ಟ್ರಂಪ್ ಸುಂಕ ಪ್ರಭಾವದಿಂದ ಭಾರತ-ಇಯು ವ್ಯಾಪಾರ ಒಪ್ಪಂದ; ಕೃಷಿ ಕ್ಷೇತ್ರಕ್ಕೆ ಪೆಟ್ಟು?

Date:

ಮಂಗಳವಾರ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ‘ಮುಕ್ತ ವ್ಯಾಪಾರ ಒಪ್ಪಂದ’ ಘಟಿಸಿದೆ. ಈ ಒಪ್ಪಂದವನ್ನು ಎರಡೂ ಬದಿಯವರು ‘ಎಲ್ಲ ಒಪ್ಪಂದಗಳ ತಾಯಿ’ (ಮದರ್ ಆಫ್ ಆಲ್ ಡೀಲ್ಸ್‌) ಎಂದು ಕರೆದಿದ್ದಾರೆ. ಇದು, ಭೂಖಂಡೀಯ ವ್ಯಾಪಾರ ಸಂಬಂಧಗಳಷ್ಟೇ ಅಲ್ಲದೆ, ಭೂರಾಜಕೀಯಕ್ಕೂ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ, ‘ಇಯು ಜೊತೆಗಿನ ಒಪ್ಪಂದವು ಭಾರತಕ್ಕೆ ಹೆಚ್ಚು ಲಾಭ ತರುತ್ತದೆ’ ಎಂದು ಹೇಳಿದೆ.

ಒಪ್ಪಂದದ ಕೆಲವು ಮಾತುಕತೆಗಳಲ್ಲಿ ಟ್ರಂಪ್ ಅವರ ಸುಂಕಗಳು ಪ್ರಭಾವ ಬೀರಿವೆ. ಅಮೆರಿಕ ಜೊತೆಗಿನ ಹದಗೆಟ್ಟ ಸಂಬಂಧಗಳ ಪರಿಣಾಮವನ್ನು ನಿಭಾಯಿಸುವ ಪ್ರಯತ್ನಗಳ ಭಾಗವಾಗಿ ಈ ಒಪ್ಪಂದ ಘಟಿಸಿದೆ ಎಂದು ಹೇಳಲಾಗುತ್ತಿದೆ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ನಿರಾಕರಿಸಿದ್ದಕ್ಕಾಗಿ ಭಾರತದ ಮೇಲೆ 25% ದಂಡ ಸೇರಿದಂತೆ 50% ಸುಂಕವನ್ನು ಟ್ರಂಪ್ ಹೇಳಿದ್ದರು. ಇದೇ ಸಮದಯಲ್ಲಿ, ಗ್ರೀನ್‌ಲ್ಯಾಂಡ್ಅನ್ನು ಅಮೆರಿಕ ವಶಕ್ಕೆ ಪಡೆದುಕೊಳ್ಳುವ ಧಾವಂತವು ಯುರೋಪ್ ಒಕ್ಕೂಟವನ್ನು ಕೆರಳಿಸಿತ್ತು. ಇದೆಲ್ಲರ ಪರಿಣಾಮ, ಭಾರತ-ಇಯು ವ್ಯಾಪಾರ ಒಪ್ಪಂದ ತ್ವರಿತವಾಗಿ ಮುಗಿದಿದೆ ಎಂದೂ ಹೇಳಲಾಗುತ್ತಿದೆ.

