ಸುದ್ದಿ ವಿವರ | ಆರ್ಥಿಕ ಸಮೀಕ್ಷೆ ಎಂದರೇನು ಮತ್ತು ಅದು ಏಕೆ ಮುಖ್ಯ?

Date:

ಸಂಸತ್ತಿನಲ್ಲಿ ಜನವರಿ 29ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಭಾರತೀಯ ಆರ್ಥಿಕತೆಯ ‘ಪ್ರಗತಿ ಪತ್ರ’ (Report Card) ಎಂದೂ ಪರಿಗಣಿಸಲಾಗಿದೆ. ದೇಶದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಬೆಳವಣಿಗೆಯ ಸಾಧ್ಯತೆಗಳು ಹಾಗೂ ಪ್ರಮುಖ ಆತಂಕಗಳ ಕುರಿತು ಸಮೀಕ್ಷೆಯು ವಿವರವಾದ ಮಾಹಿತಿ ನೀಡಿದೆ. ಸಮೀಕ್ಷೆಯ ಪ್ರಕಾರ, ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ 6.8%-7.2%ವರೆಗೆ ಬೆಳೆಯುವ ನಿರೀಕ್ಷೆಯಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.

ಗಮನಾರ್ಹವಾಗಿ, ಆರ್ಥಿಕ ಸಮೀಕ್ಷೆ ಮಂಡನೆಯಾದ ದಿನದಂತೆ ಹಣಕಾಸು ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ಸಾರ್ವಕಾಲಿಕ ಕುಸಿತದೊಂದಿಗೆ 92 ರೂ. ತಲುಪಿತ್ತು. ಮತ್ತೊಂದೆಡೆ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿವೆ. ಬೆಳ್ಳಿ ಪ್ರತಿ ಕೆ.ಜಿಗೆ 4 ಲಕ್ಷ ರೂ. ದಾಟಿತ್ತು. ಚಿನ್ನ ಪ್ರತಿ 10 ಗ್ರಾಮ್‌ಗೆ 1.8 ಲಕ್ಷ ರೂ.ಗಳ ಗಡಿ ದಾಟಿತ್ತು. ಇಂದು (ಶನಿವಾರ) ಎರಡೂ ಬೆಲೆಗಳು ಕೊಂಚ ಕುಸಿದಿವೆ.

ಇನ್ನು, ಜಾಗತಿಕ ರಾಜಕೀಯ ವ್ಯವಸ್ಥೆಯೂ ಭವಿಷ್ಯ ಅನಿಶ್ಚಿತತೆಯಲ್ಲಿ ಏರಿಳಿತ ಕಾಣುತ್ತಿವೆ. ಟ್ರಂಪ್ ಅವರ ದಮನಕಾರಿ ನೀತಿ-ನಿರ್ಧಾರಗಳು ಭಾರತವೂ ಸೇರಿದಂತೆ ನಾನಾ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ, ಭಾರತವು ಯುರೋಪಿಯನ್ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದೇ ಸಮಯದಲ್ಲಿ, ಭಾರತದ ಆರ್ಥಿಕ ಬೆಳವಣಿಗೆಗೆ ನೀಲನಕ್ಷೆಯನ್ನು ಆರ್ಥಿಕ ಸಮೀಕ್ಷೆ ದೇಶದ ಮುಂದಿಟ್ಟಿದೆ. ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರ್ಥಿಕ ಸಮೀಕ್ಷೆ ಎಂದರೇನು?

ಆರ್ಥಿಕ ಸಮೀಕ್ಷೆಯು ಭಾರತೀಯ ಆರ್ಥಿಕತೆಯ ವಿವರವಾದ ಮೌಲ್ಯಮಾಪನ ಒದಗಿಸುತ್ತದೆ. ಇದು ದೇಶದ ಆರ್ಥಿಕ ಸ್ಥಿತಿ, ಬೆಳವಣಿಗೆ, ಸ್ಥಿರತೆ ಮತ್ತು ಭವಿಷ್ಯದ ಬೆಳವಣಿಗೆಯ ಕುರಿತು ವಿವಿಧ ವಲಯಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿ ‘ಮ್ಯಾಕ್ರೋಇಕಾನಮಿಕ್ ಇಂಡಿಕೇಟರ್‌’ಅನ್ನು (ಸ್ಥೂಲ ಆರ್ಥಿಕ ಸೂಚಕಗಳು) ಒದಗಿಸುತ್ತಿದೆ. ಇದು ಸರ್ಕಾರವು ನೀತಿ ನಿರೂಪಣೆಗಳನ್ನು ಸಿದ್ದಪಡಿಸಲು ಪೂರಕ ಚರ್ಚೆಗಳಿಗೆ ವೇದಿಕೆ ಕಲ್ಪಿಸುತ್ತದೆ. ಕೇಂದ್ರ ಬಜೆಟ್‌ಗಿಂತ ಮೊದಲು ಆರ್ಥಿಕ ನಿರೀಕ್ಷೆಗಳನ್ನು ರೂಪಿಸುತ್ತದೆ. ಇದರ ಆಧಾರದ ಮೇಲೆಯೇ ಕೇಂದ್ರ ಬಜೆಟ್‌ಅನ್ನೂ ಸಿದ್ದಪಡಿಸಿ, ಮಂಡಿಸಲಾಗುತ್ತದೆ.

