ಭಾರತದಲ್ಲಿ ಪರವಾನಗಿ ಪಡೆದ ಎಲಾನ್‌ ಮಸ್ಕ್‌ ಕಂಪನಿ ಸ್ಟಾರ್‌ಲಿಂಕ್

Date:

ಎಲಾನ್ ಮಸ್ಕ್ ಅವರ ಕಂಪನಿ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಸೇವೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದು, ಕೇಂದ್ರ ಸರ್ಕಾರ ಕಂಪನಿಗೆ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ (GMPCS) ಪರವಾನಗಿ ನೀಡಿದೆ.

ಈ ಅನುಮೋದನೆಯಿಂದ ಕಂಪನಿ ಕಳೆದ 4 ವರ್ಷಗಳಿಂದ ಕಾಯುತ್ತಿದ್ದ ಅಡಚಣೆಯಿಂದ ಮುಕ್ತಿ ದೊರಕಿದೆ. ಕೆಲ ವಾರಗಳ ಹಿಂದೆ ಸರ್ಕಾರ ಕಂಪನಿಗೆ ಉದ್ದೇಶ ಪತ್ರವನ್ನು ನೀಡಿತ್ತು. ಕಳೆದ ಕೆಲ ವರ್ಷಗಳಿಂದ ಸ್ಟಾರ್‌ಲಿಂಕ್ ಈ ಪರವಾನಗಿಗಾಗಿ ಕಾಯುತ್ತಿತ್ತು. ಈಗ ಅಂತಿಮವಾಗಿ ಪರವಾನಗಿಯನ್ನು ಪಡೆದಿದೆ. ದೂರಸಂಪರ್ಕ ಇಲಾಖೆ ವಿಧಿಸಿರುವ ಹೊಸ ಷರತ್ತುಗಳನ್ನು ಸ್ವೀಕರಿಸಲು ಮತ್ತು ಕಾನೂನಿನ ಪ್ರಕಾರ ಶುಲ್ಕವನ್ನು ಪಾವತಿಸಲು ಕಂಪನಿ ಒಪ್ಪಿಕೊಂಡಿದೆ.

GMPCS ಪರವಾನಗಿಯ ಪೇಪರ್‌ಗಳಿಗೆ ಸಹಿ ಹಾಕಲು ಸ್ಟಾರ್‌ಲಿಂಕ್ ಅಧಿಕಾರಿಗಳು ಮುಂದಿನ ದಿನಗಳಲ್ಲಿ ನವದೆಹಲಿಗೆ ಬರುತ್ತಾರೆ ಎಂದು ಮೂಲಗಳು ಹೇಳಿವೆ. ಕಂಪನಿಯು ಹೊಸ ಪರವಾನಗಿ ಷರತ್ತುಗಳು ಮತ್ತು ದೇಶದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಅಗತ್ಯವಿರುವ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್‌ಜಿಕರ್‌ ಆಸ್ಪತ್ರೆ, ಅಣ್ಣಾ ವಿ ವಿ ರೀತಿ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನ ಅತ್ಯಗತ್ಯ

ಕೇಂದ್ರ ದೂರ ಸಂಪರ್ಕ ಇಲಾಖೆಯಿಂದ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಪರವಾನಗಿ ಪಡೆದ ಮೂರನೇ ಕಂಪನಿ ಸ್ಟಾರ್ ಲಿಂಕ್‌ ಆಗಿದ್ದು, ಈ ಮೊದಲು ಇಯು ಟೆಲ್‌ಸ್ಯಾಟ್‌ನ ಒನ್‌ ವೆಬ್‌ ಹಾಗೂ ರಿಲಾಯನ್ಸ್‌ ಜಿಯೋ ಪರವಾನಗಿ ಪಡೆದಿವೆ. ಕೇಂದ್ರ ಸರ್ಕಾರದಿಂದ GMPCS ಪರವಾನಗಿ ಪಡೆದಿರುವುದರಿಂದ ಸ್ಟಾರ್‌ಲಿಂಕ್‌ ಕಂಪನಿ ಭಾರತದಲ್ಲಿ ತ್ವರಿತ ವೇಗದ ಇಂಟರ್‌ನೆಟ್‌ ನೀಡಲು ಸಜ್ಜಾಗಲಿದೆ.

ಸರ್ಕಾರವು ಸ್ಟಾರ್‌ಲಿಂಕ್‌ ಕಂಪನಿಗೆ ಕೆಲವು ಕಠಿಣ ಭದ್ರತಾ ನಿಯಮಗಳನ್ನು ಸಹ ವಿಧಿಸಿದೆ. ಈ ನಿಯಮಗಳಲ್ಲಿ ದೇಶದಲ್ಲಿ ಪ್ರತಿಬಂಧಕ ವಿಧಾನಗಳನ್ನು ಸ್ಥಾಪಿಸುವುದು, ಕಮಾಂಡ್ ಮತ್ತು ಕಂಟ್ರೋಲ್​ ಸೆಂಟರ್​ ನಿರ್ಮಿಸುವುದು ಸೇರಿವೆ. GMPCS ಪರವಾನಗಿ ಪಡೆದ ನಂತರ ಸ್ಟಾರ್‌ಲಿಂಕ್ IN-SPACe (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ನಿಂದ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದೂರಸಂಪರ್ಕ ಇಲಾಖೆಯು ಮೇ 7ರಂದು ಸ್ಟಾರ್‌ಲಿಂಕ್‌ಗೆ ಉದ್ದೇಶ ಪತ್ರವನ್ನು ನೀಡಿತು. ಇದು GMPCS ಪರವಾನಗಿ ನೀಡಲು ದಾರಿ ತೆರೆಯಿತು. ಉಪಗ್ರಹ ಸಂವಹನ ಕಂಪನಿಗಳಿಗೆ ಸ್ಪೆಕ್ಟ್ರಮ್ ಹಂಚಿಕೆಗಾಗಿ ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...