2025ರ ಭಾರತ | ಚುನಾವಣೆಗಳು, ಅಧಿಕಾರ ಬದಲಾವಣೆ ಮತ್ತು ಪ್ರಜಾಪ್ರಭುತ್ವ ಪ್ರತಿರೋಧ

Date:

ರಾಜಕೀಯದಲ್ಲಿ 2025 ಬಿಜೆಪಿಗೆ ಭಾರೀ ಲಾಭದಾಯಕ ವರ್ಷವಾಗಿತ್ತು. 2025ರ ವರ್ಷವು ದೆಹಲಿ ಚುನಾವಣೆಯ ಭಾರೀ ಗದ್ದಲದೊಂದಿಗೆ ರಾಜಕೀಯ ಆರಂಭಿಸಿತು. ಬರೋಬ್ಬರಿ 25 ವರ್ಷಗಳ ಬಳಿಕ, ಬಿಜೆಪಿ ಮತ್ತೆ ದೆಹಲಿಯ ಅಧಿಕಾರ ಗದ್ದುಗೆ ಹಿಡಿದು, ಎಎಪಿಯನ್ನು ಹೊರದಬ್ಬಿತು. ನಂತರದ, ಚುನಾವಣೆಗೆ ಸಂಬಂಧಿಸಿದ ವಿಚಾರಗಳು ದೇಶಾದ್ಯಂತ ಬೆಂಕಿಯ ಕಿಡಿಯನ್ನೇ ಹೊತ್ತಿಸಿದವು. ಚುನಾವಣಾ ಆಯೋಗವು ಆರಂಭಿಸಿದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್‌) ಆಕ್ರೋಶಕ್ಕೆ ಕಾರಣವಾಯಿತು. ಮೋದಿ ಸರ್ಕಾರವು ಚುನಾವಣಾ ಆಯೋಗದ ಮೂಲಕ ಎಸ್‌ಐಆರ್ ಹೆಸರಿನಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ (ಎನ್‌ಆರ್‌ಸಿ)ಯನ್ನು ಜಾರಿಗೆ ತರುತ್ತಿದೆ. ವಿಪಕ್ಷಗಳ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ವೋಟ್‌ ಚೋರಿ (ಮತಗಳವು) ಭಾರೀ ಸದ್ದು ಮಾಡಿತು. ಪ್ರಜಾಪ್ರಭುತ್ವದ ಕಾವಲುನಾಯಿ ಮಾಧ್ಯಮಗಳು ಬೊಗಳುವುದನ್ನೇ ನಿಲ್ಲಿಸಿದವು. ಪ್ರತಿಭಟನಾಕಾರರು ಬೀದಿಗಳಲ್ಲಿ ತುಂಬಿಕೊಂಡರು. ಮತಗಳವಿನ ಸದ್ದು-ಗದ್ದಲದ ನಡುವೆ ಬಿಹಾರದಲ್ಲಿ ಎನ್‌ಡಿಎ ಗೆಲುವು ಸಾಧಿಸಿತು. ಉಪರಾಷ್ಟ್ರಪತಿ ರಾಜೀನಾಮೆ ನೀಡಿದರು. ಅಧಿಕಾರಗಳು ಬದಲಾದವು, ಪ್ರಜಾಪ್ರಭುತ್ವ ಪ್ರತಿರೋಧಗಳು ಬೃಹತ್ ಪ್ರಮಾಣದಲ್ಲಿ ವ್ಯಕ್ತವಾದವು. ಎಲ್ಲದರ ನೋಟ ಇಲ್ಲಿದೆ;

2025ರಲ್ಲಿ ದೆಹಲಿ, ಬಿಹಾರ ವಿಧಾನಸಭಾ ಚುನಾವಣೆಗಳು ಸೇರಿದಂತೆ, ರಾಜ್ಯಸಭಾ ಚುನಾವಣೆಗಳು, ಉಪರಾಷ್ಟ್ರಪತಿ ಚುನಾವಣೆ, ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದಿವೆ. ಈ ಚುನಾವಣೆಗಳು ರಾಜಕೀಯವಾಗಿ ತೀವ್ರ ಸ್ಪರ್ಧೆಯನ್ನು ಕಂಡಿದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಭರ್ಜರಿ ಗೆಲುವು ಮತ್ತು ಲಾಭ ಪಡೆದಿದೆ. ಕೇರಳದಂತಹ ಎಡಪಕ್ಷಗಳ ಆಡಳಿತ ಇರುವ ರಾಜ್ಯದಲ್ಲಿಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮೊದಲ ಬಾರಿಗೆ ಆಡಳಿತ ರಚಿಸಿದೆ.

