‘ಭಾರತದಲ್ಲಿ ಎಂದಿಗೂ ಹುಟ್ಟುಹಬ್ಬ ಆಚರಿಸಲ್ಲ’ ಎಂದ ಅಮೆರಿಕ ಮಹಿಳೆ: ಯಾಕೆ ಗೊತ್ತಾ?

Date:

ಹುಟ್ಟುಹಬ್ಬ ಎಂದರೆ ಸಂಭ್ರಮ. ಆ ಒಂದು ದಿನ ನಮ್ಮ ದಿನ ಎಂಬಂತೆ ನಾವು ಜೀವಿಸುತ್ತೇವೆ. ಉಡುಗೊರೆಗಳು, ಹೊಸ ಬಟ್ಟೆ ಹೀಗೆ ಮಕ್ಕಳಂತೆ ಉತ್ಸಾಹದಿಂದ ಆಚರಿಸುವುದೂ ಇದೆ. ಜತೆಗೆ ಸ್ನೇಹಿತರೊಂದಿಗೆ ಪಾರ್ಟಿ ಸದ್ಯದ ಯುವಜನರ ಟ್ರೆಂಡ್. ಹೀಗಿರುವಾಗ ಅಮೆರಿಕದ ಮಹಿಳೆಯೊಬ್ಬರು ಭಾರತದಲ್ಲಿ ಎಂದಿಗೂ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಕ್ರಿಸ್ಟನ್ ಫಿಷರ್ ಎಂಬ ಅಮೆರಿಕದ ಮಹಿಳೆ ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತ ಎಂದರೆ ತನಗಿಷ್ಟ ಎಂದೂ ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಭಾರತದಲ್ಲಿ ಮಾತ್ರ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಭಾರತದಲ್ಲಿ ಹುಟ್ಟುಹಬ್ಬವನ್ನು ವಿಚಿತ್ರವಾಗಿ ಆಚರಿಸಲಾಗುತ್ತದೆ. ಆದ್ದರಿಂದ ಈ ದಿನ ತನ್ನ ತವರು ದೇಶ ಅಮೆರಿಕದ ನೆನಪಾಗುತ್ತದೆ ಎಂದು ಫಿಷರ್ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಶ್ವಾನಗಳೊಂದಿಗೆ 42ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಹಿಂದೆ ಹಲವು ಇನ್‌ಸ್ಟಾ ಪೋಸ್ಟ್‌ಗಳಲ್ಲಿ ಭಾರತದ ಬಗ್ಗೆ ಉತ್ತಮ ಅಭಿಪ್ರಾಯ ಹೇಳಿದ್ದವರು ಫಿಷರ್. ಅಷ್ಟು ಮಾತ್ರವಲ್ಲದೆ ಭಾರತಕ್ಕೆ ಬಂದು ಮರಳಿ ಅಮೆರಿಕಕ್ಕೆ ಹೋಗಿದ್ದವರು ಭಾರತವೇ ನೆಮ್ಮದಿ ಎನಿಸಿ ತಮ್ಮ ಆಸ್ತಿಗಳನ್ನು ಮಾರಿ ಇಬ್ಬರು ಹೆಣ್ಣು ಮಕ್ಕಳು, ಪತಿ ಸಹಿತ ಇಡೀ ಕುಟುಂಬವೇ ದೆಹಲಿಯಲ್ಲಿ ನೆಲೆಸಿದ್ದಾರೆ. ಮೂರನೇ ಮಗಳಿಗೆ ಇಲ್ಲೇ ಜನ್ಮ ನೀಡಿದ್ದಾರೆ. ಅದಾದ ಬಳಿಕ ಹೆಣ್ಣುಮಗುವೊಂದನ್ನು ದತ್ತು ಪಡೆದಿದ್ದಾರೆ. ಇನ್‌ಸ್ಟಾಗ್ರಾ ತಮ್ಮ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಭಾರತದಲ್ಲಿ ಹುಟ್ಟುಹಬ್ಬ ಆಚರಿಸಲ್ಲ, ಹುಟ್ಟುಹಬ್ಬ ಬಂದಾಗ ಅಮೆರಿಕ ನೆನಪಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ?

