ಗುಜರಾತ್ | ಕೂಲಿ ಕಾರ್ಮಿಕರ ಮೇಲೆ ಸರ್ಕಾರದ ದಮನ; ‘ಮನರೇಗಾ’ದಿಂದ 22.68 ಲಕ್ಷ ಕಾರ್ಮಿಕರು ‘ಕಿಕ್‌ಔಟ್’!

Date:

ಗುಜರಾತ್‌ನಲ್ಲಿ ಮನರೇಗಾ ಅಡಿಯಲ್ಲಿ ಕೂಲಿ ಕಾರ್ಮಿಕರನ್ನು ಸಾಮೂಹಿಕವಾಗಿ ಹೊರಹಾಕಲಾಗಿದೆ. ಮನರೇಗಾ ದಾಖಲೆಗಳಿಂದ ಅವರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂಬ ಆತಂಕಕಾರಿ ದತ್ತಾಂಶವನ್ನು ಕೇಂದ್ರ ಸರ್ಕಾರ ನೀಡಿದೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ, ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಬರೋಬ್ಬರಿ 22.68 ಲಕ್ಷ ಕಾರ್ಮಿಕರನ್ನು ಮನರೇಗಾದಿಂದ ಕೈಬಿಡಲಾಗಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮನರೇಗಾ ಕುರಿತು ಅಧಿಕೃತ ದತ್ತಾಂಶವನ್ನು ಡಿಸೆಂಬರ್ 9 ರಂದು ಲೋಕಸಭೆಯಲ್ಲಿ ಮಂಡಿಸಿದೆ. ಇದು, ಮನರೇಗಾ ಅಡಿಯಲ್ಲಿ ನೋಂದಾಯಿತ ಕಾರ್ಮಿಕರ ಹೆಸರುಗಳನ್ನು ಬೃಹತ್‌ ಪ್ರಮಾಣದಲ್ಲಿ ಮತ್ತು ವೇಗವಾಗಿ ಅಳಿಸಿಹಾಕಲಾಗುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ಮನರೇಗಾ ಅನುಷ್ಠಾನದಲ್ಲಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕುರಿತು ತೀಕ್ಷ್ಣ ಚರ್ಚೆ ಹುಟ್ಟುಹಾಕಿದೆ.

ಸಚಿವಾಲಯ ಹೇಳುವಂತೆ ಗುಜರಾತ್‌ನಲ್ಲಿ 2019-20 ರಿಂದ 2024-25 ರವರೆಗೆ, 7.49 ಲಕ್ಷಕ್ಕೂ ಹೆಚ್ಚು ಉದ್ಯೋಗ ಕಾರ್ಡ್‌ಗಳನ್ನು ಅಳಿಸಲಾಗಿದೆ. ಮಾತ್ರವಲ್ಲದೆ, ಸುಮಾರು 22.68 ಲಕ್ಷ ಕಾರ್ಮಿಕರನ್ನು ಉದ್ಯೋಗ ಕಾರ್ಡ್‌ನಿಂದ ಹೊರಹಾಕಲಾಗಿದೆ. ಈ ಹೊರಹಾಕುವಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಜಿಗಿತ ಕಂಡುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರಂಭದಲ್ಲಿ, 2019-20ರಲ್ಲಿ 40,314 ಉದ್ಯೋಗ ಕಾರ್ಡ್‌ಗಳನ್ನು ಅಳಿಸಲಾಗಿತ್ತು. 2020-21ರಲ್ಲಿ 1,31,080ಕ್ಕೆ ಜಿಗಿಯಿತು. 2021-22ರಲ್ಲಿ 40,289 ಕ್ಕೆ ಸ್ವಲ್ಪ ಕುಸಿದರೂ, 2022-23ರಲ್ಲಿ 1,46,141ಕ್ಕೆ ಏರಿಕೆ ಕಂಡಿತು. ಆದರೆ, 2023-24ರಲ್ಲಿ  ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದ್ದು, ಆ ಒಂದೇ ವರ್ಷದಲ್ಲಿ  ಬರೋಬ್ಬರಿ 3,38,533 ಜಾಬ್ ಕಾರ್ಡ್‌ಗಳನ್ನು ಕಿತ್ತುಹಾಕಲಾಗಿದೆ. 2024-25ರ ಹಣಕಾಸು ವರ್ಷದ ಪರಿಪೂರ್ಣ ಮಾಹಿತಿ ಇನ್ನೂ ದೊರೆಯದಿದ್ದರೂ, 53,616 ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಂತೆಯೇ, 2019-20 ರಲ್ಲಿ, ಗುಜರಾತ್‌ನಲ್ಲಿ ಬರೋಬ್ಬರಿ 1,54,654 ಕಾರ್ಮಿಕರನ್ನು MGNREGA ನೋಂದಣಿಯಿಂದ ಹೊರಹಾಕಲಾಗಿತ್ತು. 2020-21ರಲ್ಲಿ ಮೂರು ಪಟ್ಟು, ಅಂದರೆ, 4,35,435 ಕಾರ್ಮಿಕರನ್ನು ಹೊರದೂಡಿತು. 2021-22 ರಲ್ಲಿ ಪ್ರವೃತ್ತಿ ಕೊಂಚ ಕಡಿಮೆಯಾಗಿ 1,43,195 ಮಂದಿಯನ್ನು ಹೊರಗಿಟ್ಟರೆ, 2022-23ರ ಹೊತ್ತಿಗೆ ಮತ್ತೆ ಬೃಹತ್ ಪ್ರಮಾಣದಲ್ಲಿ ಏರಿಕೆ ಕಂಡು, 5,59,478 ಕಾರ್ಮಿಕರನ್ನು ಕಿತ್ತುಹಾಕಲಾಯಿತು. 2023-24ರಲ್ಲಂತೂ ಈ ಸಂಖ್ಯೆಯು ಸುನಾಮಿ ಅಪ್ಪಳಿಸಿದಂತಾಗಿದ್ದು, ಆ ಒಂದೇ ವರ್ಷದಲ್ಲಿ 9,75,994 ಕಾರ್ಮಿಕರು ಜಾಬ್‌ ಕಾರ್ಡ್‌ ಕಳೆದುಕೊಂಡಿದ್ದಾರೆ.

