ಭಾರತದ ಆರ್ಥಿಕತೆಯು ಮುಂದಿನ ಹಣಕಾಸು ವರ್ಷದಲ್ಲಿ (2026-27) ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ. ಜಿಡಿಪಿ ಬೆಳವಣಿಗೆ ದರವು 6.8%ನಿಂದ 7.2%ವರೆಗೆ ನಡುವೆ ಬೆಳೆವಣಿಗೆ ಕಾಣಲಿದೆ ಎಂದು ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2025-26ರ ಅರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. “ಸಮೀಕ್ಷೆಯ ಮುನ್ನೋಟವು 2026-27ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಬಲವಾದ ಕಾರ್ಯಕ್ಷಮತೆಯನ್ನು ಅನುಸರಿಸಲಿದೆ. ಆರ್ಥಿಕತೆಯು 7.4%ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಸತತ ನಾಲ್ಕನೇ ವರ್ಷವೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ.
“ಸಮೀಕ್ಷೆಯು ಭಾರತದ ಸಂಭಾವ್ಯ ಬೆಳವಣಿಗೆಯ ದರದಲ್ಲಿ ಗಮನಾರ್ಹವಾದ ಸುಧಾರಣೆಯನ್ನು ಎತ್ತಿ ತೋರಿಸುತ್ತದೆ. ಇದು ಹಿಂದಿನ ಅಂದಾಜಿನ 6.5%ಕ್ಕಿಂತ 7.0%ಕ್ಕೆ ಏರಿದೆ. ಈ ಮೇಲ್ಮುಖ ಪರಿಷ್ಕರಣೆಯು ಇತರ ಮೂಲಸೌಕರ್ಯ ವಿಸ್ತರಣೆಗೆ ಕಾರಣವಾಗಿದೆ. ಪರಿಣಾಮ, ಕಳೆದ ದಶಕದಲ್ಲಿ ವಿಮಾನ ನಿಲ್ದಾಣ ಜಾಲವು ದ್ವಿಗುಣಗೊಂಡಿದೆ. ಒಳನಾಡು ಜಲಮಾರ್ಗ ಸರಕು ಸಾಗಣೆಯಲ್ಲಿನ ತ್ವರಿತ ಬೆಳವಣಿಗೆಯಲ್ಲಿ ಲಾಜಿಸ್ಟಿಕ್ಸ್ ನಿರ್ಬಂಧಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ನಿರಂತರ ದೇಶೀಯ ಸುಧಾರಣೆಗಳು ಮತ್ತು ಸಾರ್ವಜನಿಕ ಹೂಡಿಕೆಯು ಈಗ ಆರ್ಥಿಕತೆಯ ಬೆಳವಣಿಗೆ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ” ಎಂದು ಹೇಳಿದ್ದಾರೆ.
2026-27ರ ಆರ್ಥಿಕ ವರ್ಷದಲ್ಲಿ ದೇಶೀಯ ಬೇಡಿಕೆ ಮತ್ತು ಹೂಡಿಕೆ ಬಲವನ್ನು ಹೆಚ್ಚಿಸುಲಾಗುತ್ತದೆ. ಸೇವಾ ವಲಯವು ‘ಹೆಚ್ಚಿನ ಬೆಳವಣಿಗೆ, ಕಡಿಮೆ-ಚಂಚಲತೆ’ಯ ಆಧಾರದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ. ಈ ವಲಯದಲ್ಲಿ ಮಧ್ಯಮಾವಧಿಯ ಬೆಳವಣಿಗೆಯನ್ನು 7% ರಿಂದ 8% ಎಂದು ಅಂದಾಜಿಸಲಾಗಿದೆ. ‘ಆರೆಂಜ್ ಆರ್ಥಿಕತೆ’ (ಅನುಭವ ಆಧಾರಿತ ಸೇವೆಗಳು) ಮತ್ತು ಬಾಹ್ಯಾಕಾಶ ಕ್ಷೇತ್ರಗಳನ್ನು ಉದಯೋನ್ಮುಖ ಅವಕಾಶಗಳಾಗಿ ಗುರುತಿಸಲಾಗಿದೆ.
ಉತ್ಪಾದನಾ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯಿಂದ ಜಾಗತಿಕ ನಾವೀನ್ಯತೆಯ ಮೇಲೆ ಗಮನ ಹರಿಸಲಾಗುತ್ತಿದೆ. ರಾಷ್ಟ್ರೀಯ ಉತ್ಪಾದನಾ ಮಿಷನ್ ಅಡಿಯಲ್ಲಿ 035 ರ ವೇಳೆಗೆ ಈ ವಲಯದ GDP ಕೊಡುಗೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿ ಇದೆ.
ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಯೋಜಿಸಲಾಗಿದೆ. ಈ ಕ್ಷೇತ್ರದಲ್ಲಿ ಆರ್ಥಿಕತೆಯು ಸರಾಸರಿ 5–6%ನಲ್ಲಿ ನೆಲೆ ಒದಗಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.
ಆದಾಗ್ಯೂ, ಬಾಹ್ಯ ಪರಿಸರವು ‘ಮಂದ’ ಮತ್ತು ಅನಿಶ್ಚಿತವಾಗಿ ಉಳಿದಿದೆ ಎಂದು ಸಮೀಕ್ಷೆ ಎಚ್ಚರಿಸಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ಸಂಘರ್ಷಗಳು ಹಾಗೂ ರಾಷ್ಟ್ರೀಯ ಭದ್ರತಾ ಸಾಧನಗಳನ್ನು ವ್ಯಾಪಾರ ನೀತಿಯಡಿ ತರುವುದು ಜಾಗತಿಕ ವ್ಯಾಪಾರ ಮತ್ತು ಬಂಡವಾಳ ಹರಿವುಗಳಿಗೆ ನಿರಂತರ ಅಪಾಯಗಳನ್ನುಂಟುಮಾಡುತ್ತದೆ. ಇದನ್ನು ಎದುರಿಸಲು, ಕಾರ್ಯತಂತ್ರದ ಅನಿವಾರ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.




