ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್ ರಾಂಧವಾ ಅವರ ಆತ್ಮಹತ್ಯೆ ವಿವಾದದ ನಡುವೆ ರಾಜೀನಾಮೆ ನೀಡಿದ್ದ ಪಂಜಾಬ್‌ನ ಮಾಜಿ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಲಾಲ್ಜಿತ್ ಸಿಂಗ್ ಅವರು ತಮ್ಮ ರಾಜಕೀಯ ಸಹಾಯಕರಿಗೆ ಗೋದಾಮು ಟೆಂಡರ್ ನೀಡುವಂತೆ ಭುಲ್ಲರ್, ರಾಂಧವಾ ಅವರ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಅವರನ್ನು ನಿವಾಸಕ್ಕೆ ಕರೆಸಿ, ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಲು 10 ಲಕ್ಷ ರೂ. ಲಂಚ ಸ್ವೀಕರಿಸಿರುವುದಾಗಿ ಕ್ಯಾಮೆರಾದಲ್ಲಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ವಿವಾದ: ಪಂಜಾಬ್ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ರಾಜೀನಾಮೆ
ಇದೀಗ ಪಂಜಾಬ್ ಪೊಲೀಸರು ಶನಿವಾರ ಮಾಜಿ ಸಚಿವ ಲಾಲ್ಜಿತ್ ಸಿಂಗ್, ಅವರ ತಂದೆ ಸುಖದೇವ್ ಸಿಂಗ್ ಭುಲ್ಲರ್ ಮತ್ತು ಅವರ ಆಪ್ತ ಸಹಾಯಕ (ಪಿಎ) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮೃತರ ಪತ್ನಿ ಉಪಿಂದರ್ ಕೌರ್ ಸಲ್ಲಿಸಿದ ದೂರಿನ ಮೇರೆಗೆ ಅಮೃತಸರದ ರಂಜಿತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಮೂವರು ನಿರಂತರ ಕಿರುಕುಳ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಮತ್ತು ಒತ್ತಡ ಹೇರಿ ತಮ್ಮ ಪತಿಗೆ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಪತ್ನಿ ಉಪಿಂದರ್ ಕೌರ್ ಆರೋಪಿಸಿದ್ದಾರೆ.
ರಾಂಧವ ಆತ್ಮಹತ್ಯೆ ಪ್ರಕರಣವು ಪಂಜಾಬ್‌ನಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇನ್ನು ಎಫ್‌ಐಆರ್ ದಾಖಲಾಗುವ ಮುನ್ನ ಶಿರೋಮಣಿ ಅಕಾಲಿ ದಳ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.





