ಭಾರತ-ಇಯು ಡೀಲ್ | ‘ಎಲ್ಲ ಒಪ್ಪಂದಗಳ ತಾಯಿ’ಗೆ ಡೆಲಿವೆರಿ ಸಮಯ ದೂರವಿದೆ!

Date:

ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ (FTA) ಮಾತುಕತೆ ಮಂಗಳವಾರ ಪೂರ್ಣಗೊಂಡಿದೆ. ಒಪ್ಪಂದವನ್ನು ಘೋಷಿಸುವ ಔಪಚಾರಿಕ ದಾಖಲೆಗೆ ಸಹಿ ಹಾಕಿವೆ. ಆದರೆ, ಅಧಿಕೃತ ಒಪ್ಪಂದಕ್ಕೆ ಇನ್ನೂ ಸಹಿ ಹಾಕಲಾಗಿಲ್ಲ. ಒಪ್ಪಂದವನ್ನು ಅಂತಿಮಗೊಳಿಸಿ, ಕಾರ್ಯಗತಗೊಳಿಸಲು ಮತ್ತು ಒಪ್ಪಂದವು ಜಾರಿಗೆ ಬರಲು ಇನ್ನೂ ಸಾಕಷ್ಟು ಸಮಯದ ಅಗತ್ಯವಿದೆ. ಇದು, ತಿಂಗಳುಗಳು ಅಥವಾ ವರ್ಷವೇ ಆಗಬಹುದು!

ಪ್ರಧಾನಿ ನರೇಂದ್ರ ಮೋದಿ, ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷೆ ಆಂಟೋನಿಯೊ ಕೋಸ್ಟಾ ಅವರು ದೆಹಲಿಯಲ್ಲಿ ಸಭೆ ನಡೆಸಿ, ಒಪ್ಪಂದವನ್ನು ಘೋಷಿಸಿದ್ದಾರೆ.

ಒಪ್ಪಂದದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಒಪ್ಪಂದವನ್ನು ‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಿದ್ದಾರೆ. ಇದು ಭಾರತ ಮತ್ತು ಯುರೋಪಿಯನ್ ಒಕ್ಕೂಟ ಎರಡಕ್ಕೂ ಪ್ರಮುಖ ಅವಕಾಶಗಳನ್ನು ತೆರೆಯುತ್ತದೆ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದಾಗ್ಯೂ, ಮಂಗಳವಾರದ ಬೆಳವಣಿಗೆಯು FTA ಮಾತುಕತೆಗಳನ್ನು ಪ್ರತಿನಿಧಿಸುತ್ತದೆ. ಒಪ್ಪಂದದ ಜಾರಿಗೆ ಕಾನೂನು ಪರಿಶೀಲನೆಯ ಪ್ರಮುಖ ಘಟ್ಟ ಬಾಕಿದೆ ಎಂದು ಅರ್ಥಿಕ ತಜ್ಷರು ವಿಶ್ಲೇಷಿಸಿದ್ದಾರೆ. ಯಾಕೆಂದರೆ, ಮಂಗಳವಾರ, ಮೋದಿ ಮತ್ತು ಇಯು ನಾಯಕರು ಸಹಿ ಹಾಕಿರುವುದು ಒಪ್ಪಂದದ ಅಂತಿಮ ಮತ್ತು ಅಧಿಕೃತ ಕಡತವಲ್ಲ. ಬದಲಿಗೆ, ಮಾತುಕತೆಗಳ ಮುಕ್ತಾಯವನ್ನು ಗುರುತಿಸುವ ಕಾರ್ಯವಿಧಾನದ ದಾಖಲೆಯಷ್ಟೇ. ಒಪ್ಪಂದಕ್ಕೆ ಅಧಿಕೃತ ಸಹಿ ಹಾಕುವುದು ಇನ್ನೂ ಬಾಕಿ ಇದೆ.

