‘ನಿನ್ನನ್ನು ಕಾಳಿ ದೇವಿಗೆ ಬಲಿಕೊಡುತ್ತೇವೆ’; ಬಿಹಾರ ಕಾರ್ಮಿಕನ ಮೇಲೆ ಹಿಂದುತ್ವವಾದಿಗಳ ದಾಳಿ

Date:

ಮುಸ್ಲಿಂ ಸಮುದಾಯದ ಕಾರ್ಮಿಕನನ್ನು ಬಾಂಗ್ಲಾದೇಶಿಗನೆಂದು ಆರೋಪಿಸಿ, ಆತನನ್ನು ಹಿಂದುತ್ವ ಕೋಮುವಾದಿಗಳ ಗುಂಪು ಅಮಾನುಷವಾಗಿ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮಧುಬನಿಯ ನಂದಿ ಚಕ್ರ ಗ್ರಾಮದಲ್ಲಿ ಕೆಲವು ಹಿಂದುತ್ವ ಕೋಮುವಾದಿಗಳು ಕಾರ್ಮಿಕನನ್ನು ಹಿಡಿದು, ಭೀಕರವಾಗಿ ಥಳಿಸಿದ್ದಾರೆ. ‘ನೀನು ಬಾಂಗ್ಲಾದೇಶಿ, ನಾವು ನಿನ್ನನ್ನು ಕೊಲ್ಲುತ್ತೇವೆ, ಕಾಳಿ ದೇವತೆಗೆ ಬಲಿ ಕೊಡುತ್ತೇವೆ’ ಎಂದು ದೇವಾಸ್ಥಾನದ ಬಳಿಗೆ ಎಳೆದೊಯ್ದಿದ್ದಾರೆ. ‘ಭಾರತ್ ಮಾತಾಕಿ ಜೈ, ಜೈಂದ್ ಹಾಗೂ ಜೈ ಸೀತಾ ರಾಮ್’ ಎಂಬ ಘೋಷಣೆ ಕೂಗಿದ್ದಾರೆ.

ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತವು ರಕ್ಷಣೆ ನೀಡುತ್ತಿದೆ. ಅಲ್ಲದೆ, ಬಾಂಗ್ಲಾದೇಶದ ಪ್ರಮುಖ ಯುವ, ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಹತ್ಯೆ ಆರೋಪಿಗಳು ಭಾರತದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ, ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಆ ಕಾರಣಕ್ಕಾಗಿ, ಭಾರತದಲ್ಲಿರುವ ಮುಸ್ಲಿಮರ ವಿರುದ್ಧ ಹಿಂದುತ್ವವಾದಿಗಳು ದ್ವೇಷ, ಪ್ರಚೋದನೆ, ಹಿಂಸೆ ಎಸಗುತ್ತಿದ್ದಾರೆ. ಈ ಕೋಮುಹಿಂಸೆಯ ಭಾಗವಾಗಿಯೇ ಬಿಹಾರದಲ್ಲಿ ಮುಸ್ಲಿಂ ಕಾರ್ಮಿಕ ನರ್ಷೆದ್ ಅಲಂ ಮೇಲೆ ಕ್ರೂರ ಹಲ್ಲೆ ನಡೆಸಿದ್ದಾರೆ.

