ಕಳೆದ 10 ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರಮುಖ ಬಾಂಬ್ ಸ್ಫೋಟ ಪ್ರಕರಣಗಳು
- ಗುರುದಾಸ್ ಪುರ (ಜುಲೈ 27, 2015 – ಪಂಜಾಬ್):
ಪಂಜಾಬ್‌ನ ಗುರುದಾಸ್ ಪುರದ ದಿನಾನಗರದಲ್ಲಿ ಸೇನೆಯ ವೇಷ ಧರಿಸಿದ ಮೂವರು ಉಗ್ರರು ಬಸ್ ಮೇಲೆ ಗುಂಡಿನ ದಾಳಿ ನಡೆಸಿ, ಪೊಲೀಸ್ ಠಾಣೆಯನ್ನು ಆಕ್ರಮಿಸಿದರು. 12 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಾಗರಿಕರು ಸೇರಿ 10 ಮಂದಿ ಸಾವು. - ಪಠಾಣ್‌ಕೋಟ್ ವಾಯುನೆಲೆ (ಜನವರಿ 2,2016 – ಪಂಜಾಬ್):
ಪಂಜಾಬ್‌ನ ಪಠಾಣ್‌ಕೋಟ್ ವಾಯುನಲೆಗೆ ನುಗ್ಗಿದ 6 ಉಗ್ರರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ 7 ಸೈನಿಕರು, 6 ಉಗ್ರರ ಸಾವು. - ಉರಿ ಸೇನಾ ನೆಲೆ (ಸೆಪ್ಟೆಂಬರ್ 18, 2016 – ಜಮ್ಮು ಮತ್ತು ಕಾಶ್ಮೀರ):
ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರು ಉಗ್ರರ ದಾಳಿ. ಸೈನಿಕರ ಟೆಂಟ್‌ಗಳಿಗೆ ಬೆಂಕಿ ಹಚ್ಚಿ ಭಾರೀ ಹಾನಿ ಉಂಟುಮಾಡಲಾಯಿತು. ಈ ದಾಳಿಯಲ್ಲಿ 19 ಸೈನಿಕರು ಹಾಗೂ ನಾಲ್ವರು ಉಗ್ರರ ಸಾವು. - ಅಮರನಾಥ್ ಯಾತ್ರೆ (ಜುಲೈ 10, 2017 – ಜಮ್ಮು ಮತ್ತು ಕಾಶ್ಮೀರ):
ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ್ ಯಾತ್ರೆಯಿಂದ ಮರಳುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದರು. ಈ ಘಟನೆಯಲ್ಲಿ 8 ಯಾತ್ರಿಕರು ಮೃತಪಟ್ಟು, ಅನೇಕರು ಗಾಯಗೊಂಡರು - ಸುಂಜ್ವಾನ್ ಸೇನಾ ಶಿಬಿರ (ಫೆಬ್ರವರಿ 10, 2018 – ಜಮ್ಮು):
ಜಮ್ಮುವಿನ ಸುಂಜ್ವಾನ್ ಸೇನಾ ಶಿಬಿರದ ವಸತಿ ಪ್ರದೇಶದಲ್ಲಿ ಉಗ್ರರು ಬೆಳಗಿನ ಜಾವ ದಾಳಿ ನಡೆಸಿದ ಪರಿಣಾಮ 6 ಸೈನಿಕರು, ಓರ್ವ ನಾಗರಿಕ ಸಾವನ್ನಪ್ಪಿದರು. 12 ಕ್ಕೂ ಹೆಚ್ಚು ಮಂದಿ ಗಾಯಗೊಂಡರು. - ಪುಲ್ವಾಮಾ (ಫೆಬ್ರವರಿ 14, 2019 – ಜಮ್ಮು & ಕಾಶ್ಮೀರ):
ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಯಿತು. ಸ್ಫೋಟಕಗಳಿಂದ ತುಂಬಿದ ಕಾರು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. - ಸುಕ್ಮಾ (ಮಾರ್ಚ್ 21, 2020 – ಛತ್ತೀಸ್‌ಗಢ):
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಯಲ್ಲಿ 17 ಸೈನಿಕರ ಸಾವು. - ಬಿಜಾಪುರ (ಏಪ್ರಿಲ್ 3, 2021 – ಛತ್ತೀಸ್‌ಗಢ):
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಾವೋವಾದಿಗಳು ಸೇನಾಪಡೆಗಳ ಮೇಲೆ ದಾಳಿ ನಡೆಸಿದ ಪರಿಣಾಮ 22 ಸೈನಿಕರು ಮೃತಪಟ್ಟು, 31 ಮಂದಿ ಗಾಯಗೊಂಡರು. - ಪೂಂಚ್ (ಏಪ್ರಿಲ್ 20, 2023 – ಜಮ್ಮು ಮತ್ತು ಕಾಶ್ಮೀರ):
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನೆಯ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 5 ಸೈನಿಕರು ಮೃತಪಟ್ಟರು.




