ಆವಕಾಡೊ ಟೋಸ್ಟ್‌ ಬೆಲೆ 13 ಸಾವಿರ ರೂಪಾಯಿ: ವೀಡಿಯೋ ವೈರಲ್, ನೆಟ್ಟಿಗರು ಹೇಳಿದ್ದೇನು?

Date:

ಆವಕಾಡೊ ಆರೋಗ್ಯಕರವಾದ ಹಣ್ಣೆಂದು ಪರಿಗಣಿಸಲಾಗುತ್ತದೆ ಮತ್ತು ಡಯೆಟ್ ಮಾಡುವವರ ಬೆಳಗಿನ ಉಪಾಹಾರ ಹೆಚ್ಚಾಗಿ ಆವಕಾಡೊ ಆಗಿರುತ್ತದೆ. ಆವಕಾಡೊ ಹಣ್ಣಿನ ಹಲವು ರೆಸಿಪಿಗಳಿವೆ. ಆದರೆ ಗುಜರಾತ್‌ನ ಬಾಣಸಿಗರೊಬ್ಬರು (ಚೆಫ್) ತಯಾರಿಸುವ ಈ ಆವಕಾಡೊ ರೆಸಿಪಿ ಮಾತ್ರ ಅತೀ ದುಬಾರಿ.

ಸಾಮಾನ್ಯವಾಗಿ ಆವಕಾಡೊ ದುಬಾರಿ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಈ ಆವಕಾಡೊವನ್ನು ಬಳಸಿ ಗುಜರಾತ್‌ನ ಸೂರತ್‌ನಲ್ಲಿ ತಯಾರಿಸಲಾಗುವ ಟೋಸ್ಟ್ ವಿಶ್ವದಲ್ಲೆ ಅತೀ ದುಬಾರಿ ಆವಕಾಡೊ ಟೋಸ್ಟ್ ಎಂದು ಪರಿಗಣಿಸಲಾಗುತ್ತದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನು ಓದಿದ್ದೀರಾ? ಅಮೆರಿಕ ಅಧ್ಯಕ್ಷರ ಪತ್ನಿಗೆ ಪ್ರಧಾನಿ ಮೋದಿಯಿಂದ ದುಬಾರಿ ವಜ್ರದ ಉಡುಗೊರೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೂರ್ತಿ ಮಯೂರ್‌ಕುಮಾರ್ ವಸಂತ್‌ಲಾಲ್ ಎಂಬ ಬ್ಲಾಗರ್ ತಮ್ಮ foodie_addicted_ ಎಂಬ ಖಾತೆಯಿಂದ ಬಾಣಸಿಗರೊಬ್ಬರು ಸೂರತ್‌ನಲ್ಲಿ 13 ಸಾವಿರ ರೂಪಾಯಿ ಬೆಲೆಯ ಆವಕಾಡೊ ಟೋಸ್ಟ್ ಅನ್ನು ತಯಾರಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

“ನಿಮ್ಮ ಶ್ರೀಮಂತ ಸ್ನೇಹಿತರಿಗೆ ಟ್ಯಾಗ್ ಮಾಡಿ! ಭಾರತದಲ್ಲಿ ಅತ್ಯಂತ ದುಬಾರಿ ಆವಕಾಡೊ ಟೋಸ್ಟ್ ಕೇವಲ 13,000 ರೂಪಾಯಿಗೆ ಲಭಿಸುತ್ತದೆ. ಈ ಟೋಸ್ಟ್‌ಗೆ ಸರ್ಬಿಯಾದಿಂದ ರಫ್ತು ಮಾಡಲಾದ ‘ಡಾಂಕಿ ಪುಲ್ ಚೀಸ್’ ಬಳಸಲಾಗುತ್ತದೆ” ಎಂದು ಬರೆದುಕೊಂಡಿದ್ದಾರೆ.

ಈ ಟೋಸ್ಟ್‌ನ ಬೆಲೆ ಇಷ್ಟೊಂದು ದುಬಾರಿಯಾಗಲು ಕಾರಣ ಚೀಸ್ ಆಗಿದೆ. ಇದು ದುಬಾರಿ ಚೀಸ್ ಎಂದು ಹೇಳಲಾಗಿದೆ. ಒಂದು ಕೆಜಿ ಚೀಸ್ ಅನ್ನು ತಯಾರಿಸಲು ಸುಮಾರು 25 ಲೀಟರ್ ಹಾಲು ಬೇಕಾಗುತ್ತದೆ ಎಂದು ಬಾಣಸಿಗ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ? ಆಗಷ್ಟೇ ಹುಟ್ಟಿದ್ದ ಕಂಪನಿಗಳಿಂದ ದುಬಾರಿ ಬೆಲೆಗೆ ಪಿಪಿಇ ಕಿಟ್ ಖರೀದಿ; ಚೀನಾ ಲಾಭಕ್ಕಾಗಿ ಬಿಎಸ್‌ವೈ, ಶ್ರೀರಾಮುಲು ಭ್ರಷ್ಟಾಚಾರ!

ಈ ವೀಡಿಯೋವನ್ನು ಸದ್ಯ 600 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಸಾವಿರಾರು ಕಾಮೆಂಟ್‌ಗಳು ಬಂದಿದೆ. “ನಾವು ಆರೋಗ್ಯಕರ ಆಹಾರವನ್ನು ಅನಾರೋಗ್ಯಕರ ಆಹಾರವನ್ನು ಮಾಡುವುದು ಈ ರೀತಿಯೇ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇನ್ನೋರ್ವ ನೆಟ್ಟಿಗರು “ನೀವು ತಮಾಷೆ ಮಾಡುತ್ತಿದ್ದೀರಾ” ಎಂದು ಪ್ರಶ್ನಿಸಿದ್ದಾರೆ. “ಈ ಹಣದಲ್ಲಿ ನಮ್ಮ ಮನೆಗೆ ಎರಡು ತಿಂಗಳ ರೇಷನ್ ತರಬಹುದು” ಎಂದೂ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. “ವಿದೇಶದಲ್ಲಿಯೂ ಆವಕಾಡೊವನ್ನು ಇಷ್ಟೊಂದು ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ” ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇನ್ನು ಹಲವು ನೆಟ್ಟಿಗರು “ನಾನು ಇದಕ್ಕಿಂತ ರುಚಿಯಾದ ಆವಕಾಡೊ ಟೋಸ್ಟ್ ಅನ್ನು ಬರೀ 150 ರೂಪಾಯಿಗೆ ತಯಾರಿಸಬಲ್ಲೆ. ಈ ಟೋಸ್ಟ್‌ ತಯಾರಿಗೆ ಬಳಸಿರುವ ಆಹಾರ ಪದಾರ್ಥಗಳೆಲ್ಲವನ್ನು ನೋಡಿದಾಗ ಇದೇನು 13 ಸಾವಿರ ರೂಪಾಯಿ ಬೆಲೆ ಬಾಳುವ ಟೋಸ್ಟ್ ಅಲ್ಲ ಅನಿಸುತ್ತದೆ. ಇದು ಅತೀ ದುಬಾರಿ ಬೆಲೆಯಾಯಿತು” ಎಂದೂ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...