ಆರ್ಥಿಕ ಸಮೀಕ್ಷೆ ಏಕೆ ಮುಖ್ಯ?

ಸರ್ಕಾರದ ನೀತಿ ನಿಲುವುಗಳ ಪ್ರಮುಖ ಸೂಚಕವೆಂದು ಅರ್ಥಿಕ ಸಮೀಕ್ಷೆಯನ್ನು ಪರಿಗಣಿಸಲಾಗಿದೆ. ಸಮೀಕ್ಷೆಯು ಆಯಾ ಅರ್ಥಿಕ ವರ್ಷಗಳ ಕೇಂದ್ರ ಬಜೆಟ್‌ನ ಮೇಲೆ ಪ್ರಭಾವ ಬೀರುತ್ತವೆ. ಬಜೆಟ್‌ನಲ್ಲಿ ಆದ್ಯತೆಗಳು ಏನಾಗಿರಬೇಕೆಂದು ಸೂಚಿಸುತ್ತವೆ.

ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುವವರು ಯಾರು?

ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸುತ್ತದೆ. ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತ ಮುಖ್ಯ ಆರ್ಥಿಕ ಸಲಹೆಗಾರರಾದ ಡಾ. ವಿ. ಅನಂತ ನಾಗೇಶ್ವರನ್ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. ಇದು ದೇಶದ ಆರ್ಥಿಕ ಪರಿಸ್ಥಿತಿ, ಹಣಕಾಸಿನ ಪ್ರವೃತ್ತಿಗಳು ಹಾಗೂ ಭವಿಷ್ಯದ ಅಪಾಯಗಳ ಸಮಗ್ರ ಮೌಲ್ಯಮಾಪನವನ್ನು ಒದಗಿಸಿದೆ ಎಂದು ಹೇಳಲಾಗಿದೆ.

ಸಂಸತ್ತಿನಲ್ಲಿ ಮಂಡನೆ

ಆರ್ಥಿಕ ಸಮೀಕ್ಷೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಂಡಿಸಲಾಗುತ್ತದೆ. ಇದರ ನಂತರ ಮುಖ್ಯ ಆರ್ಥಿಕ ಸಲಹೆಗಾರರು (CEA) ನಡೆಸುವ ಮಾಧ್ಯಮಗೋಷ್ಠಿಯಲ್ಲಿ, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಸಮೀಕ್ಷೆಯ ಪ್ರಮುಖ ಅಂಶಗಳು ಮತ್ತು ಆರ್ಥಿಕ ಸಂಕೇತಗಳನ್ನು ವಿವರಿಸುವುದು ವಾಡಿಕೆ.

2025-26ರ ಆರ್ಥಿಕ ಸಮೀಕ್ಷೆಯ ಪ್ರಮುಖ ಅಂಶಗಳು

  •  27ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ6.8% ರಿಂದ 7.2%ವರೆಗೆ ಬೆಳೆಯುವ ನಿರೀಕ್ಷೆ.
  •  2025ರ ಏಪ್ರಿಲ್-ಡಿಸೆಂಬರ್ ನಡುವೆ ಹಣದುಬ್ಬರವು ಸರಾಸರಿ 1.7% ಇದೆ.
  • ವಿತ್ತೀಯ ಕೊರತೆ ಜಿಡಿಪಿಯ 4.4%ಗೆ ಇಳಿಕೆಯಾಗುವ ನಿರೀಕ್ಷೆ (2020ರಲ್ಲಿ 7.1% ಇತ್ತು)
  • ಬ್ಯಾಂಕ್ ಕ್ರೆಡಿಟ್‌ ಬೆಳವಣಿಗೆ 14.5%ಗೆ ಏರುವ ಸಾಧ್ಯತೆ
  •   ಗ್ರಾಸ್ ಎನ್‌ಪಿಎ 2.2%ಗೆ ಇಳಿಕೆ ನಿರೀಕ್ಷೆ
  • ವಿದೇಶಿ ವ್ಯಾಪಾರ ಮತ್ತು ಬಾಹ್ಯ ವಲಯದಲ್ಲಿ  ಸೇವೆಗಳ ರಫ್ತುಗಳು 13.6%ಗೆ ಏರಿಕೆಯಾಗಿದೆ.
  • 2025ರ ಆರ್ಥಿಕ ವರ್ಷದಲ್ಲಿ ಒಟ್ಟು ರಫ್ತುಗಳು (ವಸ್ತುಗಳು + ಸೇವೆಗಳು) 825 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 6.1%ರಷ್ಟು ಬೆಳವಣಿಗೆ ಕಂಡಿದೆ.
  • ವಿದೇಶಿ ವಿನಿಮಯ ನಿಧಿಯು 701.4 ಬಿಲಿಯನ್ ಡಾಲರ್‌ಗೆ ಏರಿಕೆ.
  •   ಕೃಷಿ, ಉದ್ಯಮ, ಸೇವೆಗಳಲ್ಲಿ ಬೆಳವಣಿಗೆ
  • ಉದ್ಯೋಗ ಮತ್ತು ಮಾನವ ಅಭಿವೃದ್ಧಿ ಮೇಲೆ ಒತ್ತು ಕೊಡುವ ಅಗತ್ಯ.
  • ಗಿಗ್‌ ಕಾರ್ಮಿಕರಲ್ಲಿ 44% ಕಾರ್ಮಿಕರ ಆದಾಯವು ಮಾಸಿಕ 15,000ಕ್ಕಿಂತ ಕಡಿಮೆ ಇದೆ.

