ಸ್ಟೆಥಸ್ಕೋಪ್ ಬಿಟ್ಟು ರಾಜಕಾರಣಕ್ಕೆ: ತೆಲಂಗಾಣ ವಿಧಾನಸಭೆಗೆ ಆಯ್ಕೆಯಾದ 15 ವೈದ್ಯರು

Date:

ಸ್ಟೆಥಸ್ಕೋಪ್ ಹಿಡಿದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೀಗ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಸಲುವಾಗಿ ವಿಧಾನಸಭೆಯ ಮೆಟ್ಟಿಲು ತುಳಿದಿದ್ದಾರೆ. ಭಾರಿ ಕುತೂಹಲಕಾರಿ ವಿದ್ಯಮಾನದಲ್ಲಿ ತೆಲಂಗಾಣ ಚುನಾವಣೆಯಲ್ಲಿ 15 ವೈದ್ಯರು ಗೆಲುವು ಗಳಿಸಿದ್ದು, ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಜಯಗಳಿಸಿರುವ 15 ವೈದ್ಯರಲ್ಲಿ 11 ಮಂದಿ ಕಾಂಗ್ರೆಸ್, ಬಿಆರ್‌ಎಸ್‌ 3 ಹಾಗೂ ಬಿಜೆಪಿಯಿಂದ ಒಬ್ಬರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸಿನಿಂದ ನಿಜಾಮಾಬಾದ್ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಡಾ ಆರ್ ಭೂಪತಿ ರೆಡ್ಡಿ, ಡಾ. ರಾಮ್ ಚಂದರ್ ನಾಯ್ಕ್ (ಡೋರ್ನಕಲ್), ಡಾ ವಂಶಿ ಕೃಷ್ಣ (ಅಚಂಪೇಟೆ), ಡಾ ಮುರಳಿ ನಾಯ್ಕ್ (ಮಹಬೂಬಾಬಾದ್), ಡಾ ಕೆ ಸತ್ಯ ನಾರಾಯಣ (ಮನಕೊಂಡೂರು) ಕ್ಷೇತ್ರಗಳಿಂದ ತೆಲಂಗಾಣ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಚೆನ್ನೈ ನಂತರ ಆಂಧ್ರಕ್ಕೆ ಅಪ್ಪಳಿಸಿದ ಮಿಚಾಂಗ್ ಚಂಡಮಾರುತ

ನಾರಾಯಣ ಪೇಟೆಯಿಂದ ಡಾ. ಪರ್ಣಿಕಾ ರೆಡ್ಡಿ, ನಾರಾಯಣಖೇಡ್‌ನಿಂದ ಮಕ್ಕಳ ತಜ್ಞ ಡಾ.ಪಿ. ಸಂಜೀವ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಮೇಡಕ್‌ನಿಂದ ಡಾ ಮೈನಂಪಲ್ಲಿ ರೋಹಿತ್, ಚೆನ್ನೂರು ಕ್ಷೇತ್ರದಿಂದ ವಿವೇಕ್ ವೆಂಕಟಸ್ವಾಮಿ, ಸತ್ತುಪಲ್ಲಿಯಿಂದ ಎಂ ರಾಗಮಯಿ, ನಾಗರ್ಕರ್ನೂಲ್‌ನಿಂದ ಡಾ ಕುಚುಕುಲ್ಲಾ ರಾಜೇಶ್ ರೆಡ್ಡಿ ವಿಧಾನಸಭೆ ಪ್ರವೇಶಿಸಿದ್ದು ಇವರೆಲ್ಲರೂ ಹಸ್ತದ ಗುರುತಿನಿಂದ ಜಯದ ನಗೆ ಬೀರಿದ್ದಾರೆ.

ಇವರ ಜೊತೆ ಭದ್ರಾಚಲಂ ಕ್ಷೇತ್ರದಿಂದ ಡಾ.ತೆಲ್ಲಂ ವೆಂಕಟ ರಾವ್, ಜಗತಿ ಕ್ಷೇತ್ರದಿಂದ ಸಂಜಯ್ ಕುಮಾರ್, ಕೊರಟ್ವಲಾದಿಂದ ಕಲ್ವಾಕುಂಟ ಸಂಜಯ್ ಬಿಆರ್‌ಎಸ್‌ನಿಂದ ಗೆಲುವು ಸಾಧಿಸಿದರೆ, ಸಿರ್ಪುರ ಕ್ಷೇತ್ರದಿಂದ ಡಾ ಪಾಲ್ವಾಯಿ ಹರೀಶ್ ಬಾಬು ಬಿಜೆಪಿಯಿಂದ ಜಯಗಳಿಸಿದ್ದಾರೆ.

ನೂತನ ಶಾಸಕ ಕಂ ವೈದ್ಯರಲ್ಲಿ ಒಪಿಡಿ, ದಂತ ಚಿಕಿತ್ಸಕ, ಮೂಳೆ ವಿಭಾಗ, ಶಸ್ತ್ರ ಚಿಕಿತ್ಸಕ, ನೇತ್ರ ವಿಭಾಗ ಸೇರಿದಂತೆ ಎಲ್ಲ ವಿಭಾಗದವರು ಸೇರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...