ಭಾರತದ ಮುಸ್ಲಿಮರು ಎಷ್ಟು ಸಂಪತ್ತು ಹೊಂದಿದ್ದಾರೆ? ಇಲ್ಲಿದೆ ಅಧ್ಯಯನದ ವರದಿ

Date:

ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಂತೆ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ತಾಯಿ, ತಂಗಿಯ ಬಂಗಾರವನ್ನು ಹಾಗೂ ನಿಮ್ಮ ಮಂಗಳಸೂತ್ರವನ್ನು ಬಿಡದೆ ಮುಸ್ಲಿಂ ಸಮುದಾಯದವರಿಗೆ ಹಂಚುತ್ತಾರೆ ಎಂದು ಹೇಳಿದ್ದರು.

ಪ್ರಧಾನಿಯ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ಸುಳ್ಳು ಹಾಗೂ ದ್ವೇಷ ಭಾಷಣದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿತ್ತು.

ದೇಶದ ಹಲವು ಧಾರ್ಮಿಕ ಸಮುದಾಯಗಳಲ್ಲಿ ಬಂಗಾರವು ಒಳಗೊಂಡು ಸಂಪತ್ತು, ಆಸ್ತಿ ಎಷ್ಟು ಹೊಂದಿದ್ದಾರೆ ಎಂಬ ಬಗ್ಗೆ ಇತ್ತೀಚಿನ ಯಾವುದೇ ವಿವರಗಳಿಲ್ಲ ಅಥವಾ ನಿರ್ದಿಷ್ಟ ಅಂಕಿಅಂಶಗಳು ಲಭ್ಯವಿಲ್ಲ. ಆದರೆ ಐಸಿಎಸ್‌ಎಸ್‌ಆರ್‌ ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಯಾದ ಇಂಡಿಯನ್‌ ಇನ್ಸ್‌ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ಅವರು 2020ರಲ್ಲಿ ಪ್ರಕಟಿಸಿದ ‘ಭಾರತದ ಸಂಪತ್ತಿನ ಮಾಲಿಕತ್ವದಲ್ಲಿನ ಅಂತರ್‌ ಸಮುದಾಯ ಅಸಮಾನತೆಯ ಅಧ್ಯಯನ ವರದಿ’ ಯಲ್ಲಿ ಕೆಲವು ಸಂಬಂಧಿತ ಅಂಕಿಅಂಶಗಳು ಲಭ್ಯವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವರದಿಯನ್ನು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ(ಎನ್‌ಎಸ್‌ಎಸ್‌ಒ) ಹಾಗೂ ಭಾರತದ ಆರ್ಥಿಕ ಜನಗಣತಿ ನಡೆಸಿದ ಅಖಿಲ ಭಾರತ ಸಾಲ ಹಾಗೂ ಹೂಡಿಕೆ ಸಮೀಕ್ಷೆಯಿಂದ ಬಳಸಿಕೊಂಡ ಅಂಕಿಅಂಶದಿಂದ ಪತ್ತೆ ಹಚ್ಚಲಾಗಿದೆ. ಈ ಅಂಕಿಅಂಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯಗಳು ಅತಿ ಕಡಿಮೆ ಮಾಲೀಕತ್ವದ ಸಂಪತ್ತನ್ನು ಹೊಂದಿದೆ ಎಂದು ತಿಳಿಸಿದೆ.

ಭಾರತದಲ್ಲಿ ಯಾವ ಸಮುದಾಯ ಎಷ್ಟು ಸಂಪತ್ತು ಹೊಂದಿದೆ?

ಈ ವರದಿಯ ಪ್ರಕಾರ ಹಿಂದೂ ಸಮುದಾಯದ ಪ್ರಬಲ ಜಾತಿಗಳು ಒಟ್ಟು ದೇಶದ ಸಂಪತ್ತಿನಲ್ಲಿ ಶೇ.41 ರಷ್ಟು ಹೊಂದಿದ್ದರೆ, ಇತರೆ ಒಬಿಸಿ ಸಮುದಾಯ ಶೇ.31 ರಷ್ಟು ಆಸ್ತಿ ಹೊಂದಿದೆ. ನಂತರದಲ್ಲಿ ಮುಸ್ಲಿಂ ಶೇ.8, ಎಸ್‌ಸಿ ಶೇ.7.3 ಹಾಗೂ ಎಸ್‌ಟಿ ಶೇ. 3.7 ರಷ್ಟು ಸಂಪತ್ತು ಪಡೆದಿವೆ.

