ರಾಜಸ್ಥಾನದ ಭಿವಾಡಿ ಪ್ರದೇಶದಲ್ಲಿ ಮಾರ್ಚ್ 2 ರ ಮುಂಜಾನೆ ಆಮಿರ್ (28) ಎಂಬ ಮುಸ್ಲಿಂ ಚಾಲಕನನ್ನು ಹಿಂದುತ್ವ ಕೋಮುವಾದಿ ಗೂಂಡಾಗಳು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ರಮವಾಗಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಶಂಕಿಸಿ ಬಜರಂಗದಳದ ಪುಂಡರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿದೆ.
ಆಮಿರ್ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಹಸುಗಳ ವ್ಯವಹಾರದಲ್ಲಿ ಅವನಿಗೆ ಯಾವುದೇ ಪಾತ್ರವಿರಲಿಲ್ಲ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಮೃತರ ಚಿಕ್ಕಪ್ಪ ಜುಬೈರ್ ಮಾತನಾಡಿ, ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಆಮಿರ್ ಅವರ ಟ್ರಕ್‌ಗೆ ತಮ್ಮ ಕಾರನ್ನು ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಟ್ರಕ್ ನಿಂತ ತಕ್ಷಣ, ಯಾವುದೇ ಮಾತುಕತೆ ನಡೆಸದೆ ಅವರು ಅವರ ತಲೆಗೆ ಗುಂಡು ಹಾರಿಸಿದರು ಮತ್ತು ಇನ್ನೊಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.
“ಮಾರ್ಚ್ 2 ರ ಬೆಳಿಗ್ಗೆ ಆಮಿರ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮೊದಲು ನನಗೆ ಮಾಹಿತಿ ಬಂದಿತು. ಆದರೆ, ಅಮಿರ್ ಬದುಕುತ್ತಿದ್ದಾರೆಂದು ಪದೇ ಪದೇ ತಪ್ಪು ಮಾಹಿತಿ ನೀಡಲಾಗಿತ್ತು., ಒಂದು ಗಂಟೆಯ ನಂತರ, ಇಬ್ಬರು ಯುವಕರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಸ್ಥಳೀಯರೊಬ್ಬರು ನನಗೆ ತಿಳಿಸಿದರು” ಎಂದು ಜುಬೈರ್ ಹೇಳಿದ್ದಾರೆ.
“ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಭರವಸೆ ನೀಡಿದ್ದಾರೆ. ಅದರೆ, ಪೊಲೀಸ್ ಅಧಿಕಾರಿಗಳು ತಮ್ಮ ನಿರೂಪಣೆಯನ್ನು ಎರಡು ಬಾರಿ ಬದಲಾಯಿಸಿದ್ದಾರೆ. ಮೊದಲು, ಆಮಿರ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದಿದ್ದರು. ನಂತರ, ಈ ವಿಷಯ ತನಿಖೆಯಲ್ಲಿದೆ ಎಂದರು” ಎಂದು ಜುಬೈರ್ ಆರೋಪಿಸಿದ್ದಾರೆ.
“ಆಮಿರ್ ದನಗಳಲ್ಲ, ಹಣ್ಣು- ತರಕಾರಿ ತುಂಅಬಿದ ಟ್ರಕ್ ಓಡಿಸುತ್ತಿದ್ದ. ಅವನಿಗೆ ಹಸು ಕಳ್ಳಸಾಗಣೆಯಲ್ಲಿ ಯಾವುದೇ ಸಂಬಂಧವಿರಲಿಲ್ಲ” ಎಂದು ಜುಬೈರ್ ಹೇಳಿದ್ದಾರೆ.
ಆದರೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) ( ಕೊಲೆಗೆ ಶಿಕ್ಷೆ), 352 (ಉದ್ದೇಶಪೂರ್ವಕವಾಗಿ ಅಪರಾಧ ಮಾಡುವುದು ) ಮತ್ತು 125 ( ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




