ಕೋಟಿ ರೂಪಾಯಿ ಶುಲ್ಕ ತೆತ್ತು ವೈದ್ಯಕೀಯ ಪಿಜಿ ಸೀಟು ಪಡೆಯುತಿರುವ EWS ‘ಬಡವರು’!

Date:

ಆರ್ಥಿಕವಾಗಿ ದುರ್ಬಲ ವರ್ಗದ (EWS – ವಾರ್ಷಿಕ ಕುಟುಂಬದ ಆದಾಯ 8 ಲಕ್ಷ ರೂ.ಗಿಂತ ಕಡಿಮೆ) ಸುಮಾರು 140 ಅಭ್ಯರ್ಥಿಗಳು ಖಾಸಗಿ ವೈದ್ಯಕೀಯ ಕಾಲೇಜುಗಳ ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಕೋಟಾಗಳಡಿ ‘ಕ್ಲಿನಿಕಲ್ ಸ್ಪೆಷಿಯಾಲಿಸ್ಟ್‌’ ಸ್ನಾತಕೋತ್ತರ (ವೈದ್ಯಕೀಯ ಪಿಜಿ) ಸೀಟುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ವರ್ಷಕ್ಕೆ 25 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಬೋಧನಾ ಶುಲ್ಕ ಪಾವತಿಸಿದ್ದಾರೆ. ಇದು ಇಡಬ್ಲ್ಯೂಎಸ್ ಪ್ರಮಾಣಪತ್ರಗಳ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆ ಮತ್ತು ಕಳವಳಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲದೆ. ಕೋಟಿ ರೂಪಾಯಿ ಶುಲ್ಕ ಪಾವತಿಸುವವರು ‘ಇಡಬ್ಲ್ಯೂಎಸ್‌ ಬಡವರು’ ಎಂಬ ಟೀಕೆಗೂ ಕಾರಣವಾಗಿದೆ.

“ಈ 140 ಅಭ್ಯರ್ಥಿಗಳು ಇಡಬ್ಲ್ಯೂಎಸ್ ಅಭ್ಯರ್ಥಿಗಳಾಗಿ ಪಿಜಿ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಪಿರೀಕ್ಷಾ ಫಲಿತಾಂಶದಲ್ಲಿ ಅವರ ಶ್ರೇಯಾಂಕಗಳು ತುಂಬಾ ಕಡಿಮೆಯಾದಾಗ, ಅವರು ಎನ್‌ಆರ್‌ಐಗಳಾಗಿ ಬದಲಾಗುತ್ತಾರೆ. ಮಾತ್ರವಲ್ಲದೆ, ಕೋಟಿ ರೂ.ಗಳಲ್ಲಿ ಶುಲ್ಕವನ್ನು ಪಾವತಿಸುತ್ತಾರೆ ಅಥವಾ ಇಡೀ ಕೋರ್ಸ್‌ಗೆ 1 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚವಾಗಬಹುದಾದ ಮ್ಯಾನೇಜ್‌ಮೆಂಟ್‌ ಕೋಟಾ ಅಡಿಯಲ್ಲಿ ಸೀಟುಗಳನ್ನು ಪಡೆದುಕೊಳ್ಳುತ್ತಾರೆ. ಇಂತಹವು ಭಾರತದಲ್ಲಿ ಮಾತ್ರ ಸಂಭವಿಸುತ್ತವೆ” ಎಂದು ಸ್ನಾತಕೋತ್ತರ ತರಬೇತಿ ವೈದ್ಯರು ಹೇಳಿರುವುದಾಗಿ ‘ಟಿಒಐ’ ವರದಿ ಮಾಡಿದೆ.