ಅಧಿಕೃತ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಮುನ್ನ, ಎರಡೂ ಕಡೆಯವರು ಹಲವಾರು ಕಾರ್ಯವಿಧಾನಗಳನ್ನು ಅನುಸರಿಸಬೇಕಿದೆ. ಗೊಂದಲವನ್ನು ಬಗೆಹರಿಸಿಕೊಳ್ಳಬೇಕಿದೆ. ಕಾನೂನು ಅವಕಾಶಗಳು ಮತ್ತು ತಾಂತ್ರಿಕ ವಿಚಾರಗಳ ಕುರಿತು ಪರಿಶೀಲನೆಗಳನ್ನೂ ನಡೆಸಬೇಕಿದೆ. ಇದೆಲ್ಲದಕ್ಕೂ ಮುನ್ನ, ಎರಡೂ ಪಕ್ಷಗಳ ಸಮಾಲೋಚಕರು ಒಪ್ಪಂದದ ಏಕೀಕೃತ ಆವೃತ್ತಿಯನ್ನು ಸಿದ್ಧಪಡಿಸಬೇಕಿದೆ. ಈ ಸಿದ್ಧತೆಗೇ ಕನಿಷ್ಠ 5-6 ತಿಂಗಳುಗಳು ಸಮಯದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಗಮನಾರ್ಹವೆಂದರೆ, ಅಂತಿಮ ಒಪ್ಪಂದದ ಕಡತಕ್ಕೆ ಸಹಿಹಾಕಿದ ನಂತರವೂ, ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಒಪ್ಪಂದವನ್ನು ಜಾರಿಗೊಳಿಸಲು ಆಂತರಿಕ ಅನುಮೋದನೆ ಪಡೆದುಕೊಳ್ಳುವ ಅಗತ್ಯವಿರುತ್ತದೆ. ಭಾರತದಲ್ಲಿ, ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಬೇಕಾಗುತ್ತದೆ. ಅಂತೆಯೇ, ಯುರೋಪಿಯನ್ ಒಕ್ಕೂಟವು ತನ್ನ 24 ರಾಷ್ಟ್ರಗಳ ಅಭಿಪ್ರಾಯ ಪಡೆದು, ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಅನಮೋದನೆಗೆ ಪಡೆಯಬೇಕಾಗುತ್ತಿದೆ. ಈ ಪ್ರಕ್ರಿಯೆಯು ಹೆಚ್ಚುವರಿ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಒಪ್ಪಂದದ ಜಾರಿಗೂ ಮುನ್ನ ಆಗಬೇಕಿರುವ ಪ್ರಕ್ರಿಯೆಗಳು ಹೀಗಿವೆ;

ಯುರೋಪಿಯನ್  ಒಕ್ಕೂಟ ಅನುಸರಿಸುವ ಕ್ರಮಗಳು

  1. ಮಾತುಕತೆ ನಡೆಸಿದ ಕರಡು ಕಡತವನ್ನು ಸಾರ್ವಜನಿಕವಾಗಿ ಪ್ರಕಟಿಸುವುದು.
  2. ಒಪ್ಪಂದದ ಏಕೀಕೃತ ಆವೃತ್ತಿಯನ್ನು ಸಿದ್ಧಪಡಿಸುವುದು.
  3. ಕಾನೂನು ಪರಿಶೀಲನೆಗೆ ಒಳಪಡಿಸುವುದು, ಕಾನೂನು ತಜ್ಞರಿಂದ ವಿಶ್ಲೇಷಿಸಿಸುವುದು.
  4. ಯುರೋಪಿಯನ್ ಒಕ್ಕೂಟದ 24 ರಾಷ್ಟ್ರಗಳ ಎಲ್ಲ ಅಧಿಕೃತ ಭಾಷೆಗಳಿಗೆ (24 ಭಾಷೆಗಳು) ಅನುವಾದಿಸುವುದು.
  5. ಯುರೋಪಿಯನ್ ಕೌನ್ಸಿಲ್‌ಗೆ ಒಪ್ಪಂದದ ಪ್ರತಿಯನ್ನು ಸಲ್ಲಿಸುವುದು.
  6. ಯುರೋಪಿಯನ್ ಕೌನ್ಸಿಲ್‌ನಿಂದ ಅನುಮೋದನೆ ಪಡೆಯುವುದು.
  7. ಬಳಿಕ, ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಮಂಡಿಸಿ, ಚರ್ಚಿಸಿ, ಒಪ್ಪಂದಕ್ಕೆ ಸಮ್ಮತಿ ಪಡೆದುಕೊಳ್ಳುವುದು.
  8. ಇಯು ಮತ್ತು ಭಾರತ ನಡುವೆ ಔಪಚಾರಿಕ (ಅಧಿಕೃತ) ಸಹಿ ಪ್ರಕ್ರಿಯೆ ನಡೆಸುವುದು.


