ನಾಟಕದಲ್ಲಿ ರಾಮ ಹಾಗೂ ರಾಮಾಯಣದ ಬಗ್ಗೆ ಕೆಟ್ಟದಾಗಿ ಬಿಂಬಿಸಿದ 8 ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ ಆಡಳಿತ ಮಂಡಳಿ 1.2 ಲಕ್ಷ ರೂ. ದಂಡ ವಿಧಿಸಿದೆ.
ಈ ವರ್ಷದ ಮಾರ್ಚ್ 31 ರಂದು ನಡೆದ ಕಲಾ ಪ್ರದರ್ಶನ ಉತ್ಸವದಲ್ಲಿ ಈ ವಿದ್ಯಾರ್ಥಿಗಳು ‘ರಾಹೊವನ್’ ಎಂಬ ಹೆಸರಿನಲ್ಲಿ ನಾಟಕ ಪ್ರದರ್ಶಿಸಿದ್ದರು.
ಈ ನಾಟಕದಲ್ಲಿ ರಾಮನನ್ನು ಅಪಹಾಸ್ಯ ಮಾಡಿರುವುದರ ಜೊತೆ ರಾಮಾಯಣವನ್ನು ಅಶ್ಲೀಲ ಹಾಗೂ ಅವಹೇಳಕಾರಿಯಾದ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ
ವಿದ್ಯಾರ್ಥಿಗಳ ಗುಂಪೊಂದು ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಏ.8 ರಂದು ಆಡಳಿತ ಮಂಡಳಿಗೆ ದೂರು ನೀಡಿತ್ತು.
ದೂರಿನ ಆಧಾರದ ಮೇಲೆ ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳಿಗೆ 40 ಸಾವಿರ ರೂ. ನಿಂದ 1.20 ಲಕ್ಷ ರೂ ವರೆಗೆ ದಂಡ ವಿಧಿಸಲಾಗಿದೆ.
ಐಐಟಿ ಬಾಂಬೆ ರಿಜಿಸ್ಟ್ರಾರ್ ಕಚೇರಿ ಜೂನ್ 4 ರಂದು ನೋಟಿಸ್ ನೀಡಿದ್ದು, ಜುಲೈ 30ರೊಳಗೆ ದಂಡವನ್ನು ಪಾತಿಸಬೇಕೆಂದು ತಿಳಿಸಲಾಗಿದೆ.
ಬಾಂಬೆ ಐಐಟಿ ಆಡಳಿತ ಮಂಡಳಿ ಈ ವಿಷಯದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.





