ಭಾರತದಲ್ಲಿ ಮಾರ್ಚ್ 7ರ ಶನಿವಾರದಿಂದ ಜಾರಿಗೆ ಬರುವಂತೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. 14.2 ಕೆಜಿ ತೂಕದ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ನ ಬೆಲೆ 60 ರೂ. ಏರಿಕೆ ಏರಿಕೆಯಾಗಿದ್ದರೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 115 ರೂ. ಹೆಚ್ಚಳವಾಗಿದೆ.
ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವು ದೇಶವಾಸಿಗಳ ಮೇಲೆ ಪರಿಣಾಮ ಬೀರಿದೆ. ಅಂತೆಯೇ, ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆಯು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ವಾಣಿಜ್ಯ ಸಂಸ್ಥೆಗಳಂತಹ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿದೆ.
ಮೂಲದ ಪ್ರಕಾರ, ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 853 ರೂ.ಗಳಿಂದ 913 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ, 852.50 ರೂ.ಗಳಿಂದ 912.50 ರೂ.ಗೆ ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ 879 ರೂ.ಗಳಿಂದ 930 ರೂ.ಗಳಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 868.50 ರೂ.ಗಳಿಂದ 928.50 ರೂ.ಗಳಿಗೆ ಏರಿಕೆಯಾಗಿದ್ದರೆ, ಬೆಂಗಳೂರಿನಲ್ಲಿ 855.50ಗಳಿಂದ 905.50 ರೂ.ಗಳಿಗೆ ಏರಿಕೆ ಕಂಡಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ದೆಹಲಿಯಲ್ಲಿ 1,768.50 ರೂ.ಗಳಿಂದ 1,883 ರೂ.ಗೆ, ಮುಂಬೈನಲ್ಲಿ ಬೆಲೆ 1,720.50 ರೂ.ಗಳಿಂದ 1835 ರೂ.ಗೆ, ಕೋಲ್ಕತ್ತಾದಲ್ಲಿ 1,875.50 ರೂ.ಗಳಿಂದ 1,990 ರೂ.ಗೆ, ಚೆನ್ನೈನಲ್ಲಿ 1,929 ರೂ.ಗಳಿಂದ 2,043.50 ರೂ.ಗೆ ಹಾಗೂ ಬೆಂಗಳೂರಿನಲ್ಲಿ 1,814 ರೂ.ಗಳಿಂದ 1,929 ರೂ.ಗೆ ಏರಿಕೆಯಾಗಿದೆ.
ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ನಡೆಸಿ, ಯುದ್ಧ ಆರಂಭಿಸಿದ ಪರಿಣಾಮವಾಗಿ ಭಾರತದಲ್ಲಿ ಇಂಧನ ಕೊರತ ಎದುರಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಬೆಲೆಯೂ ಏರಿಕೆಯಾಗಿದೆ ಎಂದು ಹೇಳಲಾಗಿದೆ.




