6 ವರ್ಷಗಳಲ್ಲಿ ಒಂದೇ ಒಂದು ಚರ್ಚೆಯಲ್ಲಿ ಭಾಗಿಯಾಗದ ಮಾಜಿ ಸಿಜೆಐ ! | 53% ಹಾಜರಾತಿ !

Date:

ಸುಪ್ರೀಂ ಕೋರ್ಟ್‌ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ರಾಜ್ಯಸಭಾ ಸದಸ್ಯತ್ವದ ಆರು ವರ್ಷದ ಅವಧಿ ಸೋಮವಾರ ಮುಕ್ತಾಯಗೊಂಡಿದೆ.

2020ರ ಮಾರ್ಚ್‌ 16ರಂದು ಗೊಗೊಯ್‌ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಅವರು ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗಿ ನಾಲ್ಕು ತಿಂಗಳೊಳಗಾಗಿ ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದು ಅವರು ಮೋದಿ ನೇತೃತ್ವದ ಬಿಜೆಪಿಗೆ ಅನುಕೂಲಕರವಾದ ತೀರ್ಪು ನೀಡಿದ್ದಕ್ಕಾಗಿ ಎನ್ನುವ ಚರ್ಚೆಯೂ ಕೂಡ ರಾಷ್ಟ್ರ ರಾಜಕೀಯ ವಲಯದಲ್ಲಿ ಇದ್ದಿತ್ತು.

ಆದಾಗ್ಯೂ, ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಭಾರತೀಯ ಬಾರ್‌ ಕೌನ್ಸಿಲ್‌ ಅಧ್ಯಕ್ಷರು, ನ್ಯಾಯಾಂಗ ಮತ್ತು ಕಾರ್ಯಾಂಗದ ಸೇತುವೆಯಾಗಿ ರಂಜನ್‌ ಗೊಗೊಯ್‌ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.

ಇನ್ನು, ಪಿಆರ್‌ಎಸ್‌ ಸಂಗ್ರಹಿಸಿದ ಡೆಟಾ ಪ್ರಕಾರ, ರಾಜ್ಯಸಭೆಯ ಸದಸ್ಯರಾಗಿ ಅವರ ಹಾಜರಾತಿ ಕೇವಲ ಶೇ.53ರಷ್ಟು.  ಮತ್ತು 2023ರ ದೆಹಲಿ ಸೇವೆಗಳ ಮಸೂದೆಯ ಬಗ್ಗೆ ಒಂದೇ ಒಂದು ಚರ್ಚೆಯಲ್ಲಿ ಮಾತ್ರ ಭಾಗವಹಿಸಿದ್ದನ್ನು ಹೊರತಾಗಿ ಆರು ವರ್ಷಗಳ ಅವಧಿಯಲ್ಲಿ ಅವರು ಬೇರೆ ಯಾವುದೇ ಚರ್ಚೆಗಳಲ್ಲಿ ಭಾಗಿಯಾಗಿಲ್ಲ ಎನ್ನುವುದನ್ನು ರಾಜ್ಯಸಭೆಯ ವೆಬ್ ಸೈಟ್‌ ಅಲ್ಲಿ ಇರುವ ಮಾಹಿತಿ ಮೂಲಕ ತಿಳಿಯಬಹುದಾಗಿದೆ.

ದೆಹಲಿ ಸೇವೆಗಳ ಮೇಲಿನ ನಿಯಂತ್ರಣವನ್ನು ಕೇಂದ್ರದತ್ತ ಕೇಂದ್ರೀಕರಿಸುವ ಮಸೂದೆಗೆ ಗೊಗೊಯ್‌ ಬೆಂಬಲ ವ್ಯಕ್ತ ಪಡಿಸಿದ್ದರು. ʼಮೂಲ ರಚನೆ ಸಿದ್ದಾಂತʼವನ್ನು ಪ್ರಶ್ನಿಸಿದ್ದರು, ಮಾತ್ರವಲ್ಲದೇ ಅದಕ್ಕೆ ಸಂಬಂಧಿಸಿದಂತೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. ಆದರೆ, ರಾಜ್ಯಸಭೆಯಲ್ಲಿ ಗೊಗೊಯ್‌ ಮುಖ್ಯ ನ್ಯಾಯಮೂರ್ತಿಯಾಗಿ ನೀಡಿದ್ದ ತೀರ್ಪಿಗೆ ತದ್ವಿರುದ್ಧವಾಗಿದೆ. ರೋಜರ್‌ ಮ್ಯಾಥ್ಯೂ ಪ್ರಕರಣದಲ್ಲಿ ಮೂಲ ರಚನೆ ಸಿದ್ಧಾಂತವನ್ನು ಸಮರ್ಥಿಸಿಕೊಂಡಿದ್ದರು, ಮಾತ್ರವಲ್ಲದೇ, ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು 2017ರ ನ್ಯಾಯಮಂಡಳಿ ನಿಯಮಗಳನ್ನು ಅವರು ರದ್ದುಗೊಳಿಸಿದ್ದರು ಎನ್ನುವುದು ಕೂಡ ಉಲ್ಲೇಖಾರ್ಹ.

