ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ 10 ಮಕ್ಕಳು ವಿಷಕಾರಿ ಕಫ್ ಸಿರಪ್ ಸೇವನೆಯಿಂದ ಮೃತಪಟ್ಟ ಹಿನ್ನಲೆಯಲ್ಲಿ, ಆ ಔಷಧವನ್ನು ಪರ್ಸ್ಕ್ರೈಬ್ ಮಾಡಿದ ಡಾ. ಪ್ರವೀಣ್ ಸೋನಿ ಅವರನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಬಳಿಕ, ಸ್ರೇಸನ್ ಫಾರ್ಮಾಸ್ಯೂಟಿಕಲ್ಸ್ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯಿದೆ ಸೆಕ್ಷನ್ 27(A)ಹಾಗೂ ಭಾರತೀಯ ನ್ಯಾಯಕ ಸಂಹಿತೆ ಸೆಕ್ಷನ್‌ಗಳು 105 ಮತ್ತು 276ರ ಅಡಿ ದಾಖಲಿಸಲಾಗಿದೆ. ದೂರುದಾರರಾಗಿ ಪಾರಾಸಿಯಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಂಕಿತ್ ಸಾಹ್ಲಂ ಕಾರ್ಯನಿರ್ವಹಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಡಾ. ಸೋನಿ ಅವರು ಬಾಧಿತ ಮಕ್ಕಳಲ್ಲಿ ಹೆಚ್ಚಿನವರಿಗೆ ಡಾ. ಸೋನಿ ಕೋಲ್ಡ್‌ರಿಫ್ ಕೆಮ್ಮು ಸಿರಪ್ ಅನ್ನು ಸೂಚಿಸಿದ್ದರು. ಶುಕ್ರವಾರ ಬಿಡುಗಡೆಯಾದ ಪ್ರಯೋಗಾಲಯ ವರದಿಯ ಪ್ರಕಾರ, ಈ ಸಿರಪ್‌ನಲ್ಲಿ ಶೇ. 48.6 ಡೈಎಥಿಲೀನ್ ಗ್ಲೈಕಾಲ್ (DEG) ಎಂಬ ವಿಷಕಾರಿ ರಾಸಾಯನಿಕವಿದೆ, ಇದು ಮೂತ್ರಪಿಂಡ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸ್ರೇಸುನ್ ಫಾರ್ಮಾಸ್ಯೂಟಿಕಲ್ಸ್ ತಯಾರಿಸಿದ ಕೋಲ್ಡ್‌ರಿಫ್ ಸಿರಪ್‌ನ ಮಾದರಿಗಳಲ್ಲಿ ಡೈಎಥಿಲೀನ್ ಗ್ಲೈಕಾಲ್ ಇರುವುದು ದೃಢಪಟ್ಟ ನಂತರ, ಮಧ್ಯಪ್ರದೇಶ ಸರ್ಕಾರವು ಶನಿವಾರ ಈ ಸಿರಪ್‌ನ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯದ ಅಕ್ಟೋಬರ್ 2 ರ ವರದಿಯಲ್ಲಿ ಈ ಸಿರಪ್ “ಗುಣಮಟ್ಟಕ್ಕೆ ತಕ್ಕದಾಗಿಲ್ಲ ಮತ್ತು ದೋಷಪೂರಿತ” ಎಂದು ಕಂಡುಬಂದಿದೆ.
ಈ ವಿಷಕಾರಿ ರಾಸಾಯನಿಕವು ತೀವ್ರವಾದ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದಾದ್ದರಿಂದ, ಈ ಔಷಧವನ್ನು ಮಾನವ ಬಳಕೆಗೆ ಅಸುರಕ್ಷಿತವೆಂದು ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಕೋಲ್ಡ್‌ರಿಫ್ ಸಿರಪ್‌ನ ಮಾರಾಟ, ವಿತರಣೆ ಮತ್ತು ವಿಲೇವಾರಿಯನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಿದೆ.
ತಮಿಳುನಾಡು ಸರ್ಕಾರವೂ ಇದೇ ಕಂಪನಿಯ ಮೇಲೆ ಕ್ರಮ ಕೈಗೊಂಡಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನಗಳಲ್ಲಿ ಒಟ್ಟು 12 ಮಕ್ಕಳ ಸಾವುಗಳು ಈ ವಿಷಕಾರಿ ಸಿರಪ್‌ನೊಂದಿಗೆ ಸಂಬಂಧ ಹೊಂದಿವೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತಿವೆ.