ದೆಹಲಿ ವಿಧಾನಸಭೆ ಚುನಾವಣೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2025ರಲ್ಲಿ ಮೊದಲ ಚುನಾವಣೆ ನಡೆದದ್ದು ದೆಹಲಿಯಲ್ಲಿ. 2025ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ನಡೆದ ಚುನಾವಣೆ ರಾಜಕೀಯದಲ್ಲಿ ಐತಿಹಾಸಿಕ ತಿರುವು ನೀಡಿತು. ಬಿಜೆಪಿ 48 ಸ್ಥಾನಗಳನ್ನು ಅಭೂತಪೂರ್ವ ಗೆಲುವು ಸಾಧಿಸಿತು. 28 ವರ್ಷಗಳ ಬಳಿಕ, ಅಧಿಕಾರಕ್ಕೆ ಮರಳಿತು. ಎಎಪಿ 22 ಸ್ಥಾನಗಳನ್ನು ಗೆದ್ದು ಅಧಿಕಾರ ಕಳೆದುಕೊಂಡರೆ, ಕಾಂಗ್ರೆಸ್‌ ಮತ್ತೊಮ್ಮೆ ಶೂನ್ಯ ಸಾಧನೆ ಮಾಡಿತು. ಚುನಾವಣೆಯಲ್ಲಿ ಎಎಪಿ 22 ಸ್ಥಾನಗಳನ್ನು ಗೆದ್ದು, ವಿಪಕ್ಷವಾಗಿ ಹೊರಹೊಮ್ಮಿದರೂ, ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾರಂತಹ ಘಟಾನುಘಟಿ ನಾಯಕರು ಸೋಲುಂಡರು.

ಈ ಚುನಾವಣೆಗೂ ಮುನ್ನ, ದೆಹಲಿ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ. ಈ ನೀತಿಯ ಕಾರಣಕ್ಕಾಗಿ ಅಕ್ರಮ ಹಣ ವರ್ಗಾವಣೆಯೂ ನಡೆದಿದೆ ಎಂದು ಆರೋಪಿಸಲಾಗಿತ್ತು. ಇದೇ ಆರೋಪದಲ್ಲಿ 2024ರ ಮಾರ್ಚ್‌ನಲ್ಲಿ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತು. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್ ಕೂಡ ಕೇಜ್ರಿವಾಲ್‌ಗಿಂತ ಮೊದಲೇ ಜೈಲು ಸೇರಿಸಿದ್ದರು. ಅವರ ಬಂಧನವನ್ನು ವಿಪಕ್ಷಗಳು ‘ರಾಜಕೀಯ ದುರುದ್ದೇಶ’ ಎಂದು ಕರೆದರೆ, ಬಿಜೆಪಿ ಮಾತ್ರ ಭ್ರಷ್ಟಾಚಾರದ ವಿರುದ್ಧದ ಹೋರಾಟವೆಂದು ಹೇಳಿತು.

ಈ ಮೂವರ ಬಂಧನ ಮತ್ತು ಭ್ರಷ್ಟಾಚಾರದ ಆರೋಪಗಳು ಎಎಪಿಯ ಸ್ವಚ್ಛ ರಾಜಕಾರಣದ ಇಮೇಜ್‌ಅನ್ನು ಹಾಳುಮಾಡಿತು. ಕೇಜ್ರಿವಾಲ್ ಅವರ ಬಂಧನದೊಂದಿಗೆ ‘ಶೀಷ್ ಮಹಲ್’ ವಿವಾದವೂ ಎಎಪಿಗೆ ಹೊಡೆತ ನೀಡಿತು. ತಮ್ಮ ಸರ್ಕಾರಿ ನಿವಾಸವನ್ನು ಐಷಾರಾಮಿಯಾಗಿ ನವೀಕರಣ ಮಾಡಲು ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ಕೇಜ್ರಿವಾಲ್ ಅವರ ಸಾಮಾನ್ಯ ಮನುಷ್ಯ ಎಂಬ ಇಮೇಜ್‌ಅನ್ನು ಹೊಡೆದುಹಾಕಿತು.

