‘ಮಾದರಿ ರಾಜ್ಯ’ ಗುಜರಾತ್ ಅಪೌಷ್ಟಿಕತೆ, ಬಡತನ, ಶಿಕ್ಷಣದ ವಿಚಾರದಲ್ಲಿ ಬಿಹಾರದ ಸಮೀಪದಲ್ಲಿದೆ: ಅಧ್ಯಯನ ವರದಿ

Date:

ಕೇಂದ್ರ ಸರ್ಕಾರವು ಬಿಜೆಪಿ ಆಡಳಿತವಿರುವ ಗುಜರಾತ್ ಅನ್ನು ‘ಮಾದರಿ ರಾಜ್ಯ’ ಎಂದು ಕರೆಯುತ್ತದೆ. ತ್ವರಿತ ಕೈಗಾರಿಕಾ ವಿಸ್ತರಣೆಯ ಕಾರಣದಿಂದಾಗಿ ಗುಜರಾತ್‌ನ ಅಭಿವೃದ್ಧಿ ಮಾದರಿಯನ್ನು ಹಾಡಿಹೊಗಳಲಾಗುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಅಸಮಾನತೆ ವಿಚಾರಕ್ಕೆ ಬಂದಾಗ, ಅಪೌಷ್ಟಿಕತೆ, ಬಡತನ, ಶಿಕ್ಷಣದ ವಿಚಾರಕ್ಕೆ ಬಂದಾಗ ಗುಜರಾತ್ ಹಿಂದುಳಿದಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಆರೋಗ್ಯ, ಶಿಕ್ಷಣ ಮತ್ತು ಬಡತನ ನಿರ್ವಹಣೆ ಸೇರಿದಂತೆ ಇತರ ಸೂಚ್ಯಂಕಗಳಲ್ಲಿ ಗುಜರಾತ್‌, ಹಿಂದುಳಿದ ರಾಜ್ಯ ಎನಿಸಿಕೊಂಡಿರುವ ಬಿಹಾರಕ್ಕೆ ಅಧಿಕ ಸಮೀಪದಲ್ಲಿದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ.

ಇದನ್ನು ಓದಿದ್ದೀರಾ? ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್ ಮಾಡಿ ಬಿಹಾರದ ಇಲಾಖೆಯೆಂದು ಮರುನಾಮಕರಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಇಂಡಿಯಾ:ದಿ ಚಾಲೆಂಜ್ ಆಫ್ ಕಾಂಟ್ರಾಸ್ಟೆಡ್ ರೀಜನಲ್ ಡೈನಾಮಿಕ್ಸ್’ ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿ ಕ್ರಿಸ್ಟೋಫ್ ಜಾಫ್ರೆಲಾಟ್, ವಿಘ್ನೇಶ್ ರಾಜಮಣಿ ಮತ್ತು ನೀಲ್ ಭಾರದ್ವಾಜ್ ಅವರು ಮೂರು ರಾಜ್ಯಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ.

‘ಭಾರತದೊಳಗಿನ ವಿಭಿನ್ನ ಭಾರತ’ ಎಂಬ ಪರಿಕಲ್ಪನೆಯಲ್ಲಿ ಬಿಹಾರ, ಗುಜರಾತ್ ಮತ್ತು ತಮಿಳುನಾಡು- ಮೂರು ರಾಜ್ಯಗಳ ವಿಶ್ಲೇಷಣೆ ಮಾಡಿದ್ದಾರೆ. ಈ ಮೂರು ರಾಜ್ಯಗಳ ಸಾಮಾಜಿಕ- ಆರ್ಥಿಕ ವ್ಯತ್ಯಾಸಗಳು, ಸರ್ಕಾರದ ನೀತಿಗಳನ್ನು ಈ ಅಧ್ಯಯನದಲ್ಲಿ ಹೋಲಿಕೆ ಮಾಡಲಾಗಿದೆ.

