25 ಜನರ ಸಾವಿಗೆ ಕಾರಣವಾದ ಗೋವಾ ನೈಟ್‌ಕ್ಲಬ್ ಬೆಂಕಿ ದುರಂತ ಪ್ರಕರಣದಲ್ಲಿ, ಕ್ಲಬ್‌ನ ಮಾಲೀಕರಾದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಇಬ್ಬರೂ ದೇಶ ತೊರೆದು ಪರಾರಿಯಾಗಿದ್ದು, ಅವರ ವಿರುದ್ಧ ‘ಬ್ಲೂ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿದೆ.
ಗೋವಾದಲ್ಲಿರುವ ಲೂಥ್ರಾ ಸಹೋದರರ ಒಡೆತನದ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನಲ್ಲಿ ಡಿಸೆಂಬರ್ 7ರಂದು ಬೆಂಕಿ ಹೊತ್ತಿಕೊಂಡು 25 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ನಿಯಮ, ಮಾನದಂಡಗಳನ್ನು ಉಲ್ಲಂಘಿಸಿ ಕ್ಲಬ್‌ಅನ್ನು ನಿರ್ಮಾಣ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ದುರಂತ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಲೂಥ್ರಾ ಸಹೋದರರು ಸ್ವಿಡ್ಜರ್‌ಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣವನ್ನು ಗೋವಾ ಪೊಲೀಸರು ಮತ್ತು ಸಿಬಿಐ ಇಂಟರ್‌ಪೋಲ್ ತನಿಖೆ ನಡೆಸುತ್ತಿದೆ. ಪರಾರಿಯಾಗಿರುವವರನ್ನು ವಿದೇಶದಲ್ಲಿ ಬಂಧಿಸಿ, ಭಾರತಕ್ಕೆ ಕರೆತರಲು ‘ಬ್ಲೂ ಕಾರ್ನರ್’ ನೋಟಿಸ್ ಜಾರಿಗೊಳಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಗೋವಾ ನೈಟ್‌ಕ್ಲಬ್ ದುರಂತ | ಸ್ಥಳದಿಂದ ಪರಾರಿಯಾದ ‘ಲೂಥ್ರಾ ಬ್ರದರ್ಸ್’ ಯಾರು ಗೊತ್ತೇ?
ದುರಂತ ಘಟನೆಯ ಬೆನ್ನಲ್ಲೇ, ಗೋವಾದಲ್ಲಿರುವ ಲೂಥ್ರಾ ಸಹೋದರರ ಮತ್ತೊಂದು ರೆಸ್ಟೋರೆಂಟ್‌ಅನ್ನು ಗೋವಾ ಸರ್ಕಾರ ನೆಲಸಮ ಮಾಡಿದೆ. ಆ ರೆಸ್ಟೋರೆಂಟ್ ನಿರ್ಮಾಣದಲ್ಲಿಯೂ ಹಲವು ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.




