ಅಸ್ಸಾಂ, ಕೇರಳಂ (ಈ ಹಿಂದಿನ ಕೇರಳ), ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದೆ. ಇಂದು (ಮಾರ್ಚ್ 15) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಅಸ್ಸಾಂ, ಕೇರಳ, ಪುದುಚೇರಿ (ಕೇಂದ್ರಾಡಳಿತ ಪ್ರದೇಶ): ಏಪ್ರಿಲ್ 9ರಂದು ಚುನಾವಣೆ, ಮೇ 4ರಂದು ಮತಎಣಿಕೆ (ಒಂದೇ ಹಂತದಲ್ಲಿ)
ಪಶ್ಚಿಮ ಬಂಗಾಳ: ಏಪ್ರಿಲ್ 23ರಂದು ಮೊದಲ ಹಂತ (152 ಕ್ಷೇತ್ರ) ಏಪ್ರಿಲ್ 29ರಂದು ಎರಡನೇ ಹಂತ (142 ಕ್ಷೇತ್ರ), ಮೇ 4ರಂದು ಮತಎಣಿಕೆ
ತಮಿಳುನಾಡು: ಏಪ್ರಿಲ್ 23ರಂದು ಚುನಾವಣೆ, ಮೇ 4ರಂದು ಮತಎಣಿಕೆ (ಒಂದೇ ಹಂತದಲ್ಲಿ)
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಬಿಜೆಪಿಗೆ ಬಹುಮತ ಎನ್ನುತ್ತೆ ಚುನಾವಣೋತ್ತರ ಸಮೀಕ್ಷೆ
ಕೇರಳದಲ್ಲಿ ಮೇ 23ರಂದು, ಅಸ್ಸಾಂನಲ್ಲಿ ಮೇ 20ರಂದು, ತಮಿಳುನಾಡಿನಲ್ಲಿ ಮೇ 10ರಂದು, ಪಶ್ಚಿಮ ಬಂಗಾಳದಲ್ಲಿ ಮೇ 7ರಂದು ಮತ್ತು ಪುದುಚೇರಿಯಲ್ಲಿ ಜೂನ್ 15ರಂದು ವಿಧಾನಸಭೆಗಳ ಅವಧಿ ಕೊನೆಗೊಳ್ಳಲಿದೆ. 2021ರಲ್ಲಿ ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು.