ದೆಹಲಿ ವಿಧಾನಸಭಾ ಚುನಾವಣೆಯ ವೇಳೆಗೆ ಕೇಜ್ರಿವಾಲ್, ಸಿಸೋಡಿಯಾ ಹಾಗೂ ಸತ್ಯೇಂದರ್ ಜೈನ್ ಜಾಮೀನು ಪಡೆದು ಹೊರಬಂದರು. ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೇಜ್ರಿವಾಲ್, ಜನರ ತೀರ್ಪು ಪಡೆದೇ ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಶಪತ ಮಾಡಿದರು.

image 33 4

ಆದರೆ, ಅಬಕಾರಿ ನೀತಿ ಹಗರಣ ಮತ್ತು ಶೀಷ್‌ ಮಹಲ್ ಆರೋಪಗಳು ಜನರಲ್ಲಿ ಎಎಪಿ ಕುರಿತು ಒಲವನ್ನು ನಾಶ ಮಾಡಿತ್ತು. ಉಚಿತ ವಿದ್ಯುತ್, ನೀರು, ಬಸ್‌, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳಿಂದ ಎಎಪಿ ಗಳಿಸಿದ್ದ ಜನಪ್ರಿಯತೆ ಕುಸಿದಿತ್ತು. ಮಾಲಿನ್ಯ, ಉದ್ಯೋಗ ಕೊರತೆಯು ಜನರಲ್ಲಿ ಅಸಹನೆಯನ್ನೂ ಉಂಟುಮಾಡಿತ್ತು. ಎಎಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮುರಿದುಕೊಂಡು, ಸ್ವತಂತ್ರ ಸ್ಪರ್ಧೆಗೆ ಇಳಿದವು. ಇದೆಲ್ಲವೂ, ಎಎಪಿ ಅಧಿಕಾರ ಕಳೆದುಕೊಂಡು, ಬಿಜೆಪಿ ಅಧಿಕಾರ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು.

ಬಿಹಾರ ವಿಧಾನಸಭಾ ಚುನಾವಣೆ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ವಿವಾದಗಳಿಂದ ನಡೆದ ಪ್ರಮುಖ ಚುನಾವಣೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ 20 ವರ್ಷಗಳ ಆಡಳಿತವು ಬಿಹಾರ ಜನರಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ನಿತೀಶ್ ಆಡಳಿತದಲ್ಲಿ ರಾಜ್ಯವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ನಿರುದ್ಯೋಗ, ಬಡತನವು ವ್ಯಾಪಕವಾಗಿ ಹೆಚ್ಚಾಗಿದೆ. ಯುವಜನರು ಉದ್ಯೋಗ ಹರಸಿ ಹೊರರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಗಂಭೀರ ಆರೋಪಗಳಿದ್ದವು. ಈ ಬಾರಿ ಚುನಾವಣೆಯಲ್ಲಿ ಬದಲಾವಣೆಯನ್ನು ತರುತ್ತದೆ, ಎನ್‌ಡಿಎ ಅಧಿಕಾರ ಕಳೆದುಕೊಳ್ಳುತ್ತದೆ, ಮಹಾಘಟಬಂಧನ್‌ ಅಧಿಕಾರಕ್ಕೇರುತ್ತದೆ ಎಂಬ ಅಭಿಪ್ರಾಯ ದಟ್ಟವಾಗಿತ್ತು. ಆದರೆ, ಫಲಿತಾಂಶ ಬೇರೆಯೇ ಆಯಿತು.

