ಬ್ಯಾಂಕ್ ಚೆಕ್ ಪ್ರತಿಯನ್ನು ಬರೆಯುವಾಗ ಕಾಗುಣಿತ ತಪ್ಪಾಗಿ ಬರೆದ ಕಾರಣಕ್ಕೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ರೊನ್ಹತ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ. ಆದರೆ ಈ ಅಮಾನತು ಆದೇಶ ಪ್ರತಿಯಲ್ಲೂ ಹಲವು ತಪ್ಪು ಅಕ್ಕರಗಳಿದ್ದು ಸದ್ಯ ಈ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿಕ್ಷಕರೊಬ್ಬರು 7,616 ರೂ.ಗಳ ಚೆಕ್ ಬರೆಯುವಾಗ ಇಂಗ್ಲೀಷ್‌ನಲ್ಲಿ ತಪ್ಪಾಗಿ ಬರೆದಿದ್ದಾರೆ. seven thousand six hundred sixteen ಎಂದು ಬರೆಯುವ ಬದಲಾಗಿ Saven Thursday Six Harendra Sixty ಎಂದು ಬರೆದಿದ್ದಾರೆ. ಸೆಪ್ಟೆಂಬರ್ 25ರ ಈ ತಪ್ಪು ಅಕ್ಷರಗಳಿಂದ ಕೂಡಿದ ಚೆಕ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಇದನ್ನು ಓದಿದ್ದೀರಾ? ಮಾಯಾವತಿ ವಿಚಿತ್ರ ನಿರ್ಧಾರಗಳು: ಆಕಾಶ್ ಪದಚ್ಯುತಿ, ಅಧೋಗತಿಯತ್ತ ಬಿಎಸ್‌ಪಿ
ಅದಾದ ಬಳಿಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದ್ದು ಅಕ್ಟೋಬರ್ 4ರಂದು ಅಮಾನತು ಆದೇಶ ಪ್ರತಿಯನ್ನು ನೀಡಲಾಗಿದೆ. ಅಮಾನತು ಆದೇಶವನ್ನು ಹೊರಡಿಸಿದ ಶಾಲಾ ಶಿಕ್ಷಣ (ಪ್ರಾಥಮಿಕ) ಉಪನಿರ್ದೇಶಕ ರಾಜೀವ್ ಠಾಕೂರ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದು, “ಕಾಗುಣಿತ ದೋಷಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ, ಎಚ್ಚರಿಕೆ ನೀಡಲಾಗುತ್ತದೆ. ಆದರೆ ಈ ಬಾರಿ ಪದಗಳನ್ನೇ ಬದಲಾಯಿಸಿರುವುದು ಕಂಡುಬಂದಿದೆ. ಸಾವಿರ(thousand) ಎಂದು ಬರೆಯುವ ಬದಲು ಗುರುವಾರ(Thursday) ಎಂದು ಬರೆಯಲಾಗಿದೆ. ನೂರು(hundred) ಎಂದು ಬರೆಯುವ ಬದಲು ಹರೇಂದ್ರ(Harendra) ಎಂದು ಬರೆಯಲಾಗಿದೆ. ಆದ್ದರಿಂದಾಗಿ ಅಮಾನತು ಕ್ರಮವನ್ನು ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.
When the Department of School “Educaiton” suspends someone for spelling errors… 🙌🏼 pic.twitter.com/bIRhFuRzu4
— The Modern Himachal (@I_love_himachal) October 7, 2025
ಆದರೆ ವಿಚಿತ್ರವೆಂದರೆ ಈ ಅಮಾನತು ಪ್ರತಿಯಲ್ಲಿಯೇ ಹಲವು ಕಾಗುಣಿತ ತಪ್ಪುಗಳು ಕಂಡುಬಂದಿದ್ದು, ಟ್ರೋಲಿಗರಿಗೆ ವಿಷಯವಸ್ತುವಾಗಿದೆ. Principal(ಪ್ರಾಂಶುಪಾಲರು) ಎಂದು ಬರೆಯುವ ಬದಲಾಗಿ princpal ಎಂದು ತಪ್ಪಾಗಿ ಬರೆಯಲಾಗಿದೆ. Sirmaur(ಸಿರ್ಮೌರ್) ಎಂದು ಬರೆಯುವ ಬದಲಾಗಿ Sirmour ಎಂದು ಉಲ್ಲೇಖಿಸಲಾಗಿದೆ. spellings(ಅಕ್ಷರಗಳು) ಬರೆಯಬೇಕಾದಲ್ಲಿ spelling ಎಂದು ಬರೆಯಲಾಗಿದೆ. education(ಶಿಕ್ಷಣ) ಬರೆಯುವಲ್ಲಿ educatioin ಎಂದು ತಪ್ಪು ಅಕ್ಷರವಿದೆ.
शिक्षक को गलत स्पेलिंग पर सस्पेंड करने वाले खुद गलत लिखने पर घिरे
— शिक्षा सुधार रोजगार 24 (@neerajvibe) October 10, 2025
Thousand को Thursday लिखने पर टीचर सस्पेंड, लेटर बनाने वाले डिप्टी डायरेक्टर ने पूरी कर दी बाकी कसर…….
हिमाचल प्रदेश के सिरमौर जिले के गवर्नमेंट सीनियर सेकेंडरी स्कूल, रोनहाट के एक ड्राइंग टीचर को चेक में गलत… pic.twitter.com/rXoSvB7LFe
ಈ ಬಗ್ಗೆಯೂ ಮಾಧ್ಯಮಕ್ಕೆ ಅಧಿಕಾರಿ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ. “ಸಮಯ ಕಡಿಮೆಯಿತ್ತು, ನಾವು ಆತುರದಿಂದ ನೋಟಿಸ್ ನೀಡಿದ್ದೇವೆ. ತಪ್ಪುಗಳು ಇರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇವು ಕಾಗುಣಿತ ಮತ್ತು ಟೈಪಿಂಗ್ ದೋಷಗಳಾಗಿವೆ. ಈ ತಪ್ಪುಗಳು ಹೇಗಾಯಿತು ಎಂಬುದನ್ನು ನಾನು ಪರಿಶೀಲಿಸುತ್ತೇನೆ” ಎಂದು ಹೇಳಿದ್ದಾರೆ.
ಈ ವರ್ಷದ ಸೆಪ್ಟೆಂಬರ್ 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನದಂದು ಹಿಮಾಚಲ ಪ್ರದೇಶವನ್ನು ಸಂಪೂರ್ಣ ಸಾಕ್ಷರತಾ ರಾಜ್ಯವೆಂದು ಘೋಷಿಸಲಾಗಿದೆ. ಆದರೆ ಈ ರಾಜ್ಯದ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳೇ ತಪ್ಪಾಗಿ ಬರೆಯುವುದನ್ನು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ.





