ಗುಜರಾತ್ | ಬೆದರಿಕೆ, ಒತ್ತಡ, ನಿಂದನೆ, ತಡರಾತ್ರಿ ಕರೆಗಳು; 250 ಬಿಎಲ್‌ಒಗಳ ಪ್ರತಿಭಟನೆ

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಸುವಲ್ಲಿ ಮೇಲಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ತಡರಾತ್ರಿಯಲ್ಲಿಯೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ, ಕೆಲಸದ ಒತ್ತಡವೂ ಇದೆ ಎಂದು ಆರೋಪಿಸಿ ಗುಜರಾತ್‌ನ ಅಹಮದಾಬಾದ್‌ ಪ್ರದೇಶದ 250 ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಶಾಲಾ ಕೆಲಸವನ್ನು ಸ್ಥಗಿತಗೊಳಿಸಲು ಪ್ರತಿಭಟನೆ ನಡೆಸಿದ್ದಾರೆ.

ಅಹಮದಾಬಾದ್‌ನ ಖೋಖ್ರಾದಲ್ಲಿರುವ ಡೇಟಾ ಅಪ್‌ಲೋಡ್ ಕೇಂದ್ರದ ಎದುರು ಬಿಎಲ್‌ಒಗಳು ಪ್ರತಿಭಟನೆ ನಡೆಸಿದ್ದಾರೆ. “ತಮಗೆ ಯಾವುದೇ ಸರಿಯಾದ ಮಾರ್ಗದರ್ಶನ ನೀಡಲಾಗಿಲ್ಲ. ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಎಸ್‌ಐಆರ್ ಗಡುವನ್ನು ಪೂರೈಸಲು ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ” ಎಂದು ಬಿಎಲ್‌ಒಗಳಾಗಿರುವ ಶಾಲಾ ಶಿಕ್ಷಕರು ಆರೋಪಿಸಿದರು.

ವಿಶೇಷವಾಗಿ ಮಹಿಳಾ ಬಿಎಲ್‌ಒಗಳು ತಮ್ಮ ಫೋನ್ ಸಂಖ್ಯೆಗಳು ಸಾರ್ವಜನಿಕವಾಗಿ ದೊರೆಯುತ್ತಿರುವುದರಿಂದ, ತಡರಾತ್ರಿಯಲ್ಲಿಯೂ ಕರೆಗಳು ಬರುತ್ತಿವೆ. ಕರೆ ಮಾಡುವವರು ಅಸಭ್ಯವಾಗಿ, ನಿಂದನಾತ್ಮಕವಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಲ್ಲದೆ, ಬೆಳಿಗ್ಗೆ 7 ಗಂಟೆಗೆ ಕೇಂದ್ರವನ್ನು ತಲುಪುವುದು, ಮಧ್ಯಾಹ್ನದ ವೇಳೆಗೆ ಕ್ಷೇತ್ರಕಾರ್ಯ ಮುಗಿಸುವುದು ಹಾಗೂ ಮಧ್ಯಾಹ್ನದ ಬಳಿಕ ಶಾಲಾ ಕೆಲಸಗಳಿಗೆ ಮರಳುವುದು – ನಿಗದಿತ ಸಮಯವಿಲ್ಲದ ದೀರ್ಘ ಕೆಲಸದ ಸಮಯದಿಂದಾಗಿ ಒತ್ತಡ ಹೆಚ್ಚಾಗಿದೆ ಎಂದು ಶಿಕ್ಷಕರು ಒತ್ತಿ ಹೇಳಿದರು. ಹಲವು ಸಂದರ್ಭಗಳಲ್ಲಿ ಸರ್ವರ್‌ ವ್ಯತ್ಯಯದಿಂದ ರಾತ್ರಿ ವೇಳೆಯೂ ಕೆಲಸ ಮಾಡಿ, ತಡವಾಗಿ ಮನೆಗೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ ಎಂದು ಶಿಕ್ಷಕರು ಆರೋಪಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ನಮ್ಮ ಹಿರಿಯ ಅಧಿಕಾರಿಗಳಿಂದ ಮಧ್ಯರಾತ್ರಿ ಅಥವಾ ಬೆಳಗಿನ ಜಾವ 1 ಗಂಟೆಯಾದರೂ ನಮಗೆ ಕರೆಗಳು ಬರುತ್ತಿವೆ. ಸರ್ವರ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಡೇಟಾ ಎಂಟ್ರಿ ಮಾಡಿ ಮ್ಯಾಪಿಂಗ್‌ಗಾಗಿ ಹೆಸರುಗಳನ್ನು ಅಪ್‌ಲೋಡ್ ಮಾಡುವಂತೆ ಕೇಳಲಾಗುತ್ತದೆ. ಕಳೆದ ಮೂರು ವಾರಗಳಿಂದ ಕುಟುಂಬದೊಂದಿಗೆ ಸಮಯ ಕಳೆಯಲು ನಮಗೆ ಸಾಧ್ಯವಾಗದಪರಿಸ್ಥಿತಿ ಎದುರಾಗಿದೆ” ಎಂದು ಪ್ರತಿಭಟನಾಕಾರರೊಬ್ಬರು ದೂರಿದ್ದಾರೆ.

