ಭಾರತದ ಅಮೃತ ಘಳಿಗೆಯಲ್ಲಿ ಮೋದಿ ಅವರು ತಮ್ಮ ಜನ್ಮದಿನದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಭಾರತವನ್ನು ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರವನ್ನಾಗಿಸಲು ಆ ದೇವರೇ ಮೋದಿ ಅವರ ರೂಪದಲ್ಲಿ ಅವತರಿಸಿದ್ದಾನೆ ಎಂದು ಉದ್ಯಮಿ, ಮೋದಿ ಅವರ ಅತ್ಯಾಪ್ತ ಮುಖೇಶ್ ಅಂಬಾನಿ ಹೇಳಿದ್ದಾರೆ.
ಮೋದಿ ಅವರ 75ನೇ ಜನ್ಮದಿನಕ್ಕೆ ಅಂಬಾನಿ ಶುಭಾಶಯ ಕೋರಿದ್ದಾರೆ. ಅವರ ವಿಡಿಯೋವನ್ನು ಎಎನ್‌ಐ ಪ್ರಕಟಿಸಿದೆ. ವಿಡಿಯೋದಲ್ಲಿ; “ಸ್ವತಂತ್ರ ಭಾರತವು 100 ವರ್ಷಗಳನ್ನು ಪೂರೈಸುವಾಗ ಮೋದಿ ಅವರು ಭಾರತಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕು ಎಂಬುದು ನನ್ನ ಆಳವಾದ ಆಶಯ. ಪ್ರಧಾನಿಯವರ ಜನ್ಮದಿನವು ಎಲ್ಲಾ ಭಾರತೀಯರಿಗೆ ‘ಹಬ್ಬದ ದಿನ’ವಾಗಿದೆ” ಎಂದು ಅವರು ಹೇಳಿದ್ದಾರೆ.
“ಇಂದು 145 ಕೋಟಿ ಭಾರತೀಯರಿಗೆ ಹಬ್ಬದ ದಿನವಾಗಿದೆ. ಇದು ನಮ್ಮ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ಪ್ರಧಾನಿ ನರೇಂದ್ರಭಾಯಿ ಮೋದಿ ಜಿ ಅವರ 75ನೇ ಹುಟ್ಟುಹಬ್ಬ. ಭಾರತದ ಇಡೀ ವ್ಯಾಪಾರ ಸಮುದಾಯದ ಪರವಾಗಿ, ರಿಲಯನ್ಸ್ ಕುಟುಂಬ ಮತ್ತು ಅಂಬಾನಿ ಕುಟುಂಬದ ಪರವಾಗಿ, ನಾನು ಪ್ರಧಾನಿ ಮೋದಿ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಭಾರತದ ಅಮೃತ ಕಾಲದಲ್ಲಿ ಮೋದಿ ಜಿ ಅವರ ಅಮೃತ ಮಹೋತ್ಸವ ಬರುತ್ತಿರುವುದು ಕಾಕತಾಳೀಯವಲ್ಲ. ಅವರ ಜನ್ಮದಿನವನ್ನು ಭಾರತೀಯರು ಉತ್ಸವವಾಗಿ ಆಚರಿಸಬೇಕು” ಎಂದು ಅವರು ಹೇಳಿದ್ದಾರೆ.
#WATCH | "It is my deepest wish that Modi ji should continue to serve India when independent India turns 100…", says Chairman & Managing Director of Reliance Industries Limited, Mukesh Ambani, on PM Modi's 75th birthday
— ANI (@ANI) September 17, 2025
He says, "Today is a festive day for 1.45 billion… pic.twitter.com/u2NJSTMV3R
ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಮೈಕ್ರೋಸಾಫ್ಟ್‌ನ ಮಾಜಿ ಸಿಇಒ ಬಿಲ್ ಗೇಟ್ಸ್ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. “ಪ್ರಧಾನಿ ಮೋದಿ, ನಿಮ್ಮ 75ನೇ ಹುಟ್ಟುಹಬ್ಬದಂದು ನಿಮಗೆ ನನ್ನ ಶುಭಾಶಯಗಳು. ನೀವು ಭಾರತದ ಅದ್ಭುತ ಪ್ರಗತಿಯನ್ನು ಮುನ್ನಡೆಸುತ್ತಿದ್ದೀರಿ. ಜಾಗತಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವಾಗ ನಿಮಗೆ ಉತ್ತಮ ಆರೋಗ್ಯ ಮತ್ತು ನಿರಂತರ ಶಕ್ತಿ ದೊರೆಯಲಿ ಎಂದು ನಾನು ಬಯಸುತ್ತೇನೆ. ಭಾರತ ಸರ್ಕಾರದೊಂದಿಗಿನ ನಮ್ಮ ಪಾಲುದಾರಿಕೆಯನ್ನು ಗೇಟ್ಸ್ ಫೌಂಡೇಶನ್ ಗೌರವಿಸುತ್ತದೆ. ವಿಕ್ಷಿತ್ ಭಾರತ್ ಎಡೆಗೆ ಸಾಗುವ ಆಶಯವನ್ನು ನಾವು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.




