ಪಶ್ಚಿಮ ಏಷ್ಯಾ ಸಂಘರ್ಷದ ಬೆನ್ನಲ್ಲೇ ಕೊಲ್ಲಿ ರಾಷ್ಟ್ರಗಳಲ್ಲಿ ಹಡಗುಗಳು ನಿರ್ಭೀತವಾಗಿ ಸಂಚರಿಸಲು ಬೆಂಗಾವಲಿಗೆ ನಿಲ್ಲಲು ಬೇಕಾಗಿರುವ ಪರಿಶೀಲನೆ ನಡೆಸುವುದಾಗಿ ಜಿ7 ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಇರಾನ್ ಜೊತೆಗಿನ ಅಮೆರಿಕ ಇಸ್ರೇಲ್ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯ ಕುರಿತು ಫೋನ್ ಕರೆಯ ಮೂಲಕ ಜಿ7 ನಾಯಕರು ಚರ್ಚಿಸಿದ್ದು, ಫ್ರೆಂಚ್ ಅಧ್ಯಕ್ಷ ಎಮಾನ್ಯುಯೆಲ್ ಏಳು ದೇಶದ ನಾಯಕರ ಜೊತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ನಂತರ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿ ಇರುವ ಸಂದರ್ಭ ಪರಿಶೀಲಿಸಿ ಹಡಗುಗಳ ಸಂಚಾರಕ್ಕೆ ತೊಂದರೆಯಾಗದಂತೆ ಕಾಯಲು ಬೆಂಗಾವಲು ಪಡೆ ನಿಯೋಜಿಸುವುದಾಗಿ ಹೇಳಿದ್ದಾರೆ. ಇದು ಹಡಗು ಸೇರಿದಂತೆ ಸಾರಿಗೆ ಕಂಪನಿದಾರರಿಗೆ ಮತ್ತು ವಿಮಾದಾರರಿಗೆ ಸಹ ಅನುವಾಗುವ ಹಾಗೆ ಕಾರ್ಯ ನಿರ್ವಹಿಸುತ್ತದೆ ಎನ್ನಲಾಗಿದೆ.
ಏನಿದು ಜಿ7?: ವಿಶ್ವದ ಪ್ರಬಲ ರಾಷ್ಟ್ರಗಳೆಂದು ಕರೆಯಲಾಗುವ 7 ದೇಶಗಳು ರಚಿಸಿಕೊಂಡಿರುವ ಅಂತರಾಷ್ಟ್ರೀಯ ರಾಜಕೀಯ, ಆರ್ಥಿಕ ಭದ್ರತೆ, ಇಂಧನ ನೀತಿಗಳನ್ನು ಸಂಘಟಿಸಲು ರಚನೆಯಾದ ಜಾಗತಿಕ ವೇದಿಕೆ. 1957ರಲ್ಲಿ ಸ್ಥಾಪನೆಯಾದ ಈ ವೇದಿಕೆ ಆರ್ಥಿಕ ಸ್ಥಿರತೆ, ಭದ್ರತೆ, ಇಂಧನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಅಂತರಾಷ್ಟ್ರೀಯ ವ್ಯಾಪಾರ ಸೇರಿದಂತೆ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಪ್ರಸ್ತುತ ಜಿ7 ಸಂಘಟಿತ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಯುರೋಪಿಯನ್ ಒಕ್ಕೂಟ, ಫ್ರಾನ್ಸ್, ಕೆನಡ, ಜಪಾನ್, ಜರ್ಮನಿ, ಇಟಲಿ ಸದಸ್ಯತ್ವ ಪಡೆದಿವೆ. ವರ್ಷಕ್ಕೊಮ್ಮೆ ಅಧ್ಯಕ್ಷ ರಾಷ್ಟ್ರಗಳ ಸರದಿ ಬದಲಾಗುತ್ತದೆ, ಈಗ ಫ್ರಾನ್ಸ್ ಅಧ್ಯಕ್ಷ ರಾಷ್ಟ್ರವಾಗಿದೆ.
ಸೋಮವಾರ ಸಭೆ ನಡೆಸಿದ ಜಿ7 ರಾಷ್ಟ್ರಗಳು ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ. ಜಾಗತಿಕ ಇಂಧನ ಪೂರೈಕೆಗೆ ಒದಗಿರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುತ್ತದೆ ಎಂದು ಘೋಷಿಸಿತ್ತು.
ಸೋಮವಾರ ನಡೆದ ಈ ಸಭೆಯಲ್ಲಿ ತಮ್ಮಲ್ಲಿ ತುರ್ತು ಸಂದರ್ಭಗಳಿಗೆ ಉಪಯುಕ್ತವಾಗಲು ದಾಸ್ತಾನು ಮಾಡಲಾದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಮ್ಮತದ ನಿರ್ಧಾರಕ್ಕೆ ಬಂದಿರಲಿಲ್ಲ.
ಸಧ್ಯ ಮೂವತ್ತರಿಂದ ನಲವತ್ತು ಕೋಟಿ ಬ್ಯಾರಲ್ ತೈಲ ತಮ್ಮ ಬಳಿ ಶೇಖರಣೆಯಿದ್ದು ಈಗಿನ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ದಾಸ್ತಾನಗಿರುವ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದವು.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಕೊನೆಗಾಣದ ಹಿನ್ನೆಲೆಯಲ್ಲಿ ಜಾಗತಿಕ ವಲಯದಲ್ಲಿ ಇಂಧನ ಕೊರತೆ ಸಂಭವಿದ್ದು ಪ್ರತಿ ಬ್ಯಾರಲ್ ತೈಲದ ಬೆಲೆ 10,620 ರೂ. ದಾಟಿತ್ತು. ಜಿ7 ತನ್ನ ದಾಸ್ತಾನಿನಲ್ಲಿರುವ ತೈಲವನ್ನು ಮಾರಲು ನಿರ್ಧರಿಸಿ ಘೋಷಿಸಿದ ನಂತರ ಪ್ರತಿ ಬ್ಯಾರೆಲ್ ತೈಲ ಬೆಲೆ 9,880 ರೂ.ಗಳಿಗೆ ಇಳಿಕೆ ಕಂಡಿತ್ತು.






