ಸೊಮಾಲಿ ಕಡಲ್ಗಳ್ಳರಿಂದ 19 ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

Date:

ಭಾರತೀಯ ಯುದ್ಧನೌಕೆ ಅರಬ್ಬಿ ಸಮುದ್ರದಲ್ಲಿ ಎರಡನೇ ಯಶಸ್ವಿ ಕಡಲ್ಗಳ್ಳರ ವಿರೋಧಿ ಕಾರ್ಯಾಚರಣೆ ನಡೆಸಿ ಶಸ್ತ್ರಸಜ್ಜಿತ ಸೊಮಾಲಿ ಕಡಲ್ಗಳ್ಳರಿಂದ 19 ಪಾಕಿಸ್ತಾನ ಪ್ರಜೆಗಳನ್ನು ರಕ್ಷಿಸಿದೆ.

ಐಎನ್‌ಎಸ್ ಸುಮಿತ್ರ ನೌಕಾ ಪಡೆ ಪಾಕ್‌ನ ಮೀನುಗಾರಿಕಾ ಹಡಗನ್ನು ಅಪಹರಿಸಲು ಯತ್ನಿಸಿದ್ದ ಸೊಮಾಲಿ ಕಡಲ್ಗಳ್ಳರಿಂದ 19 ಪಾಕಿಸ್ತಾನ ಪ್ರಜೆಗಳನ್ನು ರಕ್ಷಿಸಿ 11 ಕಡಲ್ಗಳ್ಳರನ್ನು ಬಂಧಿಸಿದೆ.

ಇರಾನಿ ಧ್ವಜ ಹೊಂದಿದ್ದ ಮೀನುಗಾರಿಕಾ ಹಡಗಿನ ಮೂಲಕ ಸೊಮಾಲಿ ಕಡಲ್ಗಳ್ಳರು ಸೊಮಾಲಿಯಾ ಪೂರ್ವ ಕರಾವಳಿ ಹಾಗೂ ಏಡನ್‌ ಕೊಲ್ಲಿಯಲ್ಲಿ ಪಾಕ್‌ನ ಇಮಾನ್‌ ಹಡಗನ್ನು ಭಾನುವಾರ ರಾತ್ರಿ ಅಪಹರಿಸಲು ಯತ್ನಿಸಿದ್ದರು. ಭಾರತದ ಐಎನ್‌ಎಸ್ ಸುಮಿತ್ರ ನೌಕಾ ಪಡೆ ಕಡಲ್ಗಳ್ಳರ ದುಷ್ಕೃತ್ಯಕ್ಕೆ ತಡೆಯೊಡ್ಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ

“ಇರಾನಿ ಧ್ವಜದಾರಿ ಹಡಗಿನಲ್ಲಿ ಆಗಮಿಸಿದ್ದ ಕಡಲ್ಗಳ್ಳರು ಪಾಕ್‌ನ ಎಂವಿ ಇಮಾನ್‌ ಹಡಗನ್ನು ಅಪಹರಿಸುವ ಯತ್ನವನ್ನು ಐಎನ್‌ಎಸ್ ಸುಮಿತ್ರ ತಡೆಯೊಡ್ಡಿದೆ. ಮತ್ತೊಂದು ಅಪಹರಣ ಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 24ರಂದು ಪಿಎಂ 29ರ ಎಫ್‌ವಿ ಹಡಗನ್ನು ಇದೇ ರೀತಿ ಅಪಹರಿಸಲು ಯತ್ನಿಸಿದಾಗ ಐಎನ್‌ಎಸ್‌ ಸುಮಿತ್ರ ಸಿಬ್ಬಂದಿ ಅಪಹರಣ ಯತ್ನವನ್ನು ತಡೆದು ಹಡಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದರು. ಜನವರಿ 5 ಹಾಗೂ ಕಳೆದ ವರ್ಷದ ಡಿಸೆಂಬರ್ 23 ರಂದು ಅರಬ್ಬಿ ಸಮುದ್ರ ಕರಾವಳಿಯಲ್ಲಿ ಇದೇ ರೀತಿ ಕಡಲ್ಗಳ್ಳರು ಅಪಹರಣಕ್ಕೆ ಯತ್ನಿಸಿದಾಗ ಭಾರತೀಯ ನೌಕಾಪಡೆ ತಡೆಯೊಡ್ಡಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...