ಭಾರತದ ಅನುಸರಿಸುವ ಕ್ರಮಗಳು

  1. ಭಾರತವು ಒಪ್ಪಂದದ ಕಡತವನ್ನು ಸಾರ್ವಜನಿಕವಾಗಿ ಪ್ರಕಟಿಸಿಬೇಕು.
  2. ಕಾನೂನು ಮತ್ತು ತಾಂತ್ರಿಕ ವಿಚಾರಗಳನ್ನು ಪರಿಶೀಲಿಸಬೇಕು.
  3. ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚಿಸಿ, ಅನುಮೋದನೆ ಪಡೆಯಬೇಕು.
  4. ಬಳಿಕ, ಸಂಸತ್ತಿನಲ್ಲಿ ಮಂಡಿಸಬೇಕು.

ಯುರೋಪಿಯನ್ ಒಕ್ಕೂಟಕ್ಕೆ ಹೋಲಿಸಿದರೆ, ಭಾರತದ ಪ್ರಕ್ರಿಯೆಗಳು ತ್ವರಿತವಾಗಿ ಮುಗಿಯಬಹುದು. ಆದರೆ, ಯುರೋಪಿಯನ್ ಒಕ್ಕೂಟವು ತನ್ನ 24 ರಾಷ್ಟ್ರಗಳೊಂದಿಗೆ, ಚರ್ಚಿಸಿ, ಅನುಮೋದನೆ ಪಡೆಯುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಎಲ್ಲ ಪ್ರಕ್ರಿಯೆಗಳು ಮುಗಿದು, ಒಪ್ಪಂದವು ಅಧಿಕೃತವಾಗಿ ಜಾರಿಯಾಗಲು ಕನಿಷ್ಠ 12ರಿಂದ 18 ತಿಂಗಳುಗಳು ಬೇಕಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.

ಈ ಲೇಖನ ಓದಿದ್ದೀರಾ?: ಇರಾನ್‌ ಮೇಲೆ ಮರುದಾಳಿಗೆ ಸಜ್ಜಾಗಿದೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ

ಈ ಒಪ್ಪಂದವು ಭಾರತ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಎರಡೂ ಕಡೆಯವರಿಗೆ ಪ್ರವೇಶವನ್ನು ತೀವ್ರವಾಗಿ ವಿಸ್ತರಿಸುವ ನಿರೀಕ್ಷೆಯಿದೆ. ಭಾರತದ ಜವಳಿ, ಉಡುಪು, ಚರ್ಮದ ಸರಕುಗಳು, ಸಮುದ್ರ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳು ಹಾಗೂ ಎಂಜಿನಿಯರಿಂಗ್ ಸರಕುಗಳಿಗೆ ಸುಂಕ-ಮುಕ್ತ ಅಥವಾ ಕಡಿಮೆ-ಸುಂಕದೊಂದಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಹೆಚ್ಚು ಪ್ರವೇಶ ದೊರೆಯಲಿದೆ. ಇದು ಉದ್ಯೋಗಗಳು ಮತ್ತು MSME ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಇನ್ನು, ಯುರೋಪಿಯನ್ ಒಕ್ಕೂಟದ ಯಂತ್ರೋಪಕರಣಗಳು, ರಾಸಾಯನಿಕಗಳು, ವೈದ್ಯಕೀಯ ಉಪಕರಣಗಳು, ಸಂಸ್ಕರಿಸಿದ ಆಹಾರಗಳು ಮತ್ತು ಪಾನೀಯಗಳು ಹಾಗೂ ಆಟೋಮೊಬೈಲ್‌ಗಳು ಸುಂಕ ರಹಿತ ಅಥವಾ ಕಡಿಮೆ ಸುಂಕದೊಂದಿಗೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ.  ಮುಖ್ಯವಾಗಿ, ಯುರೋಪಿಯನ್ ಒಕ್ಕೂಟವು ಭಾರತದ ಕೃಷಿ ವ್ಯವಸ್ಥೆಯ ಮೇಲೆ ನೇರ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ.

ಈ ವರ್ಷದ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಬಹುದಾದರೂ, ಎರಡೂ ಕಡೆಗಳಲ್ಲಿ ಅನುಮೋದನೆ ಕಾರ್ಯವಿಧಾನಗಳು ಎಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂಬುದರ ಆಧಾರದ ಮೇಲೆ ಒಪ್ಪಂದವು ಜಾರಿಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...