ಇದರರ್ಥ 2019-20 ಮತ್ತು 2023-24ರ ನಡುವೆ ಕಾರ್ಮಿಕರನ್ನು ಹೊರಹಾಕುವ ಪ್ರಮಾಣವು ಆರು ಪಟ್ಟು ಹೆಚ್ಚಾಗಿದೆ. ಈ ಬೃಹತ್ ಹೊರಹಾಕುವಿಕೆಯು ಗುಜರಾತ್‌ನಲ್ಲಿ ಯೋಜನೆ ಅನುಷ್ಠಾನದ ಪಾರದರ್ಶಕತೆ, ಅರ್ಹತಾ ಪರಿಶೀಲನೆ ಹಾಗೂ ಗ್ರಾಮೀಣ ಜೀವನೋಪಾಯ ಬೆದರಿಕೆ ಮತ್ತು ಭವಿಷ್ಯದ ಕುರಿತು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಕೂಲಿ ಕಾರ್ಮಿಕರನ್ನು ಅತಂತ್ರ ಸ್ಥಿತಿಗೆ ದೂಡಿದೆ.

ಮೋದಿ ಅವರ ತವರು ರಾಜ್ಯದಲ್ಲಿ ಮನರೇಗಾ ಕಾರ್ಮಿಕರನ್ನು ಹೊರದೂಡುವ ಪ್ರವೃತ್ತಿ ಇನ್ನೂ ನಿಂತಿಲ್ಲ. 2025ರ ಅಕ್ಟೋಬರ್ 10ರಿಂದ ನವೆಂಬರ್ 14ರ ನಡುವೆಯೂ 5,433 ಕಾರ್ಮಿಕರ ಹೆಸರನ್ನು ಅಳಿಸಿಹಾಕಲಾಗಿದೆ. ಇದು, ಕಾರ್ಮಿಕರನ್ನು ಹೊರದಬ್ಬುವಿಕೆ ಇನ್ನೂ ಮುಗಿದಿಲ್ಲ ಎಂಬುದನ್ನು ಸಾಬೀತು ಮಾಡಿದೆ.

ಗುಜರಾತ್‌ನಲ್ಲಿ ಕಾರ್ಮಿಕರನ್ನು ಹೊರಹಾಕುವ ಕೃತ್ಯಗಳನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ. ಅದಕ್ಕಾಗಿ, ನಕಲಿ ಕಾರ್ಮಿಕರು ಅಥವಾ ನಕಲಿ ನೋಂದಣಿಗಳು, ವಲಸೆ ಹೋದವರು ಮತ್ತು ಸಾವನ್ನಪ್ಪಿದವರ ಹೆಸರನ್ನು ತೆಗೆಯುವುದು ಹಾಗೂ ಗ್ರಾಮ ಪಂಚಾಯತಿಗಳನ್ನು ನಗರ ಪಂಚಾಯತಿಗಳೆಂದು ಮರು ವರ್ಗೀಕರಿಸುವುದು – ಇಂತಹ ಕಾರಣಗಳನ್ನು ನೀಡುತ್ತಿದೆ.