ಈ ಅವಧಿಯಲ್ಲಿ ಸಂಸತ್ತು ಕೃಷಿ ಕಾನೂನುಗಳು, ಹೊಸ ಕ್ರಿಮಿನಲ್ ಕಾನೂನುಗಳು, ನ್ಯಾಯಮಂಡಳಿ ಸುಧಾರಣಾ ಕಾಯ್ದೆ ವಕ್ಸ್ ತಿದ್ದುಪಡಿ ಕಾಯ್ದೆ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಪ್ರಮುಖ ವಿಧೇಯಕಗಳನ್ನು ಚರ್ಚಿಸಿದ್ದರೂ, ಗೊಗೊಯ್ ಆ ಚರ್ಚೆಗಳಲ್ಲಿ ಭಾಗಿಯಾಗಿರಲಿಲ್ಲ. ಆರು ವರ್ಷಗಳ ಅವರ ರಾಜ್ಯಸಭೆಯ ಸದಸ್ಯರ ಅವಧಿಯಲ್ಲಿ ಅವರು ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿಲ್ಲ.

ಇದನ್ನೂ ಓದಿ : ಬಂಗಾಳ ಚುನಾವಣೆ | ಮಮತಾ ಬ್ಯಾನರ್ಜಿ vs ಸುವೇಂದು ಅಧಿಕಾರಿ: ಭಂಟನಿಂದ ಎದುರಾಳಿವರೆಗೆ

ಪ್ರಮುಖ ತೀರ್ಪುಗಳು :

2019ನೇ ವರ್ಷ ಹಲವು ಪ್ರಮುಖ ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ಸಾಕ್ಷಿಯಾಗಿತ್ತು. ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತಿಯಾಗುವುದಕ್ಕೆ ಮುನ್ನ ಹಲವು ಮಹತ್ವ ತೀರ್ಪು ನೀಡಿ ಸೇವೆಯಿಂದ ನಿರ್ಗಮಿಸಿದ್ದರು,

ಅಯೋಧ್ಯೆ ತೀರ್ಪು : ಅಯೋಧ್ಯೆ ಭೂ ವಿವಾದಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ತೀರ್ಪು ನೀಡಿತ್ತು. ಸಿಜೆಐ ರಂಜನ್ ಗೊಗೊಯ್, ಜಸ್ಟೀಸ್ ಎಸ್ ಎ ಬೋಬ್ಡೆ, ಜಸ್ಟೀಸ್ ಡಿವೈ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಝೀರ್ ನೇತೃತ್ವದ ಪಂಚ ಪೀಠ ಕೇಂದ್ರ ಸರ್ಕಾರಕ್ಕೆ 3 ತಿಂಗಳೊಳಗೆ ಟ್ರಸ್ಟ್ ಸ್ಥಾಪಿಸುವಂತೆ ಹೇಳಿತ್ತು.

ರಫೆಲ್ ಪುನರ್ ಪರಿಶಿಲನಾ ಅರ್ಜಿ : ಫ್ರಾನ್ಸ್ ನ ಡಸ್ಸ್ಸೌಲ್ಟ್ ವಿಮಾನಯಾನದ ಜೊತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಡಿಕೊಂಡಿದ್ದ ರಫೆಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 2018ರಲ್ಲಿ ಕ್ಲೀನ್ ಚಿಟ್ ನೀಡಿತ್ತು.

ಉಳಿದಂತೆ, ರಾಹುಲ್‌ ಗಾಂಧೀ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌, ಶಬರಿಮಲೆ ಪುನರ್‌ ಪರಿಶೀಲನೆ ಮನವಿ, ಮಾಹಿತಿ ಹಕ್ಕು ಕಾಯ್ದೆಯಡಿಗೆ ಮುಖ್ಯ ನ್ಯಾಯಮೂರ್ತಿ ಕಚೇರಿ,  ಮಹಾರಾಷ್ಟ್ರ ಸರ್ಕಾರ ರಚನೆ ವಿವಾದ, ಎಸ್ಸಾರ್ ಸ್ಟೀಲ್‌ ಕೇಸ್‌ ಸೇರಿ ಹಲವು ಪ್ರಮುಖ ಪ್ರಕರಣಗಳಿಗೆ ರಂಜನ್‌ ಗೊಗೊಯ್‌ ಬಿಜೆಪಿಗೆ ಅನುಕೂಲಕರವಾದ ತೀರ್ಪನ್ನು ನೀಡಿದ್ದರು. ಅದರ ಪ್ರತಿಫಲವಾಗಿ ಅವರಿಗೆ ರಾಜ್ಯಸಭಾ ಸದಸ್ಯತ್ವಕ್ಕೆ ನಾಮ ನಿರ್ದೇಶಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...