ಈ ಲೇಖನ ಓದಿದ್ದೀರಾ?: ಹಸಿರು ಉಸಿರು ಕಸಿದ ‘ವಿಕಾಸ’: ಅದಾನಿ ಸಾಮ್ರಾಜ್ಯ ವಿಸ್ತರಣೆಗೆ ಬಲಿಯಾಗುತ್ತಿರುವ ಅರಣ್ಯ ಮತ್ತು ಪ್ರಜಾಪ್ರಭುತ್ವ

2025ರ ನವೆಂಬರ್‌ನಲ್ಲಿ ಬಿಹಾರದ 243 ಸ್ಥಾನಗಳಿಗೆ ಚುನಾವಣೆ ನಡೆಯಿತು. ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಗೆದ್ದಿತು. 202 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಗೆಲುವು ದಾಖಲಿಸಿತು. ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟನಬಂಧನ್‌ 41 ಸ್ಥಾನಗಳೊಂದಿಗೆ ಹೀನಾಯ ಸೋಲುಕಂಡಿತು. ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದರು.

ಆದರೆ, ಈ ಗೆಲುವುಗಳ ಹಿಂದೆ – ಚುನಾವಣಾ ಅಕ್ರಮಗಳು, ವೋಟ್ ಚೋರಿ ಹಾಗೂ ವಿಶೇಷ ತೀವ್ರ ಪರಿಷ್ಕರಣ (ಎಸ್‌ಐಆರ್) ಪ್ರಕ್ರಿಯೆಯ ಲಾಭವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಬಿಜೆಪಿಗೆ ಚುನಾವಣಾ ಆಯೋಗ ಸಹಕರಿಸಿದೆ. ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಚುನಾವಣಾ ಅಕ್ರಮ ಎಸಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಚುನಾವಣಾ ಆಯೋಗವು ಎಸ್‌ಐಆರ್ ಆರಂಭಿಸಿದಾಗಲೇ, ವಿಪಕ್ಷಗಳು ಈ ಪ್ರಕ್ರಿಯೆಯನ್ನು ಖಂಡಿಸಿದ್ದವು. ಚುನಾವಣಾ ಆಕ್ರಮ ನಡೆಸಲಾಗುತ್ತಿವೆ ಎಂದು ಆರೋಪಿಸಿದ್ದವು.

ಚುನಾವಣಾ ಆಯೋಗುವ 2025ರ ಜೂನ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆನ್ನು ಆರಂಭಿಸಿತು. ಕರಡು ಪಟ್ಟಿ ಪ್ರಕಟವಾದಾಗ, 65 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿ, 18 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿತ್ತು. ಸುಪ್ರೀಂ ಕೋರ್ಟ್‌ ಸೂಚನೆಯಂತೆ ಆಧಾರ್ ಮತ್ತು ರೇಷನ್‌ ಕಾರ್ಡ್‌ಗಳನ್ನು ಪುರಾವೆಯಾಗಿ ಪರಿಗಣಿಸಿದ ಬಳಿಕ ಮತದಾರರ ಪಟ್ಟಿಯಿಂದ ಕೈಬಿಟ್ಟವರ ಸಂಖ್ಯೆ 47 ಲಕ್ಷಕ್ಕೆ ಇಳಿಯಿತು.

ಆದಾಗ್ಯೂ, ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರಲ್ಲಿ ಬಹುತೇಕರು ಬಡವರು, ಅತೀ ಹಿಂದುಳಿದ ವರ್ಗ (ಇಬಿಸಿ), ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ಮಹಿಳೆಯರೇ ಆಗಿದ್ದಾರೆ. ಇವೆಲ್ಲರೂ  ವಿಪಕ್ಷಗಳಿಗೆ ಮತಚಲಾಯಿಸುವ ಮತದಾರರು. ವಿಪಕ್ಷಗಳ ಮತದಾರರನ್ನು ಹೊರಹಾಕಿ, 14.5 ಲಕ್ಷ ನಕಲಿ ಮತದಾರರನ್ನು ಸೇರಿಸಿ, ಚುನಾವಣೆಯಲ್ಲಿ ಬಿಜೆಪಿ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದ ರಾಹುಲ್‌ ಗಾಂಧಿ, ಆಗಸ್ಟ್‌ 17ರಿಂದ ಬಿಹಾರದಲ್ಲಿ, ‘ಮತದಾರರ ಅಧಿಕಾರ ಯಾತ್ರೆ’ ನಡೆಸಿದ್ದರು.