ಹಿಂದೂ ಪ್ರಬಲ ಜಾತಿಗಳ ಕುಟುಂಬಗಳು ಭಾರತದ ಸಂಪತ್ತಿನಲ್ಲಿ ಶೇ.22.2 ರಷ್ಟು ಹೊಂದಿದೆ. ನಂತರದಲ್ಲಿ ಒಬಿಸಿ ಸಮುದಾಯ ಶೇ.35.8, ಮುಸ್ಲಿಂ ಸಮುದಾಯ ಶೇ. 12.1, ಎಸ್‌ಸಿ ಶೇ.17.9 ಹಾಗೂ ಎಸ್‌ಟಿ ಸಮುದಾಯದ ಕುಟುಂಬಗಳು ಶೇ. 9.1 ಆಸ್ತಿ ಹೊಂದಿವೆ.

ಒಟ್ಟು ಸಂಪತ್ತು ಮೌಲ್ಯದ ವರದಿಯನ್ನು ಅಂದಾಜಿಸಿದರೆ ಹಿಂದೂ ಸಮುದಾಯದ ಪ್ರಬಲ ಜಾತಿಗಳು 1,46,394 ಬಿಲಿಯನ್‌ ಕೋಟಿ ರೂ. ಆಸ್ತಿಯನ್ನು ಹೊಂದಿವೆ. ಇದು ಎಸ್‌ಟಿ ಸಮುದಾಯಗಳ 11 ಪಟ್ಟು ಹೆಚ್ಚಿದೆ. ಎಸ್‌ಟಿ ಸಮುದಾಯಗಳು 13,268 ಬಿಲಿಯನ್‌ ರೂ. ಸಂಪತ್ತು ಹೊಂದಿವೆ. ಮುಸ್ಲಿಂ ಸಮುದಾಯದ ಸಂಪತ್ತು 28,707 ಬಿಲಿಯನ್‌ನಷ್ಟಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಬೆಲೆಗಳಲ್ಲಿ ಸಾಮಾಜಿಕ ಸಮುದಾಯಗಳ ಒಡೆತನದ ಒಟ್ಟು ಸಂಪತ್ತು (ಬಿಲಿಯನ್‌ ರೂ.ಗಳಲ್ಲಿ)

wealth 1

ಮೂಲ: ಎಐಎಡಿಎಸ್ 2013; ಭಾರತದ ಸಂಪತ್ತಿನ ಮಾಲೀಕತ್ವದಲ್ಲಿ ಅಂತರ್‌ ಸಮುದಾಯಗಳ ಅಸಮಾನತೆಯ ಅಧ್ಯಯನ ವರದಿ, 2020

ಪ್ರತಿ ಮನೆಯ ಸಂಪತ್ತಿನ ಮಾಲೀಕತ್ವದ ಚಿತ್ರಣ ಎಷ್ಟಿದೆ?

ಪ್ರತಿ ಮನೆಯ ಮಾಲಿಕತ್ವದ ಸಂಪತ್ತಿನ ಸರಾಸರಿ ರೂ.15.04 ಲಕ್ಷ, ಆದರೆ ಸಮುದಾಯಗಳ ಗುಂಪುಗಳ ನಡುವೆ ಗಮನಾರ್ಹ ಏರುಪೇರುಗಳಿವೆ. ಅಂದರೆ ಒಂದೇ ಸಮುದಾಯದ ಒಂದು ಕುಟುಂಬದ ಬಳಿ 1 ಕೋಟಿ ರೂ. ಆಸ್ತಿ ಇದ್ದರೆ, ಅದೇ ಸಮುದಾಯದ ಇನ್ನೊಂದು ಕುಟುಂಬದ ಬಳಿ 1 ಲಕ್ಷ ರೂ. ಇರುತ್ತದೆ. ಇದೆಲ್ಲವನ್ನು ಕೂಡಿ ಸಮಗ್ರವಾಗಿ ವರದಿ ತಯಾರಿಸಲಾಗಿದೆ.

