆ ಬೆಲೆಗೆ 200ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. 2024–25ರಲ್ಲಿ ಭಾರತದ ಔಷಧ ರಫ್ತು ಮೌಲ್ಯ ₹2.66 ಲಕ್ಷ ಕೋಟಿಗೆ ತಲುಪಿದೆ. ಜಾಗತಿಕ ಲಸಿಕೆ ಬೇಡಿಕೆಯಲ್ಲಿ ಶೇ.50, ಅಮೆರಿಕಾದ ಜೆನರಿಕ್ ಔಷಧಗಳಲ್ಲಿ ಶೇ.40 ಮತ್ತು ಇಂಗ್ಲೆಂಡ್‌ನ ಎಲ್ಲ ಔಷಧಗಳಲ್ಲಿ ಶೇ.25ರಷ್ಟು ಪೂರೈಕೆ ಭಾರತದಿಂದಲೇ ಆಗುತ್ತದೆ. ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಮಾರಾಟವಾಗುವ ಔಷಧಗಳ ಪ್ರಮುಖ ಪೂರೈಕೆದಾರವೂ ಭಾರತವೇ ಆಗಿದೆ. ಎಚ್‌ಐವಿ ಚಿಕಿತ್ಸೆಗೆ ಬೇಕಾದ ಔಷಧಗಳ ಪೈಕಿ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಭಾರತ ಪೂರೈಸುತ್ತದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು

ಆದರೆ, ಭಾರತದಲ್ಲಿ ತಯಾರಾಗುವ ಔಷಧಗಳ ಗುಣಮಟ್ಟದ ಬಗ್ಗೆ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಪ್ರಶ್ನೆಗಳು ಕೇಳಿಬರುತ್ತಿವೆ. ಹಲವಾರು ದೇಶಗಳು ಭಾರತದಿಂದ ಆಮದು ಮಾಡಲಾಗುವ ಕೆಲವು ಔಷಧಗಳ ಮೇಲೆ ನಿಷೇಧ ಹೇರಿರುವ ಘಟನೆಗಳೂ ನಡೆದಿವೆ. ಇತ್ತೀಚಿನ ಉದಾಹರಣೆಯಾಗಿ, ಐರೋಪ್ಯ ಒಕ್ಕೂಟವು ವೈಜ್ಞಾನಿಕ ಕಾರಣಗಳನ್ನು ಉಲ್ಲೇಖಿಸಿ ಭಾರತದ ಸುಮಾರು 700 ಜೆನರಿಕ್ ಔಷಧಗಳನ್ನು ನಿಷೇಧಿಸಿದೆ. ಇದೇ ರೀತಿ ಅಮೆರಿಕ ಕೂಡಾ ತಯಾರಿಕಾ ಹಂತದಲ್ಲಿನ ಗುಣಮಟ್ಟದ ಕೊರತೆಗಳನ್ನು ಉಲ್ಲೇಖಿಸಿ ಭಾರತದ ರ್ಯಾನ್‌ಬಾಕ್ಸಿ ಕಂಪನಿಯ ಕೆಲವು ಔಷಧಗಳ ಮೇಲೆ ನಿರ್ಬಂಧ ಹೇರಿತ್ತು ಮತ್ತು ಕಂಪನಿಗೆ ಭಾರೀ ದಂಡ ವಿಧಿಸಿತ್ತು. ಇಂತಹ ಘಟನೆಗಳು ಭಾರತೀಯ ಔಷಧೋದ್ಯಮದ ವಿಶ್ವಾಸಾರ್ಹತೆ ಮೇಲೆ ನೆರಳನ್ನು ಬೀರುತ್ತಿದ್ದು, ಗುಣಮಟ್ಟ ನಿಯಂತ್ರಣವನ್ನು ಇನ್ನಷ್ಟು ಕಠಿಣಗೊಳಿಸುವ ಅಗತ್ಯವನ್ನು ತೋರಿಸುತ್ತವೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಭಾರತದ ಮುಂದಿರುವ ಇಂದಿನ ಸವಾಲು ದೊಡ್ಡದು. ಗುಣಮಟ್ಟ ನಿಯಂತ್ರಣ, ಕಠಿಣ ಕಾನೂನು ಜಾರಿ ಮತ್ತು ಸುರಕ್ಷತಾ ಪರೀಕ್ಷೆಗಳಲ್ಲಿ ನಿರ್ಲಕ್ಷ್ಯ ತೋರಿದರೆ ಜಾಗತಿಕ ಮಟ್ಟದಲ್ಲಿ ಅಪಮಾನಕ್ಕೀಡಾಗಬೇಕಾದೀತು. ಹೆಚ್ಚಾಗಿ ಜನರ ಆರೋಗ್ಯ ಅಪಾಯಕ್ಕೆ ಸಿಲುಕುತ್ತದೆ. ಗಾಂಬಿಯಾ, ಉಜ್ಬೇಕಿಸ್ತಾನದಿಂದ ಹಿಡಿದು ದೇಶದ ಒಳನಾಡಿನವರೆಗೆ ಪುನರಾವರ್ತನೆಯಾಗುತ್ತಿರುವ ಈ ಘಟನೆಗಳು ವ್ಯವಸ್ಥೆಯ ದುರ್ಬಲತೆಗಳನ್ನು ಬಯಲಿಗೆಳೆಯುತ್ತಿವೆ. ಕೇವಲ ರಫ್ತು ಅಂಕಿ ಅಂಶಗಳ ಹೆಮ್ಮೆಯಲ್ಲದೆ, ಉತ್ಪನ್ನದ ಪ್ರತಿಯೊಂದು ಹಂತದಲ್ಲಿಯೂ ಪಾರದರ್ಶಕತೆ ಮತ್ತು ಕಠಿಣ ಮಾನದಂಡಗಳನ್ನು ಅನುಸರಿಸುವುದು ಈಗ ಅಗತ್ಯವಾಗಿದೆ. ಅದಾಗಿಯೇ ಭಾರತವು ತನ್ನ ಹೆಸರಿನಂತೆ ನಿಜವಾದ ಅರ್ಥದಲ್ಲಿ ʼಫಾರ್ಮಸಿ ಆಫ್ ದಿ ವರ್ಲ್ಡ್ʼ ಎಂಬ ಬಿರುದನ್ನು ನಿಸ್ಸಂಕೋಚವಾಗಿ ಒಪ್ಪಿಕೊಳ್ಳಬಹುದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...