ಯುಪಿಯ ಈ ಗ್ರಾಮದಲ್ಲಿ ನಡೆಯಲ್ಲ ದಸರಾ; ಇಲ್ಲಿ ರಾವಣನಿಗಾಗಿ ನಡೆಯುತ್ತದೆ ಪ್ರಾರ್ಥನೆ

Date:

ಇಡೀ ದೇಶದಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ದಸರಾ ಆರಚಣೆ ನಡೆಯುತ್ತಿದೆ. ಆದರೆ, ಭಾರತದ ಈ ಒಂದು ಗ್ರಾಮದಲ್ಲಿ ದಸರಾ ಸಂಭ್ರಮವಿಲ್ಲ. ಈ ಗ್ರಾಮದ ಜನರು ದಸರಾ ಆಚರಿಸುವುದೇ ಇಲ್ಲ. ಉತ್ತರ ಪ್ರದೇಶದ ಬಿಸ್ರಖ್‌ ಗ್ರಾಮದಲ್ಲಿ ವಿಜಯ ದಶಮಿಯನ್ನು ಸಂಭ್ರಮಿಸುವುದಿಲ್ಲ. ಬದಲಾಗಿ ರಾವಣನ ಸಂಹಾರಕ್ಕಾಗಿ ಅವರು ದುಃಖಿಸುತ್ತಾರೆ. ಸಂತಾಪ ವ್ಯಕ್ತಪಡಿಸುತ್ತಾರೆ.

ರಾವಣ ಬಿಸ್ರಖ್ ಗ್ರಾಮದಲ್ಲಿಯೇ ಜನಿಸಿದ್ದರೆಂದು ಗ್ರಾಮದ ಜನರು ನಂಬಿಸಿದ್ದಾರೆ. ತಮ್ಮನ್ನು ತಾವು ರಾವಣನ ಅಂಶಸ್ಥು ಎಂದು ಪರಿಗಣಿಸುತ್ತಾರೆ. ಹೀಗಾಗಿ, ರಾವಣ, ಕುಂಭಕರ್ಣ ಹಾಗೂ ರಾವಣ ಪುತ್ರ ಮೇಘನಾಥನ ಪ್ರತಿಕೃತಿಯನ್ನು ಸುಡುವುದನ್ನು ಈ ಗ್ರಾಮದ ಜನರು ವಿರೋಧಿಸುತ್ತಾರೆ. ರಾವಣನನ್ನು ಪ್ರಾರ್ಥಿಸುತ್ತಾರೆ.

ರಾಮಾಯಣದಲ್ಲಿ ಹೇಳಲಾಗಿರುವಂತೆ ರಾವಣ ಕೆಟ್ಟ ವ್ಯಕ್ತಿಯಲ್ಲ. ಆತ ಶಿವನ ಪರಮ ಭಕ್ತನಾಗಿದ್ದರು. ತನ್ನ ಜ್ಞಾನದಿಂದಲೇ ಶಿವನನ್ನು ಒಲಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ರಾವಣ ಮಂದಿರವೂ ಇದ್ದು, ನಿತ್ಯ ಪೂಜೆ ಸಲ್ಲಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗ್ರಾಮದಲ್ಲಿರುವ ದೇವಾಲಯದಲ್ಲಿ ರಾವಣ ಮತ್ತು ಆತನ ತಂದೆ ವಿಶ್ರವಸ್ ಋಷಿ ಪೂಜಿಸುತ್ತಿದ್ದ ಶಿವಲಿಂಗವನ್ನೇ ಇಂದಿಗೂ ಪೂಜಿಸಲಾಗುತ್ತಿದೆ ಎಂದು ಗ್ರಾಮದ ಜನರು ಹೇಳುತ್ತಾರೆ. ಅಲ್ಲದೆ, ರಾವಣನಿಗೆ ಹೊಸ ದೇವಾಲಯ ಕಟ್ಟುವುದಕ್ಕಾಗಿ ಹಣ ಸಂಗ್ರಹವನ್ನೂ ಮಾಡುತ್ತಿದ್ದಾರೆ.

ಗಮನಾರ್ಹವಾಗಿ ಭಾರತದಲ್ಲಿ ಸುಮಾರು 5 ರಾವಣ ದೇವಾಲಯಗಳಿವೆ. ಉತ್ತರ ಪ್ರದೇಶದ ಬಿಸ್ರಖ್ ಗ್ರಾಮ ಮತ್ತು ಕಾನ್ಪುರ, ಮಧ್ಯಪ್ರದೇಶದ ವಿದಿಶಾ, ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಸಂಗೋಲಾ ಗ್ರಾಮ ಹಾಗೂ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ರಾವಣ ದೇವಾಲಯಗಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...