ಆದರೆ, ಗ್ರಾಮೀಣ ಭಾಗದ ಜನರಿಗೆ ಮುಖ್ಯವಾಗಿ ಅನಕ್ಷರಸ್ಥ, ನಿರುದ್ಯೋಗಿ ಜನರಿಗೆ ಉದ್ಯೋಗ ಮೂಲವೂ, ಬದುಕಿನ ಆಧಾರವೂ ಆಗಿದ್ದ ಮನರೇಗಾವನ್ನು ಈಗ ಗ್ರಾಮೀಣ ಕಾರ್ಮಿಕರಿಗೆ ದೊರೆಯಂತೆ ಸರ್ಕಾರಗಳು ಮಾಡುತ್ತಿವೆ. ಕಾರ್ಮಿಕರನ್ನು ಸರ್ಕಾರಗಳು ದಮನಿಸುತ್ತಿವೆ.

ಈ ಲೇಖನ ಓದಿದ್ದೀರಾ?: ಥೈಲ್ಯಾಂಡ್-ಕಾಂಬೋಡಿಯಾ ಘರ್ಷಣೆ; ಶತಮಾನದ ವಿವಾದಕ್ಕೆ ನಾಗರಿಕರ ಬಲಿ

ಮನರೇಗಾ ಕಾರ್ಮಿಕರನ್ನು ಹೊರ ಹಾಕುವಿಕೆಯು ‘ಮನರೇಗಾ ಕಾಯ್ದೆ’ಯ ಶೆಡ್ಯೂಲ್ 2ರ 23ನೇ ವಿಭಾಗಕ್ಕೆ ವಿರುದ್ಧವಾಗಿದೆ. ಯಾಕೆಂದರೆ, ಈ ವಿಭಾಗವು ವಿವರಿಸುವಂತೆ ಮನರೇಗಾದಿಂದ ಕಾರ್ಮಿಕರನ್ನು ತೆಗೆದುಹಾಕುವಿಕೆಯು ನಿರ್ದಿಷ್ಟವಾಗಿ ಪರಿಪೂರ್ಣ ವಲಸೆ ಮತ್ತು ನಕಲಿ ದಾಖಲೆಗಳ ಕಾರಣಕ್ಕೆ ಆಗಿಬೇಕು. ಅದೂ, ದಾಖಲೆಗಳಿಂದ ತೆಗೆದುಹಾಕುವುದಕ್ಕೂ ಮುನ್ನ ಗ್ರಾಮ ಸಭೆಗಳಲ್ಲಿ ಚರ್ಚಿಸಿ, ನಿರ್ಣಯ ಅಂಗೀಕರಿಸಬೇಕು. ಆದರೆ, ಇದಾವುದೇ ಕ್ರಮಗಳನ್ನು ಕೈಗೊಳ್ಳದೆ ಸರ್ಕಾರವು ಏಕಪಕ್ಷೀಯವಾಗಿ ಕಾರ್ಮಿಕರನ್ನು ಹೊರದಬ್ಬುತ್ತಿದೆ ಎಂಬ ಗಂಭೀರ ಆರೋಪಗಳಿವೆ.

ಸರ್ಕಾರದ ಈ ಕೃತ್ಯವು ಗುಜರಾತ್‌ನಲ್ಲಿನ ಆದಿವಾಸಿ ಮತ್ತು ದಲಿತ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಸಮುದಾಯಗಳು ಅಗತ್ಯ ದಾಖಲೆಗಳನ್ನು ಹೊಂದಿಲ್ಲದೇ (ಸರ್ಕಾರಗಳು ಕೊಟ್ಟಿಲ್ಲ) ಇರುವುದರಿಂದ, ಅವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದೂ ಕಷ್ಟಸಾಧ್ಯವಾಗಿದೆ. ‘ಸರ್ಕಾರದ ಕ್ರಮವು ಗ್ರಾಮೀಣ ಬಡವರ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮನರೇಗಾದಿಂದ ಕಾರ್ಮಿಕರನ್ನು ಹೊರಹಾಕುವುದು ಕೇವಲ ಗುಜರಾತ್‌ಗೆ ಮಾತ್ರವೇ ಸೀಮಿತವೂ ಆಗಿಲ್ಲ. ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿಯೂ ಇದೇ ಮಾದರಿಯಲ್ಲಿ ಹೊರಹಾಕುವಿಕೆ ನಡೆದಿದೆ. ಭಾರತದಾದ್ಯಂತ 2019-20 ಮತ್ತು 2024-25ರ ನಡುವೆ, 4.57 ಕೋಟಿ ಜಾಬ್ ಕಾರ್ಡ್‌ಗಳನ್ನು ಅಳಿಸಿಹಾಕಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...