ಒಂದೆಡೆ ಬಿಹಾರ ಅಭಿವೃದ್ಧಿ ಹೊಂದದ ರಾಜ್ಯವಾದರೆ, ಗುಜರಾತ್ ತಲಾ ಆದಾಯ ಲೆಕ್ಕಾಚಾರದಲ್ಲಿ ಶ್ರೀಮಂತ ರಾಜ್ಯವಾಗಿದೆ. ಕ್ಷಿಪ್ರವಾಗಿ ಕೈಗಾರಿಕಾ ಅಭಿವೃದ್ಧಿ ನಡೆದ ಕಾರಣದಿಂದಾಗಿ ಮಾದರಿ ರಾಜ್ಯವಾಗಿದೆ. ಆದರೆ ಶಿಕ್ಷಣಕ್ಕೆ ಹೆಚ್ಚು ಹೂಡಿಕೆ ಮಾಡದ ಕಾರಣದಿಂದಾಗಿ ಅಸಮಾನತೆಯು ಗುಜರಾತ್‌ನಲ್ಲಿ ಮೇಲುಗೈ ಸಾಧಿಸಿದೆ” ಎಂದು ಅಧ್ಯಯನ ವರದಿ ಹೇಳಿದೆ.

ಇದನ್ನು ಓದಿದ್ದೀರಾ? ಗುಜರಾತ್ | ಮಹಿಳಾ ರೋಗಿಗಳ ಖಾಸಗಿ ವಿಡಿಯೋ ಮಾರಾಟ; ಏಳು ಮಂದಿ ಬಂಧನ

ಸಾಮಾಜಿಕ ಕ್ಷೇತ್ರಗಳಿಗೆ ಮಾಡಲಾದ ವೆಚ್ಚದ ಆಧಾರದಲ್ಲಿ ಈ ಮೂರು ರಾಜ್ಯಗಳು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತದೆ ಎಂಬುದನ್ನು ಸಂಶೋಧನೆ ಮಾಡಲಾಗಿದೆ. “ಬಿಹಾರ ಅತೀ ಕಡಿಮೆ ಮೂಲಸಂಪತ್ತು ಇದ್ದರೂ ಕೂಡಾ ಸಾಮಾಜಿಕ ಕ್ಷೇತ್ರಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತದೆ, ತಮಿಳುನಾಡು ಅದಕ್ಕೂ ಅಧಿಕ ಹೂಡಿಕೆ ಮಾಡುತ್ತದೆ. ಆದರೆ ಗುಜರಾತ್ ಶಿಕ್ಷಣ, ಆರೋಗ್ಯ ಮತ್ತು ವಸತಿ ವ್ಯವಸ್ಥೆ ಮೊದಲಾದವುಗಳಿಗೆ ಅತೀ ಕಡಿಮೆ ಹೂಡಿಕೆ ಮಾಡುತ್ತದೆ. ಈ ವಿಚಾರದಲ್ಲಿ ತಮಿಳುನಾಡಿಗಿಂತ ಹಿಂದಿರುವುದು ಮಾತ್ರವಲ್ಲ, ಬಿಹಾರಕ್ಕಿಂತ ಹಿಂದಿದೆ” ಎಂದು ವರದಿ ತಿಳಿಸಿದೆ.

“ಗುಜರಾತ್ ಸಂಪನ್ಮೂಲಭರಿತವಾಗಿದ್ದರೂ ಕೂಡಾ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಲ್ಲ. ಆದರೆ ಬಿಹಾರಕ್ಕಿಂತ ಹೆಚ್ಚು ಹೂಡಿಕೆ ಮಾಡುತ್ತದೆ. ಆದರೂ ಕೂಡಾ ಗುಜರಾತ್‌ನ ಹೂಡಿಕೆಯು ಶೇಕಡ 10.5ರಷ್ಟು ಏರಿಕೆಯಾಗಿದ್ದರೆ, ಬಿಹಾರದ ಹೂಡಿಕೆ ಶೇಕಡ 29.5ರಷ್ಟು ಹೆಚ್ಚಳವಾಗಿದೆ. ತಮಿಳುನಾಡು ಹೂಡಿಕೆ ಶೇಕಡ 20.5ರಷ್ಟು ಏರಿಕೆಯಾಗಿದೆ” ಎಂದು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...