“ಭಾರತ ಮತ್ತು ಇಯು – ಎರಡೂ ಎಂದಿಗೂ ನಿರೀಕ್ಷಿಸದ ಆಘಾತಕಾರಿ ಅಮೆರಿಕ ಸುಂಕಗಳನ್ನು ಎದುರಿಸುತ್ತಿವೆ. ಇದರಿಂದಲೇ, ಟ್ರಂಪ್ ಅಂಶವು ಒಪ್ಪಂದಕ್ಕೆ ಬಲವಾದ ಪ್ರಚೋದನೆ ನೀಡಿದೆ” ಎಂದು ಅಟ್ಲಾಂಟಿಕ್ ಕೌನ್ಸಿಲ್‌ನಲ್ಲಿರುವ ದಕ್ಷಿಣ ಏಷ್ಯಾದ ಹಿರಿಯ ಅಧಿಕಾರಿ ಮೈಕೆಲ್ ಕುಗೆಲ್ಮನ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗಾಗಲೇ, ಇಯು ಜೊತೆ ಭಾರತವು ಭಾರೀ ಪ್ರಮಾಣದ ವ್ಯಾಪಾರ ವಹಿವಾಟು ನಡೆಸುತ್ತಿದೆ. 2024ರಲ್ಲಿ 142.3 ಬಿಲಿಯನ್ ಡಾಲರ್ (13 ಲಕ್ಷ ಕೋಟಿ ರೂ.) ವ್ಯಾಪಾರ ನಡೆಸಿದ್ದು, ದಕ್ಷಿಣ ಏಷ್ಯಾದ ರಾಷ್ಟ್ರಗಳ ಒಟ್ಟು ವ್ಯಾಪಾರದಲ್ಲಿ 11.5% ಪಾಲಿನೊಂದಿಗೆ, ಅತಿದೊಡ್ಡ ಪಾಲುದಾರನಾಗಿದೆ. ಇಯು ಜೊತೆಗಿನ ವ್ಯಾಪಾರಗಳಲ್ಲಿ ಜಗತ್ತಿನಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ಅದಾಗ್ಯೂ, ಸುಮಾರು 25 ವರ್ಷಗಳಿಂದ ಸ್ಥಗಿತಗೊಂಡಿದ್ದ 7ನೇ ವ್ಯಾಪಾರ ಒಪ್ಪಂದವು ಮಂಗಳವಾರ ಪೂರ್ಣಗೊಂಡಿದೆ.

ಒಪ್ಪಂದ ಮತ್ತು ಸುಂಕ ವಿನಾಯಿತಿಗಳು

ಒಪ್ಪಂದವು ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳು ಮತ್ತು ಭಾರತದ ನಡುವೆ ಸರಕು ಮತ್ತು ಸೇವೆಗಳಲ್ಲಿ ಮುಕ್ತ ವ್ಯಾಪಾರಕ್ಕೆ ದಾರಿ ಮಾಡಿಕೊಡುತ್ತದೆ. ಇದು ಒಟ್ಟಾಗಿ ಸುಮಾರು 200 ಕೋಟಿ ಜನರ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ಗಮನಾರ್ಹವಾಗಿ, ಔಷಧೀಯ ಕ್ಷೇತ್ರದಲ್ಲಿ ಒಪ್ಪಂದವು 52.5 ಲಕ್ಷ ಕೋಟಿ ರೂಪಾಯಿ ವ್ಯಾಪಾರ ಒಡಂಬಡಿಕೆಯನ್ನು ಹೊಂದಿದೆ.

ಒಪ್ಪಂದದಿಂದಾಗಿ, ಇಯುನಿಂದ ಭಾರತಕ್ಕೆ ರಫ್ತಾಗುವ 30% ಸರಕುಗಳ ಮೇಲಿನ ಸುಂಕವು ಶೂನ್ಯಕ್ಕೆ ಇಳಿಯಲಿದೆ. ಅಲ್ಲದೆ, ಒಟ್ಟು 90% ಸರಕುಗಳ ಮೇಲಿನ ಸುಂಕವು ಶೂನ್ಯ ಅಥವಾ ಕಡಿಮೆಯಾಗಲಿದೆ. ಪರಿಣಾಮ, ಇಯುಗೆ 4.74 ಶತಕೋಟಿ ತೆರಿಗೆ ಉಳಿತಾಯಾಗಲಿದೆ.

ಗಮನಾರ್ಹವಾಗಿ, ಯುರೋಪಿನಿಂದ ಭಾರತಕ್ಕೆ ಆಮದಾಗುವ ವಾಹನಗಳ ಮೇಲಿನ ಭಾರತೀಯ ಸುಂಕವು ಮುಂದಿನ 5 ವರ್ಷಗಳಲ್ಲಿ 110%ನಿಂದ 10%ಗೆ ಇಳಿಯಲಿದೆ. ಆದಾಗ್ಯೂ, 15,000 ಯುರೋಗಳಿಗಿಂತ (16.3 ಲಕ್ಷ ರೂ.) ಕಡಿಮೆ ಬೆಲೆಯ ಕಾರುಗಳನ್ನು ಸುಂಕ ವಿನಾಯಿತಿಯಿಂದ ಹೊರಗಿಡಲಾಗಿದೆ. ದುಬಾರಿ ಕಾರುಗಳ ಮಾತ್ರವೇ ತೆರಿಗೆಯ ಲಾಭ ಪಡೆಯಲಿವೆ. ಉಳಿದಂತೆ, ಯಂತ್ರೋಪಕರಣಗಳು ಮತ್ತು ವಿದ್ಯುತ್ ಉಪಕರಣಗಳು (ಪ್ರಸ್ತುತ 44%), ರಾಸಾಯನಿಕಗಳು (22% ವರೆಗೆ) ಹಾಗೂ ಔಷಧಗಳು (11%) ಸೇರಿದಂತೆ ಕೈಗಾರಿಕಾ ಸರಕುಗಳ ಮೇಲಿನ ಸುಂಕವು ಶೂನ್ಯಕ್ಕೆ ಇಳಿಯಲಿವೆ.

