ತಮಿಳುನಾಡು| ಮಿತಿಗಿಂತ 10 ರೂ ಹೆಚ್ಚು; ಮಹಿಳೆಯಿಂದ 50,010 ರೂ ವಶಪಡಿಸಿಕೊಂಡ ಎಲೆಕ್ಷನ್ ಸ್ಕ್ವಾಡ್!

Date:

ಮಿತಿಗಿಂತ 10 ರೂಪಾಯಿ ಹೆಚ್ಚಳವಿದ್ದ ಕಾರಣ ಕೊಯಮತ್ತೂರಿನ ಮಹಿಳೆಯೊಬ್ಬರಿಂದ ಎಲೆಕ್ಷನ್ ಸ್ಕ್ವಾಡ್ 50,010 ರೂಪಾಯಿ ನಗದು ವಶಕ್ಕೆ ಪಡೆದ ಘಟನೆ ನಡೆದಿದೆ. ಮಾದರಿ ನೀತಿ ಸಂಹಿತೆ ಪ್ರಕಾರ 50,000 ರೂಪಾಯಿ ನಗದು ಹೊಂದಿರಬಹುದು. ಆದರೆ ಮಹಿಳೆ ಅದಕ್ಕಿಂತ ಹತ್ತು ರೂಪಾಯಿ ಹೆಚ್ಚು ಹೊಂದಿದ್ದು ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯೆಂದು ಹೇಳಿ ಹಣ ನಗದು ವಶಪಡಿಸಿಕೊಳ್ಳಲಾಗಿದೆ.

ಅದು ಕೂಡಾ ಮಹಿಳೆಯು ತನ್ನ ಮೊಬೈಲ್ ಫೋನ್ ಕವರ್‌ನಲ್ಲಿ ಹೊಂದಿದ್ದ ಹತ್ತು ರೂಪಾಯಿಯನ್ನು ಸೇರಿಸಿ ಈ ಎಲೆಕ್ಷನ್ ಸ್ಕ್ವಾಡ್ ಮಹಿಳೆಯ ಬಳಿ 50,010 ರೂಪಾಯಿ ಇದೆ ಎಂದು ಲೆಕ್ಕ ಹಾಕಿದೆ. ಅದಾದ ಬಳಿಕ ನಗದು ವಶಕ್ಕೆ ಪಡೆದಿದೆ!

ಇದನ್ನು ಓದಿದ್ದೀರಾ?  ಮದ್ದೂರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಗದು ಪತ್ತೆ, ಈವರೆಗೂ ರಾಜ್ಯದಲ್ಲಿ ₹15 ಕೋಟಿ ಜಪ್ತಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮಹಿಳೆಯ ಪತಿ ಸುರೇಶ್ ಬಾಬು ಮಾಲೀಕತ್ವದ ಮೈಕ್ರೋ ಇಂಡಸ್ಟ್ರಿ ಘಟಕದ ಖಾತೆಗಳನ್ನು ನಿರ್ವಹಿಸುತ್ತಿದ್ದ ಸೂರ್ಯ ಪ್ರಿಯಾ ಅವರು ಎಸ್‌ಐಎಚ್‌ಎಸ್ ಕಾಲೋನಿಯಲ್ಲಿರುವ ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಘಟಕಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಿಂಗಾನಲ್ಲೂರು ಬಳಿಯ ಇಂದಿರಾ ಗಾರ್ಡನ್‌ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡ ಮಹಿಳೆಯನ್ನು ತಡೆದಿದೆ ಎಂದು ವರದಿಯಾಗಿದೆ.

