ಬೆಂಗಳೂರು ಸೇರಿದಂತೆ ರಾಜಧಾನಿಗಳಲ್ಲಿ ಕಚೇರಿಗೆ ಪ್ರಯಾಣಿಸಲು ಜನರು ವ್ಯಯಿಸುವ ಸಮಯವೆಷ್ಟು; ವರದಿ ಹೇಳುವುದೇನು?

Date:

ಬೆಂಗಳೂರು, ಹೈದರಾಬಾದ್ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ನಲ್ಲಿರುವ ಜಿಸಿಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವೃತ್ತಿಪರರು ಕಚೇರಿಗೆ ಒಂದು ಮಾರ್ಗವಾಗಿ ಪ್ರಯಾಣಿಸಲೆಂದೇ 45 ರಿಂದ 55 ನಿಮಿಷಗಳವರೆಗೆ ಕಳೆಯುತ್ತಾರೆ ಎಂದು ಹೊಸ ವರದಿಯೊಂದು ತಿಳಿಸಿದೆ. ಇದರರ್ಥ ಒಬ್ಬ ಉದ್ಯೋಗಿ ತನ್ನ ಜೀವಿತಾವಧಿಯ ಸುಮಾರು ಶೇಕಡ 5ರಷ್ಟು ಸಮಯವನ್ನು ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಕಳೆಯುತ್ತಾರೆ.

2025ರ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಪ್ರಯಾಣದ ಬಗ್ಗೆ ಸಂಶೋಧನೆ ಮಾಡಿರುವ MoveInSync ವರದಿಯ ಪ್ರಕಾರ, ಬೆಂಗಳೂರಿನಲ್ಲಿ, ವೃತ್ತಿಪರರು ಸುಮಾರು 50 ನಿಮಿಷಗಳಲ್ಲಿ 15 ಕಿ.ಮೀ ಪ್ರಯಾಣಿಸುತ್ತಾರೆ. ಇತರೆ ಉದ್ಯೋಗಿಗಳು ಅಷ್ಟೇ ಪ್ರಯಾಣ ಮಾಡಲು 54 ನಿಮಿಷಗಳವರೆಗೆ ಕಳೆಯುತ್ತಾರೆ. ಐಟಿ ವೃತ್ತಿಪರರು ಸ್ವಲ್ಪ ವೇಗವಾಗಿ (ಮೆಟ್ರೋ ಮೊದಲಾದವುಗಳ ಬಳಕೆ) 46 ನಿಮಿಷಗಳು ಪ್ರಯಾಣಕ್ಕಾಗಿ ಕಳೆಯುತ್ತಾರೆ.

ಇದನ್ನು ಓದಿದ್ದೀರಾ? ಬೆಂಗಳೂರು ಬಂದ್ | ರಸ್ತೆಗಿಳಿಯದ ಖಾಸಗಿ ವಾಹನ; ಪ್ರಯಾಣಿಕರ ಪರದಾಟ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೈದರಾಬಾದ್‌ನಲ್ಲಿ ವೃತ್ತಿಪರ ಕ್ಷೇತ್ರದ ಉದ್ಯೋಗಿಗಳು 45 ನಿಮಿಷಗಳಲ್ಲಿ ಸುಮಾರು 16 ಕಿ.ಮೀ ಪ್ರಯಾಣಿಸುತ್ತಾರೆ. ಆದರೆ ಇತರೆ ಉದ್ಯೋಗಿಗಳಿಗೆ ಅಷ್ಟೇ ದೂರ ಪ್ರಯಾಣಿಸಲು 54 ನಿಮಿಷಗಳು ಬೇಕಾಗುತ್ತದೆ.

ದೆಹಲಿ, ಗುರುರಾಮ್, ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿ 22 ಕಿ.ಮೀ. ಪ್ರಯಾಣಕ್ಕೆ 55 ನಿಮಿಷಗಳವರೆಗೆ ಬೇಕಾಗುತ್ತದೆ. ಅದರಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರು ಹೆಚ್ಚು ಕಾಲ ಪ್ರಯಾಣಕ್ಕಾಗಿ ಮುಡಿಪಾಗಿ ಇಡಬೇಕಾಗುತ್ತದೆ. ಆರೋಗ್ಯ ಕ್ಷೇತ್ರದವರಿಗೆ ತಮ್ಮ ಕಚೇರಿಯನ್ನು ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.

ಬೆಂಗಳೂರು ಮತ್ತು ಹೈದರಾಬಾದ್ ವೃತ್ತಿಪರರು ಸಾಮಾನ್ಯವಾಗಿ ವಾರದಲ್ಲಿ ಎರಡರಿಂದ ಮೂರು ದಿನಗಳು ಪ್ರಯಾಣಿಸುತ್ತಾರೆ. ಆದರೆ ಎನ್‌ಸಿಆರ್‌ನಲ್ಲಿ ಉದ್ಯೋಗಿಗಳು ಆಗಾಗ್ಗೆ ಪ್ರಯಾಣಿಸುತ್ತಾರೆ. ಬುಧವಾರ ಮೂರು ನಗರಗಳಲ್ಲಿ ಅತ್ಯಧಿಕವಾಗಿ ಕಚೇರಿಗೆ ಪ್ರಯಾಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸೋಮವಾರ ಮತ್ತು ಶುಕ್ರವಾರಗಳು ಕಡಿಮೆ ಜನಸಂದಣಿ ಇರುತ್ತದೆ ಎಂದು ವರದಿ ಹೇಳುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...