2025-26ರ ಆರ್ಥಿಕ ಸಮೀಕ್ಷೆಯು ದೇಶದ ಭಾರೀ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ವಿವರಿಸಿದೆ. ಆದರೆ, ಕಾಂಗ್ರೆಸ್‌ ಇದನ್ನು ಅಲ್ಲಗಳೆದಿದೆ.

ಈ ಲೇಖನ ಓದಿದ್ದೀರಾ?: ಇರಾನ್‌ ಮೇಲೆ ಮರುದಾಳಿಗೆ ಸಜ್ಜಾಗಿದೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ

“ಮೋದಿ ಸರ್ಕಾರವು ದೇಶದ ಆರ್ಥಿಕ ಪರಿಸ್ಥಿತಿಯ ಅತ್ಯುತ್ತಮವಾಗಿದೆ ಎಂಬ ಚಿತ್ರಣ ನೀಡಲು ದತ್ತಾಂಶಗಳನ್ನು ತಿರುಚುತ್ತಿದೆ. ಆದರೆ, ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಕಲ್ಯಾಣ ಕಾರ್ಯಕ್ರಮಗಳು ಕ್ಷೀಣಿಸುತ್ತಿವೆ. ಭಾರತದ ಆರ್ಥಿಕ ಬೆಳವಣಿಗೆಯು ಪ್ರಶ್ನಾರ್ಹವಾಗಿದೆ. ಜನರು ಉದ್ಯೋಗವಿಲ್ಲದೆ, ಕೃಷಿಯನ್ನು ಅವಲಂಬಿಸುತ್ತಿದ್ದಾರೆ. ಆದರೆ, ಕೃಷಿಗೂ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಕಡಿಮೆ ವೇತನ, ಅಲ್ಪಾವಧಿಯ ಉದ್ಯೋಗಿಗಳ ಸಂಖ್ಯೆಯಲ್ಲಿ ಮಾತ್ರವೇ ಹೆಚ್ಚಳವಾಗಿದೆ. ಆದರೆ, ಅವರೆಲ್ಲರೂ ಅಭದ್ರತೆಯಿಂದ ಬಳಲುತ್ತಿದ್ದಾರೆ. ದೇಶದ ಒಟ್ಟು ಸಂಪತ್ತಿನಲ್ಲಿ 65%ರಷ್ಟನ್ನು 10% ಜನರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕೇವಲ 15% ಆದಾಯ ಮಾತ್ರವೇ ಇಡೀ ದೇಶದ ಹಿಂದುಳಿದವರ ಬಳಿ ಇದೆ. ಪ್ರತಿ ಐವರು ಭಾರತೀಯರ ಪೈಕಿ ನಾಲ್ಕು ಮಂದಿ 200 ರೂ.ಗಿಂತಲೂ ಕಡಿಮೆ ದೈನಂದಿನ ಆದಾಯ ಹೊಂದಿದ್ದಾರೆ” ಎಂದು ಹೇಳಿದೆ.

ಅರ್ಥಿಕ ಸಮೀಕ್ಷೆಯನ್ನು ಎಲ್ಲಿ ನೋಡಬಹುದು ಅಥವಾ ಪಡೆಯಬಹುದು?

ಆರ್ಥಿಕ ಸಮೀಕ್ಷೆಯ ಸಂಪೂರ್ಣ ದಾಖಲೆ ಮತ್ತು ಅಂಕಿಅಂಶಗಳು ಕೇಂದ್ರ ಬಜೆಟ್‌ನ ಅಧಿಕೃತ ವೆಬ್‌ಸೈಟ್ indiabudget.gov.inನಲ್ಲಿ ದೊರೆಯಲಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...