image 32 2

ಆದಾಗ್ಯೂ, ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ಆರೋಪಗಳಿಗೆ ಸರಿಯಾಗಿ ಉತ್ತರಿಸದ ಚುನಾವಣಾ ಆಯೋಗವು ಗಂಭೀರ ಆರೋಪಗಳು ಮತ್ತು ವಿವಾದಗಳ ನಡುವೆಯೇ ಚುನಾವಣೆ ನಡೆಸಿ, ಫಲಿತಾಂಶ ಪ್ರಕಟಿಸಿತು. ಫಲಿತಾಂಶ ಪ್ರಕಟವಾದ ಬಳಿಕ, ಕ್ಷೇತ್ರವಾರು ಗೆಲುವಿನ ಅಂತರ ಮತ್ತು ಅಳಿಸಲಾದ ಮತಗಳನ್ನು ವಿಶ್ಲೇಷಿಸಿದಾಗ, 174 ಕ್ಷೇತ್ರಗಳಲ್ಲಿ ಅಳಿಸಿದ ಮತಗಳ ಸಂಖ್ಯೆಗಳು ಗೆಲುವಿನ ಅಂತರಕ್ಕಿಂತ ಹೆಚ್ಚಿದ್ದವು ಎಂದು ಆರೋಪಿಸಲಾಗಿದೆ.

ಚುನಾವಣಾ ಅಕ್ರಮ, ವೋಟ್‌ಚೋರಿ ಆರೋಪಗಳ ಹೊರತಾಗಿಯೂ, ಚುನಾವಣೆಗೂ ಕೆಲವೇ ದಿನಗಳು ಬಾಕಿ ಇರುವಾಗ ಆಡಳಿತಾರೂಢ ಎನ್‌ಡಿಎ ಸರ್ಕಾರವು, ‘ಮಹಿಳಾ ರೋಜ್‌ಗಾರ್ ಯೋಜನೆ’ಯಡಿ ಮಹಿಳೆಯರ ಖಾತೆಗಳಿಗೆ 10,000 ರೂ. ಹಣ ಜಮಾ ಮಾಡಿತು. ಇದೂ ಕೂಡ ಎನ್‌ಡಿಎ ಗೆಲುವಿಗೆ ನೆರವಾಗಿದೆ ಎಂದು ಹೇಳಲಾಗಿದೆ.

ಉಪರಾಷ್ಟ್ರಪತಿ ಚುನಾವಣೆ

2025ರ ಜುಲೈ 21ರಂದು ಆರಂಭವಾದ ಸಂಸತ್ ಅಧಿವೇಶನದ ಮೊದಲ ದಿನವೇ ರಾಜ್ಯಸಭಾ ಅಧ್ಯಕ್ಷರೂ ಆಗಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ನೀಡಿದರು. ಅವರು ತಮ್ಮ ರಾಜೀನಾಮೆಗೆ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿದ್ದರು. ಆದರೆ, ಬಿಜೆಪಿ ಒಳಗಿನ ಒತ್ತಡ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಿದ್ದರೆಂದು ವಿಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಅನುಮಾನ ವ್ಯಕ್ತಪಡಿಸಿದರು. ಈ ಅನುಮಾನಗಳಿಗೆ ಪುಷ್ಟಿ ನೀಡುವಂತೆ ತಮ್ಮ ರಾಜೀನಾಮೆ ಬಳಿಕ, ಧನಕರ್ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ರಾಜಕೀಯವಾಗಿಯಾಗಲೀ, ತಮ್ಮ ವೈಯಕ್ತಿಕವಾಗಿಯಾಗಲೀ ಯಾವುದೇ ಅಭಿಪ್ರಾಯ, ವಿವರಗಳನ್ನು ಹಂಚಿಕೊಳ್ಳಲಿಲ್ಲ. ಇದು, ಬಿಜೆಪಿಯ ಆಂತರಿಕ ಜಗಳದ ಕಾರಣಗಳಿಂದಲೇ ಅವರು ರಾಜೀನಾಮೆ ನೀಡಿದ್ದಾರೆಂಬ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಉಪರಾಷ್ಟ್ರಪತಿ ಜಗದೀಪ್ ಧನಕರ್, ಹೊಸ ಕಾನೂನುಗಳು,