“ಮ್ಯಾಪಿಂಗ್‌ ಮಾಡಲು 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ನಮಗೆ ಸಿಗುತ್ತಿಲ್ಲ. ಈ ಬಗ್ಗೆ ನಾವು ಅಧಿಕಾರಿಗಳಿಗೆ ತಿಳಿಸಿದಾಗ, ನಾನು ಅಮರೈವಾಡಿ ಕ್ಷೇತ್ರದ ಮತದಾರರನ್ನು ಮಾತ್ರ ಹುಡುಕಬೇಕು ಮತ್ತು ದೇಶದ ಉಳಿದ ಭಾಗಗಳದ್ದಲ್ಲವೆಂದು ಒರಟಾಗಿ ಅಧಿಕಾರಿಗಳು ಬೆದರಿಸಿದರು. ನಮಗೆ ಯಾವುದೇ ಪರಿಹಾರ ಅಥವಾ ಸಹಾಯವನ್ನು ನೀಡಲಾಗುತ್ತಿಲ್ಲ. ಆದರೆ, ಅವರು [ಚುನಾವಣಾ ಅಧಿಕಾರಿಗಳು] ಗುರಿಯನ್ನು ಸಾಧಿಸಲು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಮತ್ತೊಬ್ಬ ಶಿಕ್ಷಕಿ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಹಾರಾಡುವ ಮೋದಿಗೆ ಲಗಾಮು ಹಾಕಲಿದೆಯೇ ತಮಿಳುನಾಡು?

“ಮತದಾರರ ನಮೂನೆಗಳನ್ನು ಕೇವಲ ಗೈರುಹಾಜರಿ, ಸ್ಥಳಾಂತರ, ಸಾವು (ASD) ಎಂದು ಸಲ್ಲಿಸುವುದರಿಂದ ಹಿಡಿದು ಪ್ರತಿ ಮತದಾರರ ಮ್ಯಾಪಿಂಗ್‌ವರೆಗೆ, ಬಿಎಲ್‌ಒಗಳಿಗೆ ಅನಗತ್ಯವಾಗಿ ಬೆದರಿಕೆ ಹಾಕಲಾಗುತ್ತಿದೆ. ಕೆಲಸವನ್ನು ಪೂರ್ಣಗೊಳಿಸಲು ಒತ್ತಡ ಹೇರಲಾಗುತ್ತಿದೆ. ಒಂದೆಡೆ ಅಧಿಕಾರಿಗಳಿಂದ, ಮತ್ತೊಂದೆಡೆ ನಮಗೆ ಅನಾಮಧೇಯ ನಿಂದನೀಯ ಕರೆಗಳು ಬರುತ್ತಿವೆ. ಸರ್ಕಾರದ ಕಡೆಯಿಂದ ಆಗಿರುವ ಪ್ರಮುಖ ಲೋಪವೆಂದರೆ ಅವರು ಜನರಲ್ಲಿ ಜಾಗೃತಿ ಮೂಡಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಅಧಿಕಾರಿಗಳ ಪ್ರಕಾರ, ಪ್ರಸ್ತುತ ಗುಜರಾತ್‌ನಾದ್ಯಂತ 50,963 ಬಿಎಲ್‌ಒಗಳನ್ನು ನಿಯೋಜಿಸಲಾಗಿದೆ. ನವೀಕರಿಸಿದ ಮತದಾರರ ಪಟ್ಟಿಯು 5.08 ಕೋಟಿ ನೋಂದಾಯಿತ ಮತದಾರರನ್ನು ಒಳಗೊಂಡಿದೆ. ಎಸ್‌ಐಆರ್‌ನ ಎಣಿಕೆ ಪ್ರಕ್ರಿಯೆಯು ಡಿಸೆಂಬರ್ 4ರಂದು ಪ್ರಾರಂಭವಾಗುತ್ತದೆ.

ದೇಶಾದ್ಯಂತ, ಪಶ್ಚಿಮ ಬಂಗಾಳ ಸೇರಿದಂತೆ ಇತ್ತೀಚಿನ ವಾರಗಳಲ್ಲಿ ಹಲವಾರು ಬಿಎಲ್‌ಒಗಳ ಆತ್ಮಹತ್ಯೆಗಳು ವರದಿಯಾಗಿವೆ. ಅಧಿಕಾರಿಗಳು ಈ ಘಟನೆಗಳನ್ನು ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಒತ್ತಡವೇ ಕಾರಣವೆಂದು ಹೇಳಿದ್ದಾರೆ. ಈ ಹಲವು ಪ್ರಕರಣಗಳಲ್ಲಿ ತನಿಖೆಗಳು ನಡೆಯುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...