ಹಿಂದೂ ಪ್ರಬಲ ಜಾತಿಗಳ ಪ್ರತಿ ಮನೆಯ ಮಾಲೀಕತ್ವದ ಸರಾಸರಿ ಸಂಪತ್ತು 27.73 ಲಕ್ಷ ರೂ. ಒಬಿಸಿ ಸಮುದಾಯದ ಸಂಪತ್ತು 12.96 ಲಕ್ಷ ರೂ. ಇದೆ. ಪ್ರತಿ ಮನೆಯ ಸರಾಸರಿ ಸಂಪತ್ತಿನಲ್ಲಿ ಮುಸ್ಲಿಂ ಸಮುದಾಯ 9.95 ಲಕ್ಷ ರೂ., ಎಸ್‌ಟಿ ಸಮುದಾಯ 6.13 ಲಕ್ಷ ರೂ. ಹಾಗೂ ಎಸ್‌ಸಿ ಸಮುದಾಯ 6.13 ಲಕ್ಷ ರೂ. ಹೊಂದಿದೆ ಎಂದು ವರದಿ ಹೇಳುತ್ತದೆ.

ಪ್ರಸ್ತುತ ಬೆಲೆಗಳಲ್ಲಿ ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಸಮುದಾಯಗಳು ಹೊಂದಿರುವ ಪ್ರತಿ ಮನೆಯ ಮಾಲಿಕತ್ವದ ಸಂಪತ್ತು(ರೂ.ಗಳಲ್ಲಿ)

Wealth 2

ಮೂಲ: ಎಐಎಡಿಎಸ್ 2013; ಭಾರತದ ಸಂಪತ್ತಿನ ಮಾಲೀಕತ್ವದಲ್ಲಿ ಅಂತರ್‌ ಸಮುದಾಯಗಳ ಅಸಮಾನತೆಯ ಅಧ್ಯಯನ ವರದಿ, 2020

ಹೆಚ್ಚು ಬಂಗಾರ ಹೊಂದಿರುವ ಸಾಮಾಜಿಕ ಗುಂಪು ಯಾವುದು?

ಅಧ್ಯಯನದ ವರದಿಯ ಪ್ರಕಾರ, ಹಿಂದೂ ಒಬಿಸಿ ಸಮುದಾಯ ಶೇ.39.1ರೊಂದಿಗೆ ಹೆಚ್ಚು ಬಂಗಾರವನ್ನು ಹೊಂದಿದೆ. ಹಿಂದೂ ಪ್ರಬಲ ಜಾತಿಗಳು ಶೇ.31.3 ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಸ್ಲಿಂ ಸಮುದಾಯ ಶೇ.9.2 ಹಾಗೂ ಎಸ್‌ಟಿ ಸಮುದಾಯ ಶೇ.3.4 ರಷ್ಟು ಚಿನ್ನ ಹೊಂದಿದೆ.

 ಸಾಮಾಜಿಕ-ಧಾರ್ಮಿಕ ಗುಂಪುಗಳಲ್ಲಿರುವ ವಿವಿಧ ರೀತಿಯ ಸಂಪತ್ತಿನ ಪಾಲು (ಶೇಕಡವಾರಿನಲ್ಲಿ)

Wealth 3

ಮೂಲ: ಎಐಎಡಿಎಸ್ 2013; ಭಾರತದ ಸಂಪತ್ತಿನ ಮಾಲೀಕತ್ವದಲ್ಲಿ ಅಂತರ್‌ ಸಮುದಾಯಗಳ ಅಸಮಾನತೆಯ ಅಧ್ಯಯನ ವರದಿ, 2020

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...