‘ಮದುವೆಯಾಗಿ ಬೇರೆಡೆ ಹೋಗಬಹುದು’; ಯುವತಿಗೆ ಸರ್ಕಾರಿ ಕೆಲಸ ನಿರಾಕರಿಸಿದ ಅಧಿಕಾರಿಗೆ ಹೈಕೋರ್ಟ್ ತಪರಾಕಿ

Date:

‘ಅವಿವಾಹಿತ ಯುವತಿಯು ಮದುವೆಯಾಗಿ ಬೇರೆ ಊರಿಗೆ ಹೋಗಬಹುದೆಂಬ ಕಾರಣ ನೀಡಿ, ಆಕೆಗೆ ಸರ್ಕಾರಿ ಉದ್ಯೋಗ ನೀಡಲು ನಿರಾಕರಿಸಿದ್ದ ಕಂದಾಯ ಇಲಾಖೆಯ ಮಾಮ್ಲತ್ದಾರ್ (ಅಧಿಕಾರಿ)ಯನ್ನು ಗುಜರಾತ್ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಯುವತಿಯನ್ನು ಉದ್ಯೋಗಕ್ಕೆ ಕಡೆಗಣಿಸಿ ಮಾಡಲಾಗಿದ್ದ ನೇಮಕಾತಿಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಗುಜರಾತ್‌ನ ದಾಹೋದ್ ಜಿಲ್ಲೆಯ ಝಾಲೋದ್ ತಾಲೂಕಿನಲ್ಲಿ ಅಡ್ಮಿನಿಸ್ಟ್ರೇಟರ್-ಕಮ್-ಕುಕ್ (ಆಡಳಿತಾಧಿಕಾರಿ ಮತ್ತು ಅಡುಗೆಯವರು) ಹುದ್ದೆಗೆ ಮೆರಿಟ್ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗೆ ಮೆರಿಟ್‌ನಲ್ಲಿ 1ನೇ ಸ್ಥಾನ ಪಡೆದಿದ್ದ ಯುವತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಉದ್ಯೋಗ ನಿರಾಕರಿಸಿದ್ದ ಮಾಮ್ಲತ್ದಾರ್, 4ನೇ ಸ್ಥಾನ ಪಡೆದಿದ್ದ ಯುವಕನೊಬ್ಬನಿಗೆ ಉದ್ಯೋಗ ನೀಡಿದ್ದರು.

ಉದ್ಯೋಗದಿಂದ ವಂಚಿತರಾದ ಯುವತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. “ತಾನು ಪದವಿಯಲ್ಲಿ ಹೆಚ್ಚಿನ ಅಂಕಗಳನ್ನು ಹೊಂದಿದ್ದು, ನಾನು 1ನೇ ಸ್ಥಾನ ಪಡೆದಿದ್ದೇನೆ. ಆದರೆ, ಮೆರಿಟ್ ಪಟ್ಟಿಯಲ್ಲಿ ನನ್ನನ್ನು 6ನೇ ಸ್ಥಾನದಲ್ಲಿ ಇರಿಸಲಾಗಿದೆ. ಜೊತೆಗೆ, ಕೇವಲ ‘ಪಾಸು’ ಎಂದಷ್ಟೇ ನಮೂದಿಸಲಾಗಿದೆ. ಆ ಮೂಲಕ, ನನಗೆ ಅನ್ಯಾಯ ಮಾಡಲಾಗಿದೆ” ಎಂದು ಆರೋಪಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಮೌಲಿಕ್ ಜೆ. ಶೆಲಾಟ್ ಅವರ ಪೀಠ, “ಈ ಆಯ್ಕೆ ಪ್ರಕ್ರಿಯೆಯು ‘ಸಂಪೂರ್ಣ ಪಕ್ಷಪಾತ’ದಿಂದ ಕೂಡಿದೆ. ಸಂವಿಧಾನದ 14 ಮತ್ತು 16ನೇ ವಿಧಿಗಳ ಉಲ್ಲಂಘನೆಯಾಗಿದೆ. ಮಾತ್ರವಲ್ಲ, ಉತ್ತಮ ಅಂಕಗಳನ್ನು ಪಡೆದಿದ್ದ ಅಭ್ಯರ್ಥಿಗಳನ್ನು ಬಿಟ್ಟು, ಕಡಿಮೆ ಅಂಕ ಪಡೆದವರಿಗೆ ಕೆಲಸ ನೀಡಲು ಅಧಿಕಾರಿ ನೀಡಿದ್ದ ಕಾರಣಗಳು ಅತ್ಯಂತ ಅಸಂಬದ್ಧವಾಗಿವೆ” ಎಂದು ಹೇಳಿದೆ. ಅಧಿಕಾರಿ ಮಾಡಿದ್ದ ನೇಮಕಾತಿಯನ್ನು ರದ್ದುಗೊಳಿಸಿದೆ.