ಅಂತೆಯೇ, ಭಾರತದಿಂದ ಇಯುಗೆ ರಫ್ತಾಗುವ ಸರಕುಗಳಲ್ಲಿ 90% ಸರಕುಗಳ ಮೇಲಿನ ಸುಂಕವನ್ನು ಇಯು ರದ್ದುಗೊಳಸಲಿದೆ. 7 ವರ್ಷಗಳಲ್ಲಿ ಭಾರತೀಯ 93% ಸರಕುಗಳ ಸುಂಕವು ಶೂನ್ಯಕ್ಕೆ ಇಳಿಯಲಿದೆ. ಭಾರತದ ಸಮುದ್ರ ಉತ್ಪನ್ನಗಳು (ಪ್ರಸ್ತುತ 26%), ರಾಸಾಯನಿಕಗಳು (12.8%), ಪ್ಲಾಸ್ಟಿಕ್‌ಗಳು/ರಬ್ಬರ್ (6.5%), ಚರ್ಮ/ಪಾದರಕ್ಷೆಗಳು (17%), ಜವಳಿ (12%), ಉಡುಪು (4%), ಮೂಲ ಲೋಹಗಳು (10%) ಹಾಗೂ ರತ್ನಗಳು ಮತ್ತು ಆಭರಣಗಳು (4%) ಸೇರಿದಂತೆ ಪ್ರಮುಖ ರಫ್ತುಗಳ ಮೇಲಿನ ಸುಂಕವು ಶೂನ್ಯಕ್ಕೆ ಇಳಿದಿದೆ.

ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳ ಉತ್ಪಾದಿಸುವ ವೈನ್‌ಗಳು, ಸ್ಪಿರಿಟ್‌ಗಳು, ಬಿಯರ್‌ಗಳು ಹಾಗೂ ಜಿನ್‌ಗಳ ಮೇಲಿನ ಸುಂಕವು 150%ನಿಂದ 20%-40%ಗೆ ಇಳಿಯಲಿವೆ. ಪರಿಣಾಮ, ಮದ್ಯವೂ ಅಗ್ಗದ ಬೆಲೆಗೆ ದೊರೆಯುವ ಸಾಧ್ಯತೆಗಳಿವೆ.

ಔಷಧ ವಲಯ ಸೇರಿದಂತೆ, ಅಜೈವಿಕ ಮತ್ತು ಸಾವಯವ ರಾಸಾಯನಿಕಗಳು, ರಸಗೊಬ್ಬರಗಳು, ಸೌಂದರ್ಯವರ್ಧಕಗಳು, ಸಾಬೂನುಗಳು ಮತ್ತು ಮಾರ್ಜಕಗಳ ಕ್ಷೇತ್ರದಲ್ಲಿ ಭಾರತವು ಹೆಚ್ಚು ಲಾಭ ಗಳಿಸಲಿದೆ. ಅದರಲ್ಲೂ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಪ್ರಮುಖ ಉತ್ಪಾದನಾ ಕೇಂದ್ರಗಳು, ವಿಶೇಷವಾಗಿ ಕರಾವಳಿ ರಫ್ತು ಕೇಂದ್ರಗಳು, ಯುರೋಪಿಯನ್ ಒಕ್ಕೂಟದ ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಅನ್ನು ಹೆಚ್ಚಿಸುವ ಮೂಲಕ ಗಮನಾರ್ಹವಾಗಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಒಟ್ಟಾರೆಯಾಗಿ, ಹಣಕಾಸು, ಸಮುದ್ರ ಹಾಗೂ ದೂರಸಂಪರ್ಕ ಸೇರಿದಂತೆ ಭಾರತದ 144 ಸೇವಾ ಉಪ ವಲಯಗಳಿಗೆ ಇಯು ಲಗ್ಗೆ ಇಡಲಿದೆ.

