‘ಸಾಮಾನ್ಯ’ ವರ್ಗದ ಹುದ್ದೆಗಳು ಎಲ್ಲ ಕೆಟಗರಿಯ ಅಭ್ಯರ್ಥಿಗಳಿಗೂ ಮುಕ್ತ: ಸುಪ್ರೀಂ ಕೋರ್ಟ್‌

Date:

‘ಮುಕ್ತ’, ‘ಮೀಸಲಾತಿ ಇಲ್ಲದ’ ಅಥವಾ ‘ಸಾಮಾನ್ಯ’ ಎಂದು ವರ್ಗೀಕರಿಸಲಾದ ಹುದ್ದೆಗಳು ಯಾವುದೇ ನಿರ್ದಿಷ್ಟ ಜಾತಿ, ವರ್ಗ ಅಥವಾ ಲಿಂಗಕ್ಕೆ ಮೀಸಲಾಗಿಲ್ಲ. ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ದೊರೆಯಬೇಕು. ಉತ್ತಮ ಸಾಧನೆಯೊಂದಿಗೆ ಜನರಲ್ ಕೆಟಗರಿಯಲ್ಲಿ ಸ್ಥಾನ ಪಡೆವ ಅಭ್ಯರ್ಥಿಗಳಿಗೆ ಮೀಸಲಾತಿ ಅಡಿಯಲ್ಲಿ ಹುದ್ದೆಗಳನ್ನು ನೀಡುವುದು, ಅವರನ್ನು ಮೀಸಲಾತಿ ಕೆಟಗರಿಗೆ ತಳ್ಳುವುದು ಸರಿಯಲ್ಲ. ಅವರಿಗೆ, ಸಾಮಾನ್ಯ ವರ್ಗದಲ್ಲಿಯೇ ಹುದ್ದೆಗಳು ದೊರೆಯಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ರಾಜಸ್ಥಾನ ನ್ಯಾಯಾಲಯದ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್‌ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ವಿಚಾರಣೆ ನಡೆಸಿದೆ. ನೇಮಕಾತಿಗಳಲ್ಲಿ ಸಾಮಾನ್ಯ ವರ್ಗದ ಕಟ್-ಆಫ್‌ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದರೆ, ಅರ್ಹ ಮೀಸಲಾತಿ ವರ್ಗದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಹಂತದಲ್ಲಿ ಸಾಮಾನ್ಯ ವರ್ಗದಿಂದ ಹೊರಗಿಡಲಾಗದು. ಅವರನ್ನು ಸಾಮಾನ್ಯ ಕೆಟಗರಿಯಲ್ಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಹೇಳಿದೆ. ರಾಜಸ್ಥಾನದ ನ್ಯಾಯಾಲಯದ ನೇಮಕಾತಿಯಲ್ಲಿ ಅರ್ಹತಾ ಪಟ್ಟಿಗಳನ್ನು ಪುನರ್ನಿರ್ಮಿಸುವಂತೆ ಸೂಚಿಸಿದೆ.

“ನಿಯಮಗಳು ಸೂಚಿಸುವಂತೆ ‘ಸಾಮಾನ್ಯ’ ಎಂದು ಅಧಿಸೂಚಿಸಲಾದ ಹುದ್ದೆಗಳು ಯಾವುದೇ ಜಾತಿ/ಪಂಗಡ/ವರ್ಗ/ಲಿಂಗಕ್ಕೆ ಮೀಸಲಾಗಿರುವುದಿಲ್ಲ. ಆದ್ದರಿಂದ, ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ ‘ಮೀಸಲಾತಿ’ ಅಡಿಯಲ್ಲಿ ಬರುವ ಅಭ್ಯರ್ಥಿಗಳೂ ಅವರ ಉತ್ತಮ ಸಾಧನೆ ಮತ್ತು ಅರ್ಹತೆಯ ಆಧಾರದಲ್ಲಿ ಸಾಮಾನ್ಯ ವರ್ಗದ ಖಾಲಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಿಸಬಹುದು. ಈ ಹುದ್ದೆಗಳು ಎಲ್ಲರಿಗೂ ಮುಕ್ತವಾಗಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಾಮಾನ್ಯ ವರ್ಗವನ್ನು ಮೀಸಲಾತಿ ಇಲ್ಲದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಉದ್ದೇಶಿಸಲಾದ ವಿಭಾಗವೆಂದು ಪರಿಗಣಿಸಬಾರದು. ಹಾಗೆ ಪರಿಗಣಿಸಿದರೆ, ಅದು 14 ಮತ್ತು 16 ನೇ ವಿಧಿಗಳ ಅಡಿಯಲ್ಲಿ ಸಮಾನತೆಯ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ” ಎಂದು ಕೋರ್ಟ್‌ ಒತ್ತಿ ಹೇಳಿದೆ.

