ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಶುರುವಾಗಿದ್ದು ದೇಶದ ಹೂಡಿಕೆದಾರರು ಕೆಲವೇ ನಿಮಿಷಗಳಲ್ಲಿ 8 ಲಕ್ಷ ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ಸೆನ್ಸೆಕ್ಸ್ 2,743 ಅಂಶಗಳ ಕುಸಿತದೊಂದಿಗೆ ಅಂದರೆ ಶೇ 3.34ರಷ್ಟು ಕುಸಿದು 78,543ರಲ್ಲಿ ವಹಿವಾಟು ಆರಂಭಿಸಿತ್ತು. 10 ಗಂಟೆ ಹೊತ್ತಿಗೆ ಕೊಂಚ ಚೇತರಿಸಿಕೊಂಡು 80,457ರಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ, ಜಾಗತಿಕ ತಲ್ಲಣಗಳ ಪರಿಣಾಮದಿಂದ ಸೂಚ್ಯಂಕ ಭಾರಿ ಏರಿಳಿತ ಅನುಭವಿಸಿತು.
ಇದನ್ನು ಓದಿದ್ದೀರಾ? ಇರಾನ್‌ನ ‘ಉಕ್ಕಿನ ಮನುಷ್ಯ’ ಆಯತೊಲ್ಲಾ ಅಲಿ ಖಮೇನಿ
ಕೆಲ ವರದಿಗಳ ಪ್ರಕಾರ, ಮಾರುಕಟ್ಟೆ ಆರಂಭವಾಗಿ ಕೆಲವೇ ನಿಮಿಷಗಳಲ್ಲೇ ಹೂಡಿಕೆದಾರರು ₹8 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಬಿಎಸ್‌ಇಯ ಒಟ್ಟಾರೆ ಮಾರುಕಟ್ಟೆ ಬಂಡವಾಳ ₹463.50 ಲಕ್ಷ ಕೋಟಿಯಿಂದ ₹455 ಲಕ್ಷ ಕೋಟಿಗೆ ಕುಸಿದಿದೆ.
ನಿಫ್ಟಿ ಕೂಡ 500 ಅಂಶ ಕುಸಿತದೊಂದಿಗೆ 24,645ರಲ್ಲಿ ವಹಿವಾಟು ಆರಂಭಿಸಿತ್ತು. ಸೋಮವಾರದ ಷೇರುಪೇಟೆ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 1,048.34 ಅಂಶ ಕುಸಿದು 80,238ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ನಿಫ್ಟಿ 312 ಅಂಶ ಕುಸಿದು 24,865 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.