“ಇಂತಹ ಪ್ರಹಸನಗಳು ಕಳೆದ ವರ್ಷವೂ ಸಂಭವಿಸಿವೆ. ಅರ್ಹ ಅಭ್ಯರ್ಥಿಗಳನ್ನು ಅವಕಾಶ ವಂಚಿತರನ್ನಾಗಿ ಮಾಡುವ ನಕಲಿ ಇಡಬ್ಲ್ಯೂಎಸ್ ಪ್ರಮಾಣಪತ್ರಗಳನ್ನು ಹೊಂದಿರುವ ಅಭ್ಯರ್ಥಿಗಳ ವಿಚಾರದಲ್ಲಿ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವಿಚಾರಣೆಯನ್ನೂ ನಡೆಸಿಲ್ಲ” ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೀಟ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 1.1 ಲಕ್ಷಕ್ಕಿಂತ ಹಿಂದೆ ಉಳಿದಿರುವ ಇಡಬ್ಲ್ಯೂಎಸ್‌ ಅಭ್ಯರ್ಥಿಯೊಬ್ಬರು, ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಭಾಗದಲ್ಲಿ ‘ಡಾಕ್ಟರ್‌ ಅಫ್‌ ಮೆಡಿಸಿನ್’ (ಎಂಡಿ) ಸೀಟನ್ನು ಎನ್‌ಆರ್‌ಐ ಕೋಟಾದಡಿ ಪಡೆದಿದ್ದಾರೆ. ಈ ಕಾಲೇಜಿನಲ್ಲಿ ಎನ್‌ಆರ್‌ಐ ಅಭ್ಯರ್ಥಿಗಳಿಗೆ ವಾರ್ಷಿಕ ಬೋಧನಾ ಶುಲ್ಕವೇ 1 ಕೋಟಿ ರೂ.ಗಿಂತ ಹೆಚ್ಚಿದೆ. ಇನ್ನೊಬ್ಬ ಇಡಬ್ಲ್ಯೂಎಸ್‌ ಅಭ್ಯರ್ಥಿಯು 84,000ಕ್ಕಿಂತ ಹಿಂದುಳಿದ ರ್‍ಯಾಂಕಿಂಗ್‌ ಪಡೆದಿದ್ದು, ಅವರು ಪುದುಚೇರಿಯ ವಿನಾಯಕ ಮಿಷನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್‌ ವಿಭಾಗದಲ್ಲಿ ಎಂಡಿ ಸೀಟನ್ನು ಎನ್‌ಐಆರ್‌ ಕೋಟಾದಡಿ ಪಡೆದಿದ್ದಾರೆ. ಅದಕ್ಕಾಗಿ, ಅವರು ವರ್ಷಕ್ಕೆ 55 ಲಕ್ಷ ರೂ.ಗಿಂತ ಹೆಚ್ಚು ಬೋಧನಾ ಶುಲ್ಕ ಪಾವತಿಸಲಿದ್ದಾರೆ.

ಈ ಲೇಖನ ಓದಿದ್ದೀರಾ?: ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

ಮೂವರು ಇಡಬ್ಲ್ಯೂಎಸ್‌ ಅಭ್ಯರ್ಥಿಗಳು ಸಂತೋಷ್ ವೈದ್ಯಕೀಯ ಕಾಲೇಜಿನಲ್ಲಿ ರೇಡಿಯೋ ಡಯಾಗ್ನೋಸಿಸ್, ಜನರಲ್ ಮೆಡಿಸಿನ್ ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಶಾಸ್ತ್ರದಂತಹ ವಿಭಾಗಗಳಲ್ಲಿ ಸ್ನಾತಕೋತ್ತರ ಸೀಟುಗಳನ್ನು ಆರಿಸಿಕೊಂಡಿದ್ದಾರೆ. ಈ ವಿಭಾಗಗಳಲ್ಲಿ ವರ್ಷಕ್ಕೆ ಬೋಧನಾ ಶುಲ್ಕವು 50 ಲಕ್ಷ ರೂ. ಮತ್ತು 76 ಲಕ್ಷ ರೂ.ಗಳು ಇರಲಿದೆ.

ಇನ್ನು, ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ 16 ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಲ್ಲಿ ನಾಲ್ಕು ಸೀಟುಗಳನ್ನು ಇಡಬ್ಲ್ಯೂಎಸ್‌ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಈ ಕೋರ್ಸ್‌ಗೆ ಬೋಧನಾ ಶುಲ್ಕ ವರ್ಷಕ್ಕೆ 48.5 ಲಕ್ಷ ರೂ. ಆಗಿದೆ. ಅದೇ ಕಾಲೇಜಿನಲ್ಲಿ ಒಬ್ಬ ಇಡಬ್ಲ್ಯೂಎಸ್ ಅಭ್ಯರ್ಥಿಯು ಮ್ಯಾನೇಜ್‌ಮೆಂಟ್‌ ಕೋಟಾದಡಿ ಮೂಳೆಚಿಕಿತ್ಸೆಯ ಸೀಟನ್ನು ಪಡೆದಿದ್ದು, ಇದರ ವಾರ್ಷಿಕ ಬೋಧನಾ ಶುಲ್ಕವು 62.5 ಲಕ್ಷ ರೂ.ಗಳಾಗಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಹಂಚಿಕೆಯ ಮೊದಲ ಸುತ್ತಿನ ಪ್ರಕ್ರಿಯೆ ಪೂರ್ಣಗೊಂಡಿದೆ. ಸುಮಾರು 27,000 ಅಭ್ಯರ್ಥಿಗಳಿಗೆ ಸೀಟುಗಳನ್ನು ಹಂಚಿಕೆ ಮಾಡಿ, ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಂಡಿ, ಎಂಎಸ್ ಮತ್ತು ಪಿಜಿ ಡಿಪ್ಲೊಮಾ ಸೀಟುಗಳು ಸೇರಿದಂತೆ 52,000ಕ್ಕೂ ಹೆಚ್ಚು ಸ್ನಾತಕೋತ್ತರ ಸೀಟುಗಳಿವೆ. ಆಗಸ್ಟ್‌ನಲ್ಲಿ ನಡೆದ ನೀಟ್ ಪಿಜಿ ಪ್ರವೇಶ ಪರೀಕ್ಷೆಗೆ 2.4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ, ಸುಮಾರು 1.3 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...