ಧನಕರ್ ಅವರು ರಾಜಸ್ಥಾನ ಮೂಲದವರು. ಜಾಟ್ ಸಮುದಾಯಕ್ಕೆ ಸೇರಿದವರು. ಜಾಟ್ ಸಮುದಾಯಗಳು ಪ್ರಬಲವಾಗಿದ್ದ ಎಲ್ಲ ರಾಜ್ಯಗಳಲ್ಲಿಯೂ ಚುನಾವಣೆ ಮುಗಿದಿದ್ದು, ರಾಜಸ್ಥಾನ ಅಥವಾ ಜಾಟ್ ಪ್ರಾಬಲ್ಯತೆಯುಳ್ಳ ರಾಜ್ಯಗಳಲ್ಲಿ ಸದ್ಯಕ್ಕೆ ಚುನಾವಣೆಗಳಿಲ್ಲ. ಹೀಗಾಗಿ, ಧನಕರ್ ಅವರನ್ನು ಬದಲಿಸಿ, ಚುನಾವಣೆ ಸನಿಹದಲ್ಲಿರುವ ರಾಜ್ಯಗಳ ನಾಯಕರನ್ನು ಉಪರಾಷ್ಟ್ರಪತಿ ಹುದ್ದೆಗೇರಿಸಲು ಬಿಜೆಪಿ ತಂತ್ರ ಹೆಣೆದು, ಧನಕರ್‌ ರಾಜೀನಾಮೆ ಕೊಡುವಂತೆ ಮಾಡಿದೆ ಎಂದೂ ಹೇಳಲಾಗಿದೆ.

ಆದಾಗ್ಯೂ, ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣಾ ಆಯೋಗ ಚುನಾವಣೆ ನಡೆಸಿತು. ಚುನಾವಣೆಗೆ ಬಿಜೆಪಿಯಿಂದ ಸಿ.ಪಿ ರಾಧಾಕೃಷ್ಣನ್ ಅವರು ಸ್ಪರ್ಧಿಸಿ, ಗೆಲುವು ಸಾಧಿಸಿದರು. ಅಂದಹಾಗೆ, ರಾಧಾಕೃಷ್ಣನ್ ಅವರು ತಮಿಳುನಾಡು ಮೂಲದವರು. ತಮಿಳುನಾಡಿನಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಮತಕಳವು ಆರೋಪಗಳು

2025ರ ಚುನಾವಣೆಗಳು ವಿವಾದಗಳ ನಡುವೆಯೇ ನಡೆದಿವೆ. ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗವು ಬಿಜೆಪಿ ಜೊತೆ ಕೈಜೋಡಿಸಿ ‘ವೋಟ್ ಚೋರಿ’ (ಮತಕಳವು) ನಡೆಸುತ್ತಿದೆ. ಬಿಜೆಪಿಯ ಗೆಲುವಿಗಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೊಪಿಸಿದ್ದಾರೆ.

2024ರಲ್ಲಿ ನಡೆದಿದ್ದ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಮತಗಳವು ನಡೆದಿದೆ. ಸುಮಾರು 25 ಲಕ್ಷಕ್ಕೂ ಅಧಿಕ ನಕಲಿ ಮತದಾರರನ್ನು ಸೇರಿಸಿ, ಬಿಜೆಪಿ ಚುನಾವಣೆಯನ್ನು ಅಕ್ರಮವಾಗಿ ಗೆದ್ದಿದೆ. ಅಂತೆಯೇ, ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ತಂತ್ರಗಳು ನಡೆದಿವೆ. 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ನಕಲಿ ಮತದಾರರನ್ನು ಸೇರಿಸಲಾಗಿದೆ. ಬಿಜೆಪಿಯ ಈ ಚುನಾವಣಾ ಅಕ್ರಮಕ್ಕೆ ಚುನಾವಣಾ ಆಯೋಗ ಕೈಜೋಡಿಸಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗವು ಜೊತೆಗೂಡಿ ವಿಪಕ್ಷಗಳ ಮತದಾರರನ್ನು ಅಳಿಸಿ, ನಕಲಿ ಮತದಾರರನ್ನು ಸೇರಿಸಿವೆ. ಆದ್ದರಿಂದಲೇ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಆರೋಪಿಸಿರುವ ರಾಹುಲ್‌ ಗಾಂಧಿ, ನಾನಾ ದಾಖಲೆಗಳನ್ನು ದೇಶದ ಮುಂದಿಟ್ಟಿದ್ದಾರೆ.