ಹಿನ್ನೆಲೆ

ರಾಜಸ್ಥಾನ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಹಾಗೂ ಸಂಬಂಧಿತ ಸಂಸ್ಥೆಗಳಲ್ಲಿ 2,756 ಜೂನಿಯರ್ ಜುಡಿಷಿಯಲ್ ಅಸಿಸ್ಟೆಂಟ್/ಕ್ಲರ್ಕ್ ಗ್ರೇಡ್-II ಹುದ್ದೆಗಳಿಗೆ 2022ರ ಆಗಸ್ಟ್‌ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಟೈಪ್‌ರೈಟಿಂಗ್ ಪರೀಕ್ಷೆಯನ್ನು ಒಳಗೊಂಡಿತ್ತು.

ಹುದ್ದೆಗಳನ್ನು ವರ್ಗವಾರು ವಿತರಿಸಲಾಗಿದ್ದರೂ, ಲಿಖಿತ ಪರೀಕ್ಷೆಯಲ್ಲಿ ನಿಗದಿತ ಕನಿಷ್ಠ (ಕಟ್‌-ಆಫ್‌) ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನು ಎರಡನೇ ಹಂತಕ್ಕೆ ಐದು ಪಟ್ಟು ಹೆಚ್ಚು ಖಾಲಿ ಹುದ್ದೆಗಳವರೆಗೆ ಶಾರ್ಟ್‌ಲಿಸ್ಟ್ ಮಾಡಲಾಗುವುದು ಎಂದು ಜಾಹೀರಾತಿನಲ್ಲಿ ಷರತ್ತು ವಿಧಿಸಲಾಗಿತ್ತು.

ಆದಾಗ್ಯೂ, 2023ರ ಮೇ ತಿಂಗಳಿನಲ್ಲಿ ಫಲಿತಾಂಶವನ್ನು ಘೋಷಿಸಿದಾಗ, ಪರಿಶಿಷ್ಟ ಜಾತಿಗಳು (SC), ಇತರ ಹಿಂದುಳಿದ ಜಾತಿ (ಕ್ರೀಮಿಲೇಯರ್), ಅತ್ಯಂತ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (EWS) ಸೇರಿದಂತೆ ಮೀಸಲು ವರ್ಗಗಳ ಕಟ್-ಆಫ್ ಅಂಕಗಳು ಸಾಮಾನ್ಯ ವರ್ಗದ ಕಟ್-ಆಫ್‌ಗಿಂತ ಹೆಚ್ಚಿದೆ ಎಂದು ತಿಳಿದುಬಂದಿತ್ತು.

ಈ ಗೊಂದಲದ ಕಟ್‌-ಆಫ್‌ ಅಂಕಗಳಿಂದಾಗಿ, ಸಾಮಾನ್ಯ ವರ್ಗದ ಕಟ್-ಆಫ್‌ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ, ಆದರೆ, ಆಯಾ ಮೀಸಲು ವರ್ಗಗಳಿಗೆ ನಿಗದಿಪಡಿಸಿದ ಕಟ್-ಆಫ್‌ಗಿಂತ ಕಡಿಮೆ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಟೈಪ್‌ರೈಟಿಂಗ್ ಪರೀಕ್ಷೆಗೆ ಅರ್ಹತೆ ಪಡೆಯುವ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾಗಿತ್ತು.

ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ತಾವು ಅನೇಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಪಡೆದು ಅರ್ಹತೆ ಹೊಂದಿದ್ದರೂ, ತಮ್ಮನ್ನು ಮೀಸಲು ವರ್ಗಗಳಿಗೆ ಸೀಮಿತಗೊಳಿಸಿ, ಅನ್ಯಾಯ ಎಸಲಾಗಿದೆ ಎಂದು ಹೈಕೋರ್ಟ್‌ ಮೆಟ್ಟಿಲೇರಿಸಿದ್ದರು.  

ಅವರ ಮನವಿಯನ್ನು ಅಂಗೀಕರಿಸಿದ ಹೈಕೋರ್ಟ್, ಅರ್ಹ ಮೀಸಲು ವರ್ಗದ ಅಭ್ಯರ್ಥಿಗಳು ಯಾವುದೇ ವಿಶೇಷ ರಿಯಾಯಿತಿಯನ್ನು ಪಡೆಯದಿದ್ದರೆ, ಮೊದಲು ಅವರನ್ನು ‘ಸಾಮಾನ್ಯ ವರ್ಗ’ದಲ್ಲಿ ಪರಿಗಣಿಸಬೇಕು ಎಂದು ತೀರ್ಪು ನೀಡಿತು. ಅರ್ಹತಾ ಪಟ್ಟಿಗಳ ಪರಿಷ್ಕರಣೆಗೆ ನಿರ್ದೇಶನ ನೀಡಿತು.

ಆದರೆ, ಆಡಳಿತವು ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ, ಸುಪ್ರೀಂ ಕೋರ್ಟ್‌ ಕೂಡ ಮೀಸಲು ವರ್ಗದ ಅರ್ಹ ಅಭ್ಯರ್ಥಿಗಳನ್ನು ‘ಸಾಮಾನ್ಯ ವರ್ಗ’ದಲ್ಲಿಯೇ ಪರಿಗಣಿಸುಂತೆ ಸೂಚಿಸಿದೆ.

ಅವಲೋಕನಗಳು

‘ಮುಕ್ತ’, ‘ಮೀಸಲಾತಿ ರಹಿತ’ ಅಥವಾ ‘ಸಾಮಾನ್ಯ’ ಎಂಬ ಪದಗಳ ಬಳಕೆಯೇ ಅಂತಹ ಹುದ್ದೆಗಳು ಯಾವುದೇ ಜಾತಿ, ಬುಡಕಟ್ಟು, ವರ್ಗ ಅಥವಾ ಲಿಂಗಕ್ಕೆ ಮೀಸಲಾಗಿಲ್ಲ, ಅರ್ಹತೆ ಮಾತ್ರವೇ ಈ ವರ್ಗದ ಅಡಿಯಲ್ಲಿ ಉದ್ಯೋಗ ಪಡೆಯುವ ಏಕೈಕ ಮಾನದಂಡ ಎಂದು ಸುಪ್ರೀಂ ಕೋರ್ಟ್‌ ಗಮನಿಸಿದೆ.

“ಹೆಚ್ಚು ಅರ್ಹತೆ ಹೊಂದಿರುವ ಮೀಸಲು ವರ್ಗದ ಅಭ್ಯರ್ಥಿಯನ್ನು ಸಾಮಾನ್ಯ ವರ್ಗದಲ್ಲಿ ಇರಿಸುವುದು ಮೀಸಲಾತಿಯ ಒಂದು ಅಂಶವಲ್ಲ. ಅದು, ಅರ್ಹತೆಯ ಮೇಲೆ ಸ್ಥಾಪಿಸಲಾದ ಸಮಾನತೆಯ ತತ್ವವಾಗಿದೆ. ಮೀಸಲು ವರ್ಗದ ಅರ್ಹ ಅಭ್ಯರ್ಥಿಗಳನ್ನು ಅವರ ಸಾಮಾಜಿಕ ವರ್ಗದ ಕಾರಣಕ್ಕಾಗಿಯೇ ಹೊರಗಿಡುವುದು ಸ್ವೀಕಾರಾರ್ಹವಲ್ಲ, ಅದು ತಾರತಮ್ಯಕ್ಕೆ ಸಮನಾಗಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಈ ಲೇಖನ ಓದಿದ್ದೀರಾ?: ಗಣಿಗಾರಿಕೆ ವಿರುದ್ಧ 3 ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆ; ಅದಾನಿ ಲಾಭಕ್ಕಾಗಿ ಸರ್ಕಾರಗಳ ತಂತ್ರ-ಕುತಂತ್ರ?