“‘ನಮ್ಮ ಸಿಬ್ಬಂದಿಗೆ ವಾರದ ಸಂಬಳ ನೀಡಲು ನಾನು 500 ರೂಪಾಯಿ ಮುಖಬೆಲೆಯ ಒಟ್ಟು 50,000 ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಚುನಾವಣಾ ನಿಯಮಗಳ ಪ್ರಕಾರ ನಿರ್ಬಂಧಗಳ ಬಗ್ಗೆ ನನಗೆ ತಿಳಿದಿದ್ದರಿಂದ, ನಾನು ಮಿತಿಗೆ ಅನುಗುಣವಾಗಿ 50,000 ರೂಪಾಯಿಯನ್ನು ಮಾರ್ಚ್ 16 ರಂದು ಬ್ಯಾಂಕಿನಿಂದ ವಿತ್‌ಡ್ರಾ ಮಾಡಿದ್ದೆ. ಇದರ ಬಗ್ಗೆ ನನ್ನಲ್ಲಿ ದಾಖಲೆಗಳಿದೆ” ಎಂದು ಮಹಿಳೆ ಹೇಳಿದ್ದಾರೆ.

ಇದನ್ನು ಓದಿದ್ದೀರಾ?   ಐಟಿ ದಾಳಿ | ಕ್ರಷರ್ ಮಾಲೀಕನ ಮನೆಯಲ್ಲಿ ₹1 ಕೋಟಿ ನಗದು, 800 ಗ್ರಾಂ ಚಿನ್ನ ಪತ್ತೆ

“ವೇತನದ ದಿನದಂದು ಅದನ್ನು ಉದ್ಯೋಗಿಗಳಿಗೆ ನೀಡಲು ನಾನು ಹಣವನ್ನು ಮನೆಯಲ್ಲಿ ಇರಿಸಿದ್ದೆ. ನಾನು ಎಲ್ಲಾ ವಿವರಣೆಗಳನ್ನು ನೀಡಿ ಪುರಾವೆಯನ್ನು ತೋರಿಸಿದಾಗ, ಎಫ್‌ಎಸ್‌ಟಿ ತಂಡದ ಸದಸ್ಯರೊಬ್ಬರು ನನ್ನ ಬಳಿ 20 ರೂಪಾಯಿ ಕೇಳಿದರು. ನಾನು ನನ್ನ ಮೊಬೈಲ್ ಫೋನ್ ಕವರ್‌ನಲ್ಲಿ ತುರ್ತು ಬಳಕೆಗೆ ಇಟ್ಟಿದ್ದ ಕೇವಲ 10 ರೂಪಾಯಿ ನೋಟನ್ನು ನೀಡಿದೆ. ಒಟ್ಟು ಮೌಲ್ಯ 50,000 ರೂಪಾಯಿ ದಾಟಿದ್ದರಿಂದ 50,010 ರೂಪಾಯಿಯನ್ನು ವಶಪಡಿಸಿಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ನನಗೆ ಹೇಳಿದರು” ಎಂದು ಸೂರ್ಯ ಪ್ರಿಯಾ ಹೇಳಿಕೊಂಡಿದ್ದಾರೆ.

3 ಗಂಟೆಗಳ ಕಾಲ ಕಿರುಕುಳ

ಇನ್ನು ಹೆಚ್ಚಿನ ವಿಚಾರಣೆಗಾಗಿ ದಕ್ಷಿಣ ತಾಲೂಕು ಕಚೇರಿಗೆ ಬರುವಂತೆ ಅಸಭ್ಯವಾಗಿ ಹೇಳಿದ ತಂಡ, ಆಕೆಗೆ ಮತ್ತಷ್ಟು ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ. ಸುಮಾರು ಮೂರು ಗಂಟೆಗಳ ನಂತರ, ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳು ಹಣವನ್ನು ಹಿಂದಿರುಗಿಸಿ ಮಹಿಳೆಯನ್ನು ಬಿಟ್ಟಿದ್ದಾರೆ. ಸೂರ್ಯ ಪ್ರಿಯಾ ಅವರು ನಂತರ ಜಿಲ್ಲಾಧಿಕಾರಿ ಕ್ರಾಂತಿ ಕುಮಾರ್ ಪತಿ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...