ಒಂದೇ ಫೋಟೋವನ್ನು 100ಕ್ಕೂ ಹೆಚ್ಚು ನಕಲಿ ಮತದಾರರ ಚೀಟಿಗಳನ್ನು ಸೃಷ್ಟಿಸಲಾಗಿದೆ. ಬ್ರೆಜಿಲ್ ಯುವತಿಯ ಫೋಟೋವನ್ನು ವಿವಿಧ ಹೆಸರುಗಳೊಂದಿಗೆ ಬಳಸಿಕೊಳ್ಳಲಾಗಿದೆ ಎಂದು ರಾಹುಲ್‌ ಗಾಂಧಿ ದಾಖಲೆ ಸಹಿತ ಆರೋಪಿಸಿದ್ದರು. ಆದರೆ, ರಾಹುಲ್‌ ಗಾಂಧಿ ಅವರ ಆರೋಪಗಳಿಗೆ ಚುನಾವಣಾ ಆಯೋಗವು ಸ್ಪಷ್ಟ ಮತ್ತು ನಿಖರವಾದ ಉತ್ತರ ನೀಡುವಲ್ಲಿ ಈವರೆಗೆ ವಿಫಲವಾಗಿದೆ. ಕೇವಲ, ಆರೋಪಗಳನ್ನು ಅಲ್ಲಗಳೆಯುತ್ತ ಬಂದಿದೆ.

ವಿಶೇ‍ಷ ತೀವ್ರ ಪರಿಷ್ಕರಣೆ (ಎಸ್‌ಐಆರ್)

2025ರ ಜುಲೈನಲ್ಲಿ ಬಿಹಾರದಲ್ಲಿ ಆರಂಭವಾದ ಎಸ್‌ಐಆರ್‌ – ಈಗ ದೇಶಾದ್ಯಂತ ವಿಸ್ತರಿಸಿದೆ. 2ನೇ ಹಂತದಲ್ಲಿ 12 ರಾಜ್ಯಗಳಲ್ಲಿ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆನ್ನು ನಡೆಸುತ್ತಿದೆ. ಈ ಮೂಲಕ ಬಿಹಾರವೂ ಸೇರಿದಂತೆ ಈ 13 ರಾಜ್ಯಗಳಲ್ಲಿ ಒಟ್ಟು 5.25 ಕೋಟಿಗೂ ಅಧಿಕ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಿದೆ. ಮತಪಟ್ಟಿಯಿಂದ ಹೊರಗುಳಿದವರಲ್ಲಿ ಹೆಚ್ಚಿನವರು ದಲಿತರು, ಒಬಿಸಿ ಹಾಗೂ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದರಾಗಿದ್ದು, ಅವರು ವಿಪಕ್ಷಗಳಿಗೆ ಮತ ಚಲಾಯಿಸುವ ಕಾರಣಕ್ಕಾಗಿ ಹೊರಲಾಗಿದೆ ಎಂದು ಆರೋಪಿಸಲಾಗಿದೆ.

ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗ, ಚುನಾವಣಾ ಆಯೋಗವು, ಮತದಾರರು ತಮ್ಮ ಹೆಸರನ್ನು ಉಳಿಸಿಕೊಳ್ಳಲು ಪೌರತ್ವ ದಾಖಲೆಗಳನ್ನು ಒದಸಗಿಬೇಕೆಂದು ಕೇಳಿತ್ತು. 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮ ದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮ ದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮ ದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮ ದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು ಎಂದು ಸೂಚಿಸಲಾಗಿತ್ತು.