ಭಾರತೀಯ ಕೃಷಿ ಕ್ಷೇತ್ರಕ್ಕೆ ಹೊಡೆತ ಬೀಳುವ ಸಾಧ್ಯತೆ

ಎಲ್ಲದಕ್ಕಿಂತ ಮುಖ್ಯವಾಗಿ, ಭಾರತ-ಇಯು ವ್ಯಾಪಾರ ಒಪ್ಪಂದವು ಭಾರತೀಯ ಕೃಷಿ ಕ್ಷೇತ್ರವನ್ನು ಮತ್ತಷ್ಟು ಕಾಡುವ ಸಾಧ್ಯತೆಗಳಿವೆ. ಭಾರತಕ್ಕೆ ಇಯು ರಫ್ತಿನಲ್ಲಿ ಸುಮಾರು 36% ಕೃಷಿ-ಆಹಾರ ಉತ್ಪನ್ನಗಳೇ ಇರಲಿವೆ. ಈ ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತವು ಬಹುತೇಕ ಶೂನ್ಯಕ್ಕೆ ಹಾಗೂ ತೀರಾ ಕಡಿಮೆಗೆ ಇಳಿಸಿದೆ. ಪರಿಣಾಮ, ಆಲಿವ್ ಎಣ್ಣೆ, ಸಂಸ್ಕರಿಸಿದ ಆಹಾರ ಹಾಗೂ ಕೆಲವು ಹಣ್ಣುಗಳ ಮೇಲಿನ ಸುಂಕವು ತೀವ್ರವಾಗಿ ಕಡಿತವಾಗಲಿದೆ. ಇಯು ಉತ್ಪನ್ನಗಳ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅಗ್ಗದ ಬೆಲೆಗೆ ಮಾರಾಟವಾಗುವ ಸಾಧ್ಯತೆಯೂ ಇದೆ. ಇದು, ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಳೀಯ ರೈತರು ಬೆಳೆವ ಉತ್ಪನ್ನಗಳ ಮಾರಾಟ-ವಹಿವಾಟಿನ ಮೇಲೆ ನೇರ ಪ್ರಭಾವ ಬೀರಲಿವೆ.

ಕಾದು ನೋಡುವ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು

ಸದ್ಯಕ್ಕೆ, ಭಾರತ-ಇಯು ನಡುವಿನ ಒಪ್ಪಂದವನ್ನು ‘ಎಲ್ಲ ಒಪ್ಪಂದಗಳ ತಾಯಿ’ ಎಂದು ಕರೆಯುವುದನ್ನು ಅತಿಶಯೋಕ್ತಿ. ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳ ಈ ಒಪ್ಪಂದವು ಜಾಗತಿಕ ವ್ಯಾಪಾರವನ್ನು ಆರ್ಥಿಕ ಏಕೀಕರಣಗೊಳಿಸುತ್ತದೆ ಅಥವಾ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂಬ ತೀರ್ಮಾನಕ್ಕೆ ಬರಲು ಧಾವಂತ ಬೇಡವೆಂದು ವಿಶ್ಲೇಷಕರು ಹೇಳುತ್ತಾರೆ.

ಮುಖ್ಯವಾಗಿ, “ಈ ಒಪ್ಪಂದದ ಫಲಿತಾಂಶಗಳು ಅಪೂರ್ಣವಾಗಿವೆ. ಇಲ್ಲಿ, ಅನುಸರಣಾ ಕ್ರಮದ ಅಗತ್ಯವಿದೆ. ಕೃಷಿ ಕ್ಷೇತ್ರದಲ್ಲಿ ಇಯುನ ಕಾರ್ಬನ್ ಬಾರ್ಡರ್ ಹೊಂದಾಣಿಕೆ ಕಾರ್ಯವಿಧಾನ, ಇತರ ವಿಷಯಗಳಲ್ಲಿ ಅನುಸರಣಾ ಮಾತುಕತೆಗಳು ನಡೆಯುವ ಸಾಧ್ಯತೆಯಿದೆ. ಅಲ್ಲದೆ, ಯುರೋಪಿನ ಇತರ ಪ್ರಮುಖ ವ್ಯಾಪಾರ ಪಾಲುದಾರರು ತಮ್ಮ ವ್ಯಾಪಾರದ ದಿಕ್ಕು ಬದಲಿಸುವ ಸಾಧ್ಯತೆಯೂ ಇಲ್ಲ. ಅಲ್ಲದೆ, ಯುರೋಪ್‌ನ ಜವಳಿ ಮತ್ತು ಉಡುಪು ಮಾರುಕಟ್ಟೆಯಲ್ಲಿ  ಭಾರತಕ್ಕೆ ಬಾಂಗ್ಲಾದೇಶ ಸ್ಪರ್ಧೆ ನೀಡಲಿದೆ” ಎಂದು ಅಟ್ಲಾಂಟಿಕ್ ಕೌನ್ಸಿಲ್‌ನ ಸದಸ್ಯ ಮಾರ್ಕ್ ಲಿನ್ಸ್ಕಾಟ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...