“ಯುವತಿಯನ್ನು ನೇಮಕ ಮಾಡದೇ ಇರುವುದಕ್ಕೆ ಅಧಿಕಾರಿ ನೀಡಿರುವ ‘ಆಕೆ ಮುಂದಿನ ದಿನಗಳಲ್ಲಿ ಮದುವೆಯಾಗಿ ಬೇರೆ ಹಳ್ಳಿಗೆ ಹೋಗಬಹುದು’ ಎಂಬ ಕಾರಣವನ್ನು ಸಮರ್ಥಿಸಲು ಯಾವುದೇ ಆಧಾರಗಳಿಲ್ಲ. ಇಂತಹ ಕಾರಣವು ಕೇವಲ ಸ್ವೇಚ್ಛಾಚಾರದ, ಕಲ್ಪಿತ ಮತ್ತು ಕ್ಷುಲ್ಲಕವಾಗಿದೆ. ಮಾತ್ರವಲ್ಲ, ಇದು ಭಾರತೀಯ ಸಂವಿಧಾನದ 14 ಮತ್ತು 16ನೇ ವಿಧಿಗಳ ನೇರ ಉಲ್ಲಂಘನೆಯೂ ಆಗಿದೆ” ಎಂದು ನ್ಯಾಯಾಲಯ ಹೇಳಿದೆ.

ಈ ಲೇಖನ ಓದಿದ್ದೀರಾ?: ಅಫ್ಘಾನ್-ಪಾಕ್ ಸಂಘರ್ಷ | ತಾನೇ ಹುಟ್ಟುಹಾಕಿದ ತಾಲಿಬಾನ್‌ ಜೊತೆ ಪಾಕ್ ಘರ್ಷಣೆ ಏಕೆ?

ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರಿಗೂ ಸಮಾನರು ಎಂದು ಹೇಳುತ್ತದೆ, 16ನೇ ವಿಧಿಯು ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ.

“ಸದ್ಯಕ್ಕೆ ಅರ್ಜಿದಾರರ ನೇಮಕಾತಿಗೆ ಯಾವುದೇ ನೇರ ಆದೇಶ ನೀಡುವುದಿಲ್ಲ. ಬದಲಿಗೆ, ಅರ್ಜಿದಾರರ ಪದವಿ ಪ್ರಮಾಣಪತ್ರವನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ಮರುಪರಿಶೀಲನೆ ನಡೆಸಬೇಕು. ಒಂದು ವೇಳೆ, ಅರ್ಜಿದಾರರ ಪ್ರಮಾಣಪತ್ರವು ಅಸಲಿ ಎಂದು ಕಂಡುಬಂದರೆ, ಅವರು 68% ರಷ್ಟು ಅಂಕ ಪಡೆದಿದ್ದರೆ, ಅರ್ಜಿದಾರರು ಮೆರಿಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತಾರೆ. ಆಗ ಅವರನ್ನೇ ಅಡ್ಮಿನಿಸ್ಟ್ರೇಟರ್-ಕಮ್-ಕುಕ್ ಹುದ್ದೆಗೆ ನೇಮಿಸಬೇಕು. ಪ್ರಮಾಣಪತ್ರವು ನಕಲಿ ಎಂದು ಸಾಬೀತಾದರೆ, ಅರ್ಜಿದಾರರಿಗೆ ಕೆಲಸ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಮೆರಿಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ಪರಿಗಣಿಸಬೇಕು” ಎಂದು ಕೋರ್ಟ್‌ ಆದೇಶಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...