ನರ್ಷೇದ್ ಆಲಂ ಮೇಲಿನ ದಾಳಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಒಂದು ವಿಡಿಯೋದಲ್ಲಿ, ನೀಲಿ ಸ್ವೆಟರ್ ಧರಿಸಿ ರಕ್ತಸಿಕ್ತವಾಗಿ ಬಿದ್ದಿರುವ ನರ್ಷೆದ್ ಆಲಂ ಅವರನ್ನು ಜನಸಮೂಹ ಸುತ್ತುವರೆದಿದೆ. ಕೆಲವರು ಅವರ ಆಧಾರ್ ಕಾರ್ಡ್ ಕೇಳುತ್ತಿದ್ದರೆ, ಇನ್ನು ಕೆಲವರು ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ. ಕೆಲವರು ಅವರನ್ನು ಬಾಂಗ್ಲಾದೇಶಿ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ನರ್ಷೆದ್ ಅವರ ಮೊಬೈಲ್ ಫೋನ್‌ನಲ್ಲಿ ಪಾಕಿಸ್ತಾನಿ ಸಂಖ್ಯೆ ಇದೆ ಎಂದು ಹೇಳುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡನೇ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ನರ್ಷೆದ್ ಮೇಲೆ ಕುಳಿತು ಮೊಬೈಲ್ ಫೋನ್‌ನಿಂದ ಮುಖಕ್ಕೆ ಪದೇ ಪದೇ ಹೊಡೆಯುತ್ತಿರುವುದು ಕಾಣುತ್ತದೆ. ಕಪ್ಪು ಜಾಕೆಟ್ ಧರಿಸಿದ ದಾಳಿಕೋರ, “ನೀವು ಗೋವುಗಳನ್ನು ಕಡಿಯುತ್ತೀರಿ. ನೀವು ಕಟುಕರು” ಎಂದು ಪದೇ ಪದೇ ಹೇಳುತ್ತಾನೆ. ನರ್ಷೆದ್ ಅವರು ಕೈಮುಗಿದು ಬೇಡಿಕೊಂಡರು, ತಾವು ಪ್ರಾಮಾಣಿಕಾಗಿ ಜೀವನ ನಡೆಸುತ್ತಿರುವುದಾಗಿ ಹೇಳಿಕೊಂಡರೂ, ಅವರ ಮೇಲೆ ದಾಳಿಕೋರ ದಾಳಿ ಮುಂದುವರೆಸುತ್ತಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಲಂ ಅವರನ್ನು ಗುಂಪಿನಲ್ಲಿದ್ದ ಜನರು ‘ಬಾಂಗ್ಲಾದೇಶಿ, ಬಾಂಗ್ಲಾದೇಶಿ’ ಎಂದು ಕೂಗುತ್ತಿರುವುದು ಕಾಣುತ್ತದೆ.

ಆದಾಗ್ಯೂ, ಸ್ಥಳದಲ್ಲಿದ್ದ ಯಾರೂ ನರ್ಷೆದ್ ಆಲಂ ಅವರನ್ನು ಉಳಿಸಲು ಪ್ರಯತ್ನಿಸುವುದಿಲ್ಲ.

ಭೀಕರ ಹಲ್ಲೆಯಿಂದ ಬದುಕುಳಿದ ಸಂತ್ತಸ್ತ ಆಲಂಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆ ದಾಖಲಿಸಲಾಗಿದೆ. ಆಲಂ ಅವರ ಸಹೋದರ ನಸೀಮ್ ಅವರು ರಾಜ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

“ನಮಗೆ ಹಲ್ಲೆಯ ಸುದ್ದಿ ತಿಳಿದಾಗ, ನಾವು ಸುಪೌಲ್‌ನಿಂದ ಮಧುಬನಿಗೆ ಹೋದೆವು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದೇವೆ. ಆಲಂ ಅವರು ಕಟ್ಟಡ ಕೆಲಸದ ಮೇಸ್ತ್ರಿಯಾಗಿದ್ದಾರೆ. ಅವರು ಮಧುಬನಿಯಲ್ಲಿ ಸರ್ಕಾರಿ ಚರಂಡಿ ನಿರ್ಮಿಸುವ ಕೆಲಸವನ್ನು ಗುತ್ತಿಗೆಗೆ ಪಡೆದಿದ್ದರು. ಆ ಕೆಲಸಕ್ಕಾಗಿ ಸುಪೌಲ್‌ನಲ್ಲಿ ವಾಸಿಸುತ್ತಿದ್ದರು. ಅವರು ಉದ್ದವಾದ ಗಡ್ಡ ಹೊಂದಿದ್ದಾರೆ, ಅದಕ್ಕಾಗಿಯೇ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ” ಎಂದು ನಸೀಮ್ ಹೇಳಿದ್ದಾರೆ.

“ಘಟನೆಯ ವಿಡಿಯೋವನ್ನು ಪರಿಶೀಲಿಸಲಾಗಿದೆ. ಎರಡರಿಂದ ಮೂರು ಮಂದಿ ಆರೋಪಿಗಳು ಆಲಂ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 109ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ನಮ್ಮ ತಂಡ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತದೆ” ಎಂದು ರಾಜ್‌ನಗರ ಎಸ್‌ಎಚ್‌ಒ ತಿಳಿಸಿದ್ದಾರೆ.

“ಆಲಂ ಅವರು ಬಾಂಗ್ಲಾದೇಶಿಗ ಎಂಬುದು ಸುಳ್ಳು. ಅವರು ಬಾಂಗ್ಲಾದೇಶದವನಲ್ಲ. ಆತ, ಸುಪೌಲ್ ಜಿಲ್ಲೆಯ ನಿವಾಸಿ. ಅವರು ಕಟ್ಟಡ ಕೆಲಸ ಮಾಡಿಕೊಂಡಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಧುಬನಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ಭರವಸೆ ನೀಡಿದ್ದಾರೆ. “ಇಬ್ಬರು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...