ಕಾರಣ ಏನೆಂಬುದನ್ನು ಫಿಷರ್ ತನ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಫಿಷರ್ ಹೇಳುವಂತೆ ಭಾರತದಲ್ಲಿ ಮತ್ತು ಅಮೆರಿಕದಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುವ ವಿಧಾನದಲ್ಲಿ ತುಂಬಾ ವ್ಯತ್ಯಾಸವಿದೆ. “ಇಲ್ಲಿ ನನ್ನ ಸ್ನೇಹಿತರು ನನ್ನ ಹುಟ್ಟುಹಬ್ಬದಂದು ಪಾರ್ಟಿಗೆ ಹೋಗೋಣ ಎಂದು ಹೇಳಿದರೆ, ನಾನು ಸ್ವಲ್ಪ ಹಿಂಜರಿಯುತ್ತೇನೆ. ಏಕೆಂದರೆ ಇಲ್ಲಿ ನಾನೇ ಬಿಲ್ ಪಾವತಿಸಬೇಕು. ಆದರೆ ಇದು ನನಗೆ ಅರ್ಥವಾಗಲ್ಲ. ಅಮೆರಿಕದಲ್ಲಿ ಆದರೆ ನಮ್ಮ ಹುಟ್ಟುಹಬ್ಬದ ದಿನ ನಾವು ಆಚರಣೆಯಷ್ಟೇ ಮಾಡುವುದು. ಬಿಲ್ ಹಣವನ್ನು ನಮ್ಮಿಂದ ಪಡೆಯಲ್ಲ” ಎಂದಿದ್ದಾರೆ.

“ಅಮೆರಿಕದಲ್ಲಿ ನಿಮ್ಮ ಹುಟ್ಟುಹಬ್ಬದ ದಿನ ಎಂದಿಗೂ ನೀವು ಹಣ ಪಾವತಿಸಬೇಕಾಗಿಲ್ಲ, ನೀವು ಹಣ ಪಾವತಿಸಬೇಕು ಎಂಬ ನಿರೀಕ್ಷೆ ನಿಮ್ಮ ಸ್ನೇಹಿತರಿಗೆ ಇರುವುದಿಲ್ಲ. ವಾಸ್ತವವಾಗಿ, ಸ್ನೇಹಿತರು ಮತ್ತು ಕುಟುಂಬದವರು ಪಾರ್ಟಿಯನ್ನು ಆಯೋಜಿಸುತ್ತಾರೆ. ನಿಮ್ಮ ವಿಶೇಷ ದಿನದಂದು ನೀವು ಯಾವುದಕ್ಕೂ ಖರ್ಚು ಮಾಡಲು ಬಿಡಲ್ಲ” ಎಂದು ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಹುಟ್ಟುಹಬ್ಬದ ದಿನ ಅಮೆರಿಕದಲ್ಲಿ ರೆಸ್ಟೋರೆಂಟ್‌ಗಳು ಉಚಿತವಾಗಿ ಸಿಹಿತಿನಿಸು ಅಥವಾ ಇತರೆ ಯಾವುದಾದರೂ ಆಹಾರ ನೀಡುತ್ತೆ ಎನ್ನುತ್ತಾರೆ ಫಿಷರ್. “ಅಮೆರಿಕದಲ್ಲಿ ನಮ್ಮ ಹುಟ್ಟುಹಬ್ಬವಾದರೆ ನಾವು ಹೋದ ರೆಸ್ಟೋರೆಂಟ್‌ಗಳಲ್ಲಿ ಉಚಿತವಾಗಿ ಸಿಹಿತಿನಿಸು ಅಥವಾ ಯಾವುದಾದರೂ ಪಾನೀಯ ಅಥವಾ ಇತರೆ ಆಹಾರವನ್ನು ನೀಡಲಾಗುತ್ತದೆ. ಆದರೆ ಭಾರತದಲ್ಲಿ ಹಾಗಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಲು ನನಗೆ ಇಷ್ಟವಿಲ್ಲ. ಏಕೆಂದರೆ ಇಲ್ಲಿ ಯಾರ ಹುಟ್ಟುಹಬ್ಬವೋ ಅವರ ಮೇಲೆಯೇ ಹೊರೆ ಹಾಕಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಕ್ರಿಸ್ಟನ್ ಫಿಷರ್ ಪೋಸ್ಟ್ ಸುದ್ದಿಯಲ್ಲಿದೆ. ಕೆಲ ನೆಟ್ಟಿಗರು ಹೌದು ಕ್ರಿಸ್ಟನ್ ಹೇಳುವುದು ಸರಿ ಭಾರತದಲ್ಲಿ ಈ ವಿಚಾರದಲ್ಲಿ ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು “ನಾವು ಉಡುಗೊರೆ ನೀಡುತ್ತೇವೆ, ಅದಕ್ಕೆ ಪ್ರತಿಯಾಗಿ ಅವರು ಪಾರ್ಟಿ ನೀಡುತ್ತಾರೆ” ಎಂದು ಹೇಳಿಕೊಂಡಿದ್ದಾರೆ. ಮೂರು ದಿನಗಳ ಹಿಂದಿನ ಈ ಪೋಸ್ಟ್‌ಗೆ 12,274 ಲೈಕ್ಸ್ ಬಂದಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ನೋಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...