ಆದರೆ, ಈ ಪರಿಷ್ಕರಣೆ ಮತ್ತು ಪೌರತ್ವ ಸಾಬೀತಿಗೆ ಪೂರ್ವಜರ ದಾಖಲೆಗಳನ್ನು ಕೇಳುವುದು ತಳ ಸಮುದಾಯ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಹುತೇಕರನ್ನು ಮತದಾರ ಪಟ್ಟಿಯಿಂದ ಹೊರಗಿಡುವ ಆತಂಕವನ್ನು ಹುಟ್ಟುಹಾಕಿತ್ತು. ಬಹುಸಂಖ್ಯಾತ ಹಿಂದುಳಿದ, ತಳ ಸಮುದಾಯಗಳ ಜನರು ಪೂರ್ವಜರ ಹುಟ್ಟಿದ ದಿನಾಂಕ ಅಥವಾ ಜನ್ಮ ಸ್ಥಳಕ್ಕೆ ಪೂರಕವಾದ ದಾಖಲೆಗಳನ್ನು ಹೊಂದಿರಲು ಅಸಾಧ್ಯವಾಗಿತ್ತು. ಅದೇ ಕಾರಣಕ್ಕಾಗಿ, 2020ರಲ್ಲಿ ಜಾರಿಗೆ ಬಂದಿದ್ದ ಎನ್‌ಆರ್‌ಸಿಯನ್ನು ದೇಶದ ಜನರು ವಿರೋಧಿಸಿದ್ದರು. ಎಸ್‌ಆರ್‌ಸಿಯಲ್ಲಿನ ಅದೇ ನಿಯಮಗಳನ್ನು ಚುನಾವಣಾ ಆಯೋಗವು ತನ್ನ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡಿದ್ದು, ಭಾರೀ ಆಕ್ರೋಶ, ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿತ್ತು.

ಹಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಚುನಾವಣಾ ಆಯೋಗವು, ಪೌರತ್ವದ ದಾಖಲೆಗಳ ಜೊತೆಗೆ, ಆಧಾರ್ ಮತ್ತು ರೇಷನ್‌ ಕಾರ್ಡ್‌ಗಳನ್ನೂ ದಾಖಲೆಗಳಾಗಿ ಪರಿಗಣಿಸುವಂತೆ ಸೂಚಿಸಿತು. ಆದರೂ, ಆಧಾರ್ ಮತ್ತು ರೇಷನ್ ಕಾರ್ಡ್‌ಗಳನ್ನು ಪರಿಪೂರ್ಣ ದಾಖಲೆಗಳಾಗಿ ಪರಿಗಣಿಸಿದ ಆಯೋಗವು, ಇತರ ದಾಖಲೆಗಳನ್ನು ಕೇಳುತ್ತಲೇ ಇದೆ. ಆಯೋಗ ಕೇಳುವ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೇ ಇರುವವರನ್ನು ಮತಪಟ್ಟಿಯಿಂದ ಹೊರಗಿಡುತ್ತಿದೆ. ಈಗ, 12 ರಾಜ್ಯಗಳಲ್ಲಿ ಚುನಾವಣಾ ಆಯೋಗವು ಮತಪಟ್ಟಿಯಿಂದ ಹೊರಗಿಟ್ಟಿರುವ ಮತದಾರರ ಸಂಖ್ಯೆಯು ಕರ್ನಾಟಕದ ಒಟ್ಟು ಜನಸಂಖ್ಯೆಗೆ ಸರಾಸರಿ ಸಮಾನಾಗಿದೆ ಎಂದು ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ಹೀಗಾಗಿಯೇ, ಎಸ್‌ಐಆರ್‌ ಪ್ರಕ್ರಿಯೆಯನ್ನು ವಿರೋಧಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗವು ಬಿಜೆಪಿ ಒತೆ ಸೇರಿ ‘ಕ್ರಿಮಿನಲ್ ವಂಚನೆ’ ಎಸಗಿದೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಅಕ್ರಮ, ಮತಗಳವು, ಎಸ್‌ಐಆರ್‌ ಆರೋಪಗಳ ನಡುವೆಯೂ 2025ರ ಚುನಾವಣೆಗಳು ಬಿಜೆಪಿಗೆ ದೊಡ್ಡ ಗೆಲುವನ್ನು ತಂದುಕೊಟ್ಟಿವೆ. ಆದರೆ, ಚುನಾವಣಾ ಪ್ರಕ್ರಿಯೆ, ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆ ಕುರಿತ ನಂಬಿಕೆಯು ಕುಸಿದಿದೆ. ಚುನಾವಣಾ ಆಯೋಗದ ನಡೆ-ಧೋರಣೆಗಳನ್ನು ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿವೆ. ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡುವಂತೆ ಮಾಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...