‘ಡಬಲ್ ಬೆನಿಫಿಟ್’ ಎಂಬ ವಾದವನ್ನು ಅಲ್ಲಗಳೆದಿರುವ ನ್ಯಾಯಾಲಯವು, “ಅರ್ಹತೆಯ ಮೇಲೆ ಸಾಮಾನ್ಯ ವರ್ಗಕ್ಕೆ ಅರ್ಹತೆ ಪಡೆದ ಮೀಸಲು ವರ್ಗದ ಅಭ್ಯರ್ಥಿಯು, ನೇಮಕಾತಿ ಹಂತದಲ್ಲಿ ಮೀಸಲಾತಿ ಪ್ರಯೋಜನಗಳನ್ನು ಪಡೆಯುವುದಿಲ್ಲ. ಅದು ಸಾಧ್ಯವೂ ಇಲ್ಲ. ಇಲ್ಲಿ ‘ಡಬಲ್ ಬೆನಿಫಿಟ್’ ಎಂಬ ಗ್ರಹಿಕೆಯು ತಪ್ಪು ಕಲ್ಪನೆಯಾಗಿದೆ. ಅಂತೆಯೇ, ಸಾಮಾನ್ಯ ವರ್ಗದ ಹುದ್ದೆಗಳಿಗೆ ಅರ್ಹತೆ ಆಧಾರಿತ ಆಯ್ಕೆಯು ಮೀಸಲು ವರ್ಗಗಳಿಗೆ ಉದ್ದೇಶಿಸಲಾದ ಕೋಟಾವನ್ನು ಕಡಿಮೆ ಮಾಡಲು ಬರುವುದಿಲ್ಲ” ಎಂಬುದನ್ನೂ ಒತ್ತಿ ಹೇಳಿದೆ.

“ಸಾಮಾನ್ಯ ವರ್ಗವು ಕೋಟಾ ಅಲ್ಲ. ಅದು ಸಾಮಾಜಿಕ ವರ್ಗೀಕರಣವನ್ನು ಲೆಕ್ಕಿಸದೆ ಎಲ್ಲ ಅಭ್ಯರ್ಥಿಗಳಿಗೆ ಲಭ್ಯವಿರುವ ಖಾಲಿ ಹುದ್ದೆಗಳ ಗುಂಪು. ಮೀಸಲು ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಅವಕಾಶ ಪಡೆಯಬಾರದು ಎನ್ನಲು ಸಾಧ್ಯವೇ ಇಲ್ಲ. ಮೀಸಲು ವರ್ಗಕ್ಕೆ ಸೇರಿದ ಅಭ್ಯರ್ಥಿಯು ಯಾವುದೇ ಸಡಿಲಿಕೆ ಅಥವಾ ರಿಯಾಯಿತಿಯನ್ನು ಪಡೆಯದೆ ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ಸಾಮಾನ್ಯ ವರ್ಗದ ಹುದ್ದೆಗೆ ಅರ್ಹತೆ ಪಡೆದರೆ, ಅವರಿಗೆ ಸಾಮಾನ್ಯ ವರ್ಗದಲ್ಲಿಯೇ ಉದ್ಯೋಗ ನೀಡಬೇಕು” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

“ಅರ್ಹತೆ ಹೊಂದಿರುವ ಮೀಸಲು ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದರೂ, ಅವರನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದಿಲ್ಲ ಎಂಬುದಕ್ಕೆ ಸಂವಿಧಾನದಲ್ಲಿ ಯಾವುದೇ ಸೂಚನೆ ಇಲ್ಲ. ಅರ್ಜಿದಾರರು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾಗಲೂ, ಅವರನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳೆಂದು ಪರಿಗಣಿಸದೇ ಇರುವುದು ಕಾನೂನುಬಾಹಿರ” ಎಂದು ಪೀಠ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...