ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದೆಹಲಿಯಿಂದ ಇಂಧೋರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ AI2913 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ. ವಿಮಾನದ ಎಂಜಿನ್‌ಗೆ ಬೆಂಕಿ ಹತ್ತಿಕೊಂಡ ಸೂಚನೆ ಸಿಕ್ಕ ಕೂಡಲೇ ಸಿಬ್ಬಂದಿ ವಿಮಾನವನ್ನು ಮತ್ತೆ ನಿಲ್ದಾಣದಲ್ಲಿ ಇಳಿಸಿದ್ದಾರೆ. ಪ್ರಯಾಣಿಕರನ್ನು ಪರ್ಯಾಯ ವಿಮಾನಕ್ಕೆ ಕಳುಹಿಸಲಾಗಿದೆ.
ಘಟನೆಯ ಬಗ್ಗೆ ನಿಯಂತ್ರಕರಿಗೆ ಸೂಕ್ತವಾಗಿ ತಿಳಿಸಲಾಗಿದೆ ಎಂದು ವಿಮಾನಯಾನ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಏರ್ ಇಂಡಿಯಾದಲ್ಲಿ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಗೆದಷ್ಟೂ ಆಳವಾಗುತ್ತಿದೆ ಧರ್ಮಸ್ಥಳ ಪ್ರಕರಣ; ಸೌಜನ್ಯಳಿಗೆ ಸಿಗಲಿ ನ್ಯಾಯ
“ಆಗಸ್ಟ್ 31 ರಂದು ದೆಹಲಿಯಿಂದ ಇಂದೋರ್‌ಗೆ ಹಾರಾಟ ನಡೆಸುತ್ತಿದ್ದ AI2913 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿಗೆ ಮರಳಿದೆ. ಕಾಕ್‌ಪಿಟ್ ಸಿಬ್ಬಂದಿಗೆ ಬಲ ಎಂಜಿನ್‌ಗೆ ಬೆಂಕಿಯ ಸೂಚನೆ ಸಿಕ್ಕಿತು. ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸಿ, ಕಾಕ್‌ಪಿಟ್ ಸಿಬ್ಬಂದಿ ಎಂಜಿನ್ ಆಫ್ ಮಾಡಲು ನಿರ್ಧರಿಸಿದರು, ವಿಮಾನವನ್ನು ದೆಹಲಿಗೆ ಹಿಂತಿರುಗಿಸಿದರು. ಅಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು. ವಿಮಾನವನ್ನು ತಪಾಸಣೆಗಾಗಿ ಒಳಪಡಿಸಲಾಗಿದೆ ಮತ್ತು ಪ್ರಯಾಣಿಕರನ್ನು ಪರ್ಯಾಯ ವಿಮಾನಕ್ಕೆ ವರ್ಗಾಯಿಸಲಾಗುತ್ತಿದೆ, ಅದು ಶೀಘ್ರದಲ್ಲೇ ಇಂಧೋರ್‌ಗೆ ಹಾರಾಟ ನಡೆಸಲಿದೆ” ಎಂದು ಅದು ಹೇಳಿದೆ.
ಕಳೆದ ಜುಲೈನಲ್ಲಿ ಏರ್ ಇಂಡಿಯಾದ ಹಾಂಗ್ ಕಾಂಗ್ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ ಸಹಾಯಕ ವಿದ್ಯುತ್ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿತ್ತು. “ಜುಲೈ 22, 2025 ರಂದು ಹಾಂಗ್ ಕಾಂಗ್ ನಿಂದ ದೆಹಲಿಗೆ ಹಾರುತ್ತಿದ್ದ ವಿಮಾನ AI 315ದಲ್ಲಿ, ಇಳಿದು ಗೇಟ್‌ನಲ್ಲಿ ನಿಲ್ಲಿಸಿದ ಸ್ವಲ್ಪ ಸಮಯದ ನಂತರ ಸಹಾಯಕ ವಿದ್ಯುತ್ ಘಟಕ (APU) ಬೆಂಕಿ ಕಾಣಿಸಿಕೊಂಡಿದೆ ” ಎಂದು